Home / ಕವನ / ಕವಿತೆ / ದೇಹ ತುಂಡಾಯ್ತು !

ದೇಹ ತುಂಡಾಯ್ತು !

ಮುಂದೆ ಇಡುವ ಅಡಿಯು ಜಾರಿ
ಓಡಿ ಬರುವ ಗಾಡಿ ಹಾರಿ
ತುಂಬಿತೇನೋ ಕೆಂಪು ರಂಗು ದಾರಿ
ಹಾ ಬಿದ್ದ ಜೀವ ಉಸಿರ ಕಾರಿ !

ಬಾಳಿಗೆಲಿವ ಧ್ಯೇಯ ಬಲಿ ಆಯ್ತು
ನಲಿವ ಹೊಸ ದೀಪ ನಂದಿ ಹೋಯ್ತು
ಎಲುಬು ಮಾಂಸ ಸಿಡಿದು ಹೋಳಾಯ್ತು
ತುಂಬಿ ಬೆಳೆದ ದೇಹ ತುಂಡಾಯ್ತು !

ಹರೆಯ ಮಗನ ನಂಬಿ ನಡೆದ
ತಾಯ ಕರುಳು ಹಾಯ್ ಭಸ್ಮವಾಯ್ತು
ನೀರ ನಡುವೆ ನಲಿದು ನಡೆದ
ಬಾಳ ಡೋಣಿ ಮುಳುಗಿ ಹೋಯ್ತು !

ಎದೆಯ ಒಡೆದು; ಗಾಡಿ ಓಡಿ
ಒಡಲ ಸೀಳಿ; ಜೀವ ಹೀರಿ
ಬೆಳೆವ ಬಾಳು ಹಾಳು ಮಾಡಿ
ಮೊಳಗಿತೇನೊ ಅಂತ್ಯ ಭೇರಿ !

ಅಳಲು ಉಕ್ಕಿ; ಕಡಲು ಕೂಡಿ
ಮುಸುಕಿತದೋ ಪ್ರಾಣ ಬೇಡಿ
ಎದೆಯ ಕೋಡಿ; ಮಣ್ಣ ರಕ್ತಮಾಡಿ
ಹರಿಯಿತಗೊ ಬಲಿಯ ನೀಡಿ !

ಸೆಳಕು ಮಿಂಚಾಗಿ ಹೋಯ್ತು ಸುದ್ದಿ
ತಾಯ ಹೃದಯ ಕರುಳ ತಾಕಿ
ಬೆಳೆವ ಮಗನ ನಂಬಿತ್ತು ಬುದ್ದಿ
ಹಾಯಿ ಹೋಳಾಯ್ತು ವಿಧಿಯು ತಾಕಿ!

ಕಂಡು ಕೇಳಿ ಹಿಂಡು ಜನ ಕೂಡಿತು
ನೆಲಕೆ ಬೆರೆತ ರಕ್ತ ಕಂಡಿತು
ಕಣ್ಣು ಮನವು ಗುಂಗು ಹಿಡಿಸಿತು
ಅಯ್ಯೋ ವಿಧಿಯು ಕೆಡಿಸಿತು!

ನನಸು ಊಹೆ ಕನಸಿಗಾಯಿತು
ಮುದಿಯ ತಾಯ ಕರುಳು ಕೊಚ್ಚಿತು
ಬಂದ ನಿಂದ ಸಂದಣಿಯು ಮಂದವಾಯಿತು
ದೈವ ಬಿಡದೆ ಗುಡುಗ ಹಾಕಿತು !
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...