ಗೂಡಿಂದ ಗೂಡಿಗೆ

ನಿನ್ನೆ ಮೊನ್ನೆಯೇ ಮದುವೆಯಾದಂತಿದೆ
ಆಕೆಯ ಕೈಮೇಲಿನ ಮೆಹೆಂದಿ, ಹಸಿರುಬಳೆ
ಕಾಲುಂಗುರ ಗರಿಗರಿಯಾದ ಸೀರೆ-
ಆತನ ಮುಂಗೈ ರೇಶ್ಮೆದಾರ
ಮದುವೆಯ ಥ್ರೀ ಪೀಸ್ ಸೂಟು.

ಹನಿಮೂನಿಗೆ ಸಮಯವೇ ಇಲ್ಲವೆಂದಾಗಿದ್ದರೆ
ಇಲ್ಲಾದರೂ ಒಂದಿಷ್ಟು ಪ್ರೀತಿ ಮಾತು
ಮುತ್ತು ನಗು ಕೊಡಬಹುದಾಗಿತ್ತೇನೋ
ಹೇಳುತ್ತಲೇ ಇದ್ದಾನೆ ತನಗರಿವಿಲ್ಲದಂತೆ
ಅಮೆರಿಕದ ಗಡಿಬಿಡಿ ಜೀವನ
ಆಫೀಸು, ಶಾಪಿಂಗು, ಮನೆಗೆಲಸ
ಡ್ರೆಸ್ಸು, ಫುಡ್ಡು, ನೇಬರು ಎಂದೇನೆಲ್ಲ…..
ಆಶ್ಚರ್ಯ ಭಯ ಕಾತರದ ಆ ಹುಡುಗಿ
ಹೂಂ ಗುಡುತ್ತಲೇ ಅಮೆರಿಕದ ಕನಸಿನಲ್ಲಿ
ಹುಬ್ಬುಗಳೊಳಗೇ ಕಳವಳದ ಮಾತುಗಳು.

ನಾಚಿಕೆಯ ಅವಳ ಕೆನ್ನೆಯ ಗುಳಿ
ನಗು ನೋಡಬೇಕೆಂದ ನಾನು…..
ಆತ ನ್ಯೂಯಾರ್ಕಿನ ತನ್ನ
ವೇಳಾಪತ್ರಿಕೆ ಸಿಸ್ತು ಅದೂ ಇದೂ ಹೇಳಿ
ಸುಸ್ತಾಗಿಸಿದ್ದ ಆಕೆಗೆ ನಾಳೆ ಬೆಳಿಗ್ಗೆಯೇ
ಆಫೀಸಿನಲ್ಲಿರಬೇಕೆಂದು ಹೇಳಿ
ಅವಳಿಗೆ ಹೊದೆಸಿ ತಾನೂ ಸೀಟಿಗೊರಗಿದ
ಗೂಡಿಗಿನ್ನೂ ತಲುಪದ ಹುಡುಗಿಯ
ವಿದೇಶಿ ಕನಸು….
ಬಿಟ್ಟ ಕಣ್ಣು ಬಿಟ್ಟಂತೆಯೇ ಆತಂಕದ ಹುಡುಗಿ
ನಿರ್ಣಯ ಸರಿಯೋ ತಪ್ಪೊ…..
ಬೆವರೊರೆಸುತ ಸೀಟಿಗೊರಗಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಚ್ಚರ!
Next post ಪೂಜೆ ಪ್ರಸಾದ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…