Home / Kannada

Browsing Tag: Kannada

ಬಸವನ ಹುಳ ಯಾವಾಗಲೂ ತನ್ನ ದಾರಿಯ ಗುರುತು ಬಿಟ್ಟುಕೊಂಡೇ ಮುಂದೆ ಸಾಗುತ್ತದೆ. ಉಳಿದ ಹುಳಗಳು ತನ್ನ ದಾರಿಯಲ್ಲಿ ನಡೆಯಲಿ ಎಂದೆ? ಚರಿತ್ರೆಯಲ್ಲಿ ತನ್ನ ಹೆಸರ ಬಿಡುವೆನೆಂದೆ? ಅಥವಾ ಬೇಕಾಗಿ ಬಂದರೆ ಹಿಂದೆ ಸರಿಯುವೆನೆಂದೆ? *****...

ಹೆಚ್ಚಿಗೇನು ಬಯಸಿರಲಿಲ್ಲ ಆ ಜನ ಅಂಬಲಿಗೆ ಅನ್ನ ಬೆರೆಸಿ ಕುದಿಸಿಟ್ಟು ಕುಡಿದರೆ ಅಷ್ಟೇ ಸಾಕು ಅಮೃತದ ಪಾನ ಒಡೆಯನ ಗದ್ದೆಗೆ ಒಂದಿಷ್ಟು ಗೊಬ್ಬರ ಎರೆದರೆ ಸಾಕು ಆದಿನ ಎಸೆದ ಎರಡಾಣೆಗೆ ತೃಪ್ತ ಮನ ಹೊತ್ತು ಮರೆ ಸರಿಯೇ ತಿಂಗಳಿಣುಕುತ್ತಿರೆ ಒಂದಷ್ಟು ಬ...

ಕಡಲ ಕಪ್ಪೊಳಗೆ ನಕ್ಷತ್ರಗಳು ಅರಳಿದ್ದವು ಒಂಟಿ ಮೋಡಗಳು ರೆಕ್ಕೆ ಬೀಸುತ್ತಿದ್ದವು, ಚಂದಿರ ಈಸುತ್ತಿದ್ದ. ಸಾವಿರ ಸಾವಿರ ಹಳ್ಳಕೊಳ್ಳಗಳು ಕಡಲನ್ನು ಹೆಣೆದವು. ಅದೇ ಕಡಲು ಹೊಳೆಯಾಗಿ ಹಾಳೆಯ ಮೇಲೆ ಹನಿದು, ಹರಿದು ಪದ್ಯವಾಯಿತು. ಕಪ್ಪು ಕಡಲ ಮೊಗದಲ್ಲಿ...

ಹೂಡುಗಾಡಿ ಬಂಡಿಗಾಡಿ ಸತ್ಯಕಾಯಕ ತೋಟಕೆ || ಬೆವರ ಹೊಳೆಯಲಿ ಜಾರಿ ಈಜದೆ ಖೀರು ಪಾಯಸ ಏತಕೆ ಹೆಂಟೆ ಪೆಂಟೆಯ ಎದೆಯ ಒಡೆಯದೆ ಗಾದಿ ಮಂಚಾ ಯಾತಕೆ ಕಲ್ಲು ಮಣ್ಣಿನ ಹಣ್ಣು ಹುಡಿಯಲಿ ಕಣ್ಣು ಪಟಪಟ ತೋಯಲಿ ಮೈಯ ಕೂದಲ ಕುಳಿಯ ಹೊಂಡದಿ ಬೆಮರು ಚಟಚಟ ಸಿಡಿಯಲಿ ...

ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. (ಹುಟ್ಟಿನಿಂದ ಶೂದ್ರನಾಗಿ, ತನ್ನ ಕರ್ಮಾಧಿಕಾರದ ನಿರ್ವಹಣೆಯಿಂದ ದ್ವಿಜನಾಗಿ, ವ...

ಹತ್ತು ದಿನದಿಂದ ಊರಲ್ಲಿ ರಚ್ಚಿಟ್ಟು ರಾಚುತ್ತಿದೆ ಮಳೆ ಬಡಿದಂತೆ ನೆಲಕ್ಕೆ ಏಕಕಾಲಕ್ಕೆ ಸಹಸ್ರಮೊಳೆ! ಊರಿನ ಕೆನ್ನೆಗೆ ಪಟಪಟ ಬಾರಿಸಿ ರೇಗಿಸಿ ಛೇಡಿಸಿ ಕೂಗಿ ತರಿಸುತ್ತಿದೆ ಎಲ್ಲರ ಎದೆಯಲ್ಲೂ ದಿಗಿಲು ತಿಂಗಳ ಹಿಂದೆ ಮಾತೇ ಬರದೆ ಉಗ್ಗುತ್ತಿದ್ದ ಕಪ್...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...