ಬೆಳಕು

ಮನೆಯ ದೀಪ ಹೆಣ್ಣು ಸಂಸಾರಕ್ಕೆ ಅವಳೇ ಕಣ್ಣು ಕೊಳೆ ಜಾಡಿಸಿ ಮನೆಯ ತಮ ಓಡಿಸಿ ಮನದ ಹಂಡೆ ಒಲೆಗೆ ಉರಿಹಚ್ಚಿ ನೀರ ಹೊಯ್ದು ಮನೆ ಮಂದಿಗೆಲ್ಲಾ ಎಣ್ಣೆ ಮಜ್ಜನ ಗೈದು ಹಿಂಡಲಿ ಕಾಯಿ ಮೆಟ್ಟಿ...

ಅಳಿವು-ಉಳಿವು

ಬೀಜ ಬೇರೂರಿ ಕುಡಿ ಇಡುತ್ತಿರುವಾಗಲೇ ಹತ್ತಿಕೊಂಡಿತ್ತು ಗೆದ್ದಲು ಬಿಡಿಸಿಕೊಳ್ಳಲು ಹರಸಾಹಸಗೈದರೂ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಗೆದ್ದಲು ಹಿಡಿದ ಬೀಜ ಸಾಯುವುದೇ ದಿಟ ಎಂದುಕೊಂಡರೂ ಹಾಗಾಗಲಿಲ್ಲ ಉಳಿವಿಗಾಗಿ ಹೋರಾಟ ತುಸು ಉಸಿರುವವರೆಗೂ ಚಿಗುರಿಕೊಂಡಿತು ಬೀಜ ಮೆಲ್ಲನೆ...

ಪರಂಪರೆ

ಮೂರು ಕಾಸಿನ ಗಂಧ ಬೊಟ್ಟು ಮೊಣಕಾಲು ಮಾರುದ್ದ ಸೀರೆ ತಲೆ ತುಂಬಾ ಸೆರಗು ತಲೆ ಬಾಗಿಲಲೇ ನಿಂತು ಪತಿದೇವ ನಿರೀಕ್ಷೆ ನನ್ನಜ್ಜಿ ಪರಂಪರೆ ಬಳೆಯಂಡಿಯ ದೊಡ್ಡ ಬಿಂದಿಯಿಟ್ಟು ಆರು ಮಾರುದ್ದ ಸೀರೆಯುಟ್ಟು ಮೈತುಂಬಾ ಸೆರಗ...

ವ್ಯತ್ಯಾಸ

ಸ್ವಚ್ಚಂದ ಬೆಳಕಿನಲಿ ಅಟ್ಟ ಅಡುಗೆಯ ಉಂಡು ಆಕಾಶ ಭೂಮಿಗಳೇ ನೆಲ ಮಾಡುಗೊಂಡು ನಾಳೆ ಎಂಬುದ ಮರೆತು ಇಂದಿಂದೆ ಬದುಕುವರು ಅಲೆಮಾರಿ ಜನರು ಚಿಂತೆಯಂಬ ಬೊಂತೆಗೆ ಒಂದೊಂದು ಗುಂಡು ಗೋಲಿಯ ಹೊಡೆದು ತಣ್ಣೆಯನ್ನಕ್ಕೆ ಉಪ್ಪು ಮೆಣಸು...

ಯಕ್ಷ ಪ್ರಶ್ನೆಗಳು

ಜಟಿಲ ಬದುಕಿನ ಯಕ್ಷ ಪ್ರಶ್ನೆಗಳು ಹೊಡೆಮರಳಿ ಕಾಡುವವು ಯಾಕೋ? ಸಮೃದ್ಧ ಸಂಸಾರ ಎಂದುಕೊಂಡರೂ ಅತೃಪ್ತಿ ಅನಾಸಕ್ತಿ ಮುಲುಗುವುದು ಯಾಕೋ? ಬಿಗಿವ ಬಿಗಿಸುವ ಬಗಿವ ಬಗ್ಗಿಸುವ ಸಂಬಂಧ ಅನುಬಂಧಗಳು ಬಾಯಾರಿ ಕಾಂಚಣಕ್ಕೆ ಕುಣಿಯುವವು ಯಾಕೋ? ಜನನ...

ಪೊಸಗಾರ

ಮೋಡನ ಮನೆಯೊಳಗೆ ಸರಿಗಮ ಸ್ವರ ಏರಿಳಿತ ಕಪ್ಪು ಬಿಳಿ ಚಿತ್ತಾರ ಆಗಾಗ ನೇಸರನ ಕಣ್ಣು ಮುಚ್ಚಾಲೆ ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು ಸುಳಿಗಾಳಿ ಬೀಸುತಿದೆ ಬಿಸಿಲ ಕಾವಿಗೆ ಹುಡಿ ನೆಲ ಗರ್ಭದಿ ಏರಿ...

ಮೊದಮೊದಲು

ಮೊದಮೊದಲು ನನ್ನಕ್ಕನ ಕೂಡ ನಾ ಪಾಟಿ ಚೀಲವ ಹೊತ್ತು ಶಾಲೆ ಮೆಟ್ಟಿಲು ಹತ್ತಿದ ಕ್ಷಣ ಮಣಿ ಪಾಟಿಯಲ್ಲಿ ಒಂದೆರಡು ಕಾಗುಣಿತ ಕಲಿತ ದಿನ ಮೊದಮೊದಲು ನನ್ನಪ್ಪನ ಕೈಯಲ್ಲಿ ಕೈಯಿಕ್ಕಿ ನಡೆದು ದೊಡ್ಡ ದೇವನ ಜಾತ್ರೆ...

ಮಕ್ಕಳೆಂದರೆ

ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು ಮಕ್ಕಳೆಂದರೆ ತುಂಟಾಟ ಮೊಂಡಾಟಕ್ಕೆ ಏಣೆಯಾದವರು ಮೈಮನಕ್ಕೆ...

ಹೊಣೆ

ಈಗೀಗ ಅವಳು ನಾಚಿಕೊಳ್ಳುವುದಿಲ್ಲ ಮೊದಲಿನಂತೆ ನೀರಾಗುವುದಂತೂ ದೂರದ ಮಾತೇ ಸರಿ ಮೂಗುತಿಯ ನತ್ತು ಅವಳೀಗೀಗ ಭಾರವೆನಿಸುತ್ತಿಲ್ಲ ಮುಂಗುರುಳು ನಲಿದು ಮುತ್ತಿಕ್ಕುವುದಿಲ್ಲ ಗಲ್ಲಗಳ ಚುಂಬಿಸಿ ಅವಳ ನುಡಿಯಲ್ಲಿ ಅಂದಿನ ಹುಡುಗಾಟವಿಲ್ಲ ಕಣ್ಣುಗಳಲ್ಲಿ ಆಗೀನ ಚಂಚಲತೆಯಿಲ್ಲ ನೆಟ್ಟ...

ನನ್ನ ತಂದೆ

ಎಲ್ಲರಂತಿರಲಿಲ್ಲ ನನ್ನ ತಂದೆ ಹೆಣ್ಣ ಕರುಳ ಗಂಡು ಜೀವ ಮಕ್ಕಳೆಂದರೆ ಅವಗೆ ಮರಳು ಮಾಯೆ ಗುರಿಯ ತತ್ವದ ತಿಳಿಸಿ ದಿಟ್ಟತನವನು ಕಲಿಸಿ ಬದುಕು ಚಾತುರ್ಯ ಬೆರೆಸಿ ಬೆಳಸಿದನು ಪುಟ್ಟ ಕೈಗಳ ಹಿಡಿದು ಭರವಸೆಯ ಒತ್ತಿದನು...