Home / Chintamani Kodlikere

Browsing Tag: Chintamani Kodlikere

ನಿನ್ನೆ ನಾನು ಬರಲಿಲ್ಲ ಯಾಕೆಂದರೆ ಹೆಂಡತಿಗೆ ರಜ ಅಥವಾ ನಿನ್ನೆ ನಾನು ಬಂದಿದ್ದು ಯಾಕೆಂದರೆ ಕೇಳಲಿಕ್ಕೆ ರಜ ಅಥವಾ ಬಂದೂ ಬರದಂತಿದ್ದೆ ಯಾಕೆಂದರೆ ಹಾಗಿರುವುದೇ ಮಜ ಸಾಕು ಮಾಡಿ ಕಾರಣ ಮೀಮಾಂಸೆ ಕನ್ನಡಿ ನೋಡಿಕೊಳ್ಳಿ ಮೂಗಿಗೆ ಮಸಿ ಬಡಿದಿದೆ, *****...

ನಿನ್ನೆ ನೀವು ಬರಲಿಲ್ಲ ಯಾಕೆ ? ಅಥವಾ ಬಂದಿದ್ದಿರಿ ಯಾಕೆ ? ಅಥವಾ ಬಂದೂ ಬರದಂತಿದ್ದಿರಿ ಯಾಕೆ ? ಎಂದೆಲ್ಲ ಕೇಳುತ್ತ ನಿಲ್ಲಬೇಡಿ ನಡೆಯಿರಿ ಆಫೀಸಿಗೆ ಹೊತ್ತಾಯಿತು. *****  ...

ನಾಯಿಗಳಿವೆ ಆದರೆ ಎಚ್ಚರಿಕೆ ಯಾಕೆ ? ಯಾರಿಂದ ? ಯಾರಿಗೆ ? ನಾಯಿಗಳು ಇದನ್ನೋದಿ ಅಂಜಿ ಓಡಲಾರವು ಅಥವಾ ಅಂಜಲು, ಓಡಲು ಇದನ್ನು ಓದಲಾರವು ಹೆದರುವ ಕುಳಗಳಿಗೆ ಬೊಗಳುವ ನಾಯಿಯೇ ಸಾಕು ಹಾಗಿರುವಾಗ ಈ ಬೋರ್ಡೇಕೆ ಬೇಕು ? ಹಾಗೆಂದು ಈ ಗೇಟು ತೆರೆದು ನಾನು...

ಮೊದಲು ಆಕಾಶವಿತ್ತು, ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು ಆದರೆ ಕಾಲುಗಳಿರಲಿಲ್ಲ ಬ್ರಹ್ಮಾಂಡದ ಮೇಲೆ ತೇಲಾಡುತ್ತಿತ್ತು ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ ಜಗವೆಲ್ಲ ಖಾಲಿ ಇತ್ತು ನೀನು ಕಂಡೆ ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು, ಹೊಳಪಿತ್ತ...

ಇನ್ನೂ ಹತ್ತಿರ ಇನ್ನೂ ಹತ್ತಿರ ಬರುತ್ತಿರುವೆ ಕಾಣಲಾರಂಭಿಸಿರುವೆ ಇನ್ನೂ ಎತ್ತರ ಇನ್ನೂ ಎತ್ತರ ಆದ್ದರಿಂದ ಸ್ವಲ್ಪ ದೂರ ಹೋಗು ಅಥವಾ ಸ್ಥಲ್ಪ ಬಾಗು ಅಯ್ಯೋ ನನ್ನ ಭುಜಕ್ಕೆ ತಾಗುತ್ತಿದೆ ನಿನ್ನ ಕಮಂಡಲ ಮೂಗು ನಿನ್ನ ಎತ್ತಿರಕ್ಕಿಂತ ನನ್ನ ತಗ್ಗಿನ ಭೀ...

ಕೆಲವರು ಕಾಲದ ಜೊತೆಗೆ ಸರಳರೇಖೆಯ ಹಾಗೆ ಬೆಳೆಯಬಲ್ಲರು ಕೃಷ್ಣನ್ ಕುಟ್ಟಿ ಬೆಳೆದಿದ್ದು ಬೇರೆಯ ಥರ ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ ಹದಿನೈದು ವರ್ಷದ ಹುಡುಗ ತ್ರಿವೇಂದ್ರಮ್ ಸಮೀಪದ ಹುಡುಗ ತ್ರಿವೇಂದ್ರಮ್ ತಲುಪಿದ ಹುಡುಗ ತ್ರಿವೇಂದ್ರಮ್‍ನಲ್ಲಿ ನಿಂ...

ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು. ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು. ನಮ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...