ನಡೆಯದೆಡುವುದನೆಂತು ವಿಜ್ಞಾನವೆನ್ನುವುದು?

ನಡೆಯುವೊಡೆ ಎಡವಿದೊಡದು ಸಹಜ ನೋವಿನೊಡೆ ಕಲಿವ ನಲಿವುಂಟಲ್ಲಿ ನಡೆಯದವನೆಡವಿದೊಡೆ ನಡೆವವನು ನೋಯುವಾಧುನಿಕ ಸ್ಥಿತಿಯೊಳಗೆ ಕೃಷಿ ತಜ್ಞ ನೆಡವಿನಲಿ ಕೃಷಿಕ ತಾ ನೋಯುತಿಹ - ವಿಜ್ಞಾನೇಶ್ವರಾ *****
ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಅಯ್ಯಾ ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ ಬಿಚ್ಚಿ ಬೀಸರವಾಯಿತ್ತೆನ್ನ ಮನ ಹೊಳಲ ಸುಂಗಿಕಗನಂತೆ ಹೊದಕುಳಿಗೊಂಡಿತ್ತೆನ್ನ ಮನ ಎರಡೆಂಬುದ ಮರೆದು ಬರಡಾಗದೆನ್ನ ಮನ ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನಾ [ಬೀಸರ-ವ್ಯರ್ಥ, ಹೊಳಲ ಸುಂಕಿಗ-ನಗರದಲ್ಲಿರುವ...

ಲಾಭವದಾರಿಗೊ? ರಸ ಗೊಬ್ಬರವಿದ್ಯಾಕೋ?

ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ - ವಿಜ್ಞಾನೇಶ್ವರಾ *****
ವಚನ ವಿಚಾರ – ನೀರಿನಂಥ ಮನಸ್ಸು

ವಚನ ವಿಚಾರ – ನೀರಿನಂಥ ಮನಸ್ಸು

ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್‍ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ [೫ನೆಯ ಸಾಲು: ಓದಿನ ಅನುಕೂಲಕ್ಕೆ ಹೀಗೆ ಬಿಡಿಸಿಕೊಳ್ಳಿ:...

ಬೋರಿನಾಳದಿಂದೆಂತೆತ್ತುವುದೋ ಕೃಷಿಯನ್ನು?

ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ - ವಿಜ್ಞಾನೇಶ್ವರಾ *****
ವಚನ ವಿಚಾರ – ಅತಿಮಥನ

ವಚನ ವಿಚಾರ – ಅತಿಮಥನ

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ ದಿತಿಗೆಟ್ಟೆ ನಾನು ಅದರಿಂದ ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ ಕಪಿಲಸಿದ್ಧಮಲ್ಲಿಕಾರ್‍ಜುನಾ [ಅತಿಮಥನ- ಅತಿಯಾದ ವಿಶ್ಲೇಷಣೆ, ದಿತಿಗೆಟ್ಟೆ-ಧೃತಿಗೆಟ್ಟೆ,...

ನೋವಿಲ್ಲದೌಷಧವಿಲ್ಲದಾರೋಗ್ಯ ಮೇಲಲ್ಲವೇ?

ಸಾವಯವ ಜೀವ ಕೋಟಿಗದೇ ಸಾವ ಯವದೊಳನ್ನ ಗೊಬ್ಬರವಿಕ್ಕದಲೆ ನಿರವ ಯವವನಿಟ್ಟರದು ತುರ್ತು ಸ್ಥಿತಿಯೆಂದಾಸ್ಪತ್ರೆ ಯೊಳು ಕೃತಕ ರಕುತವ ಕೊಟ್ಟಂತದುವೆ ಜೀವನವೆಂದೊಡದಕಿಂತ ಮೂರ್ಖತೆಯೇನು? - ವಿಜ್ಞಾನೇಶ್ವರಾ *****
ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ ಮನಸುಳ್ಳವರು ನೀವು ಪುಣ್ಯಗೈದಿರವ್ವಾ ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ ಕನಸಿನ್ನೆಲ್ಲಿ ಬಹುದವ್ವಾ [ದಿಟವಾದಡೆ-ನಿಜವಾದರೆ] ಉರಿಲಿಂಗದೇವನ ವಚನ. ತನ್ನನ್ನು ಹೆಣ್ಣು ಎಂದು ಭಾವಿಸಿಕೊಂಡು...

ಯೂರಿಯಾದಿಂದೇರಿದ್ದು ವರಿಯಾ? ಇಳುವರಿಯಾ?

ತರತರದ ಮಲ ಮೂತ್ರ ತರಗೆಲೆಯನುಂಬೆಮ್ಮ ಧರೆಗಿಲ್ಲವಾ ನೈಲಾನು ಪ್ಲಾಸ್ಟಿಕ್‌ಗಳನರಗಿಸುವ ಶಕುತಿ ಜ್ವರ ಬೆಂಕಿಯೇ ಬೇಕದಕೆ, ಮೊದಲೊಳದರ ತ ಯಾರಿಗಾ ಮೇಲೆ ವಿಲೆವಾರಿಗೇರಿಹುದು ಧರೆಯುರಿಯು ಯೂರಿಯಾ ಎಂದರದೆ ಪ್ಲಾಸ್ಟಿಕ್ಕಿನಿನ್ನೊಂದವತಾರ - ವಿಜ್ಞಾನೇಶ್ವರಾ *****
ವಚನ ವಿಚಾರ – ಇದು ಇದ್ದರೆ ಅದು

ವಚನ ವಿಚಾರ – ಇದು ಇದ್ದರೆ ಅದು

ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು ನಿನಗೆ ನಾ ನನಗೆ ನೀ ನಿನಗೂ ನನಗೂ ಬೇರೊಂದು ನಿಜವುಂಟೆ ನಿಃಕಳಂಕ ಮಲ್ಲಿಕಾರ್‍ಜುನಾ [ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲದಿರ್‍ದಡೆ-ನೀರಿಲ್ಲದಿದ್ದರೆ] ಇದು ಮೋಳಿಗೆ ಮಾರಯ್ಯನ...