ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ

ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ, ಗರ್ಭಿಣಿ ತಾಯಿಯ ಹೊಟ್ಟೆಯ ಹಾಗೆ, ನೆಲ ಅಲ್ಲಿ ಉಬ್ಬಿ ಕೊಂಡಿತ್ತು. ಅಷ್ಟು ಇಲ್ಲಷ್ಟು, ಮನೆಯಲ್ಲಿ ಮತ್ತು ಮಲಗುವ ಮನೆಯಲ್ಲಿ ಅಲಂಕಾರಕ್ಕೆ ಇಡುವ ಹಾಗೆ, ಯಾರೂ ಕೀಳದ ಕೆಂಪು...

ಸ್ವಲ್ಪ ತಡಿ, ಮೋಡ ಹೋಗಲಿ, ಚಂದ್ರ ಬರುತ್ತಾನೆ

ಸ್ವಲ್ಪ ತಡಿ, ನೋಡ ಹೋಗಲಿ, ಚಂದ್ರ ಮತ್ತೆ ಬರುತ್ತಾನೆ. ಅಲ್ಲಿ ಕಾಣುವ ಗೋಡೆಯ ಮೇಲೆ ಬಾಗಿಲ ಸಂದಿನಿಂದ ಬಿದ್ದಿರುವ ಬೆಳಕನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ನೀನು ಹೇಗೆ ಇರಬೇಕು ಅಂದುಕೊಳ್ಳುತ್ತೀಯೋ ಹಾಗೆ ಇರುವುದಕ್ಕೆ ಆಗುವುದಿಲ್ಲ. ಚಳಿಗಾಲದಲ್ಲಿ...

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ. ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು. ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ, ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ, ನಿನಗೆ ರಾತ್ರಿ ಹೊತ್ತು...

ನಿನ್ನೆ ರಾತ್ನಿ ನಿನ್ನ ಮೇಲೆ ಸಿಟ್ಟು ಬಂದು

ನಿನ್ನೆ ರಾತ್ರಿ ನಿನ್ನ ಮೇಲೆ ಸಿಟ್ಟು ಬಂದು ರಾತ್ರಿಯನ್ನೆಲ್ಲ ಬಳಿದು ಸವರಿ ಒಂದು ಶೀಷೆಗೆ ಹಾಕಿಟ್ಟಿದ್ದೇನೆ. ಇನ್ನು ಮೇಲೆ ಸದಾ ಬರೀ ಬೆಳಕೇ ಇರುತ್ತೆ, ನೀನು ಬಚ್ಚಿಟ್ಟುಕೊಳ್ಳುವುದಕ್ಕೆ ಕೂಡಾ ಒಂದು ಚೂರೂ ಕತ್ತಲು ಸಿಗಲ್ಲ....

ನಿನಗೆ ಒಂದು ಮಾತು ಹೇಳಬೇಕು

ನಿನಗೆ ಒಂದು ಮಾತು ಹೇಳಬೇಕು. ಅದು ಏನು ಅಂತ ನಿನಗೆ ಗೊತ್ತಿದೆ ಅಂತ ಅಂದು ಕೊಂಡಿದ್ದೇನೆ. ಅದನ್ನು ನಿನಗೆ ಯಾಕೆ ಹೇಳಲ್ಲ ಅಂದರೆ ಅದನ್ನೆಲ್ಲ ನೀನು ನನಗೆ ಕೊಟ್ಟಿದ್ದೀ. ನೀನು ಕೊಟ್ಟಿರುವಷ್ಟು ಅದನ್ನು ನಾನು...
ಬದಲಾವಣೆಯ ಅರಿವು

ಬದಲಾವಣೆಯ ಅರಿವು

ನಿಜವಾದ ಏಕಾಂತ ಯಾರಿಗೆ ದೊರೆತಿದೆಯೋ ಅಂಥದ್ದು ಇದೆಯೋ ಗೊತ್ತಿಲ್ಲ. ನಾವು ಏಕಾಂತ ಎಂದು ಕರದುಕೊಳ್ಳುವುದರಲ್ಲಿ ಲೋಕ ಇದ್ದೇ ಇರುತ್ತದೆ. ಲೋಕ ಎಂಬುದು ಕೂಡ ನಾವು ಏಕಾಂತದಲ್ಲಿ ಏನೇನು ಕಲ್ಪಿಸಿಕೊಳ್ಳುತ್ತೇವೋ, ಭಾವಿಸುತ್ತೇವೋ, ಅನುಭವಿಸುತ್ತೆವೋ ಅದರ ಪತಿಫಲನವೇ...

ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ ನಾನು ಒಂದು ನಕ್ಷತ್ರ ನೀನು ಒಂದು ನಕ್ಷತ್ರ. ನಾವಿಬ್ಬರೂ ನಮ್ಮಿಬ್ಬರಿಗೆ ಮಾತ್ರ ಗೊತ್ತು. ಬೆಳಕನ್ನು ಲಕ್ಕ ಮಾಡೋಣ. ಮುಕ್ಕಾಲು ಚಂದ್ರನನ್ನು ಎಬ್ಬಿ ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ. ಇಣುಕಿನೋಡು ಏನೇನು...

ಚಿನ್ನದ ಬೆಳ್ಳಿಯ ಕೆಸರು

ಚಿನ್ನದ ಬೆಳ್ಳಿಯ ಕೆಸರನ್ನು ತೊಳೆದು ಕೊಂಡು ಬಟ್ಟೆ ಹಾಕಿಕೊಂಡು ಬರುವಷ್ಟು ಹೊತ್ತಿಗೆ ಸಮುದ್ರದ ನೀರೆಲ್ಲ ಖರ್‍ಚಾಗಿರುತ್ತದೆ ನಕ್ಷತ್ರ ಮುಳುಗಿ ಹೋಗಿರುತ್ತದೆ ಸೂರ್ಯ ಚಂದ್ರ ಸತ್ತು ಹೋಗಿರುತ್ತಾರೆ ಅಲ್ಲಿಯವರೆಗೆ ನೀನು ಕಾದಿರುತ್ತೀಯಾ ಪಾವನಾ.... *****

ಯಾರಲ್ಲಿ ಹೇಳಲಿ ಹೇಳು

ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ ಚೆಲ್ಲುವುದು ಎಂದು ಹೇಗೆ ಹೇಳು ಹೇಳು. *****