ಬಿಳಿಯ ಗೋಡೆಯಲಿ

ಬಿಳಿಯ ಗೋಡೆಯಲಿ ಬರೆದ ಅಕ್ಷರಗಳು ಮಾಯುವುದಿಲ್ಲ ಬೇಗನೆ ದಾರಿಯಲಿ ನಡೆವವರನ್ನು ನೋಡುತ್ತ ಕುಳಿತುಕೊಳ್ಳುತ್ತವೆ ಸುಮ್ಮನೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಗುತ್ತ ಹೊಗುತ್ತವೆ ಅರ್ಥವಾಗದಿದ್ದಾಗ ಪ್ರಶ್ನೆಗಳ ರೂಪದಲಿ ಬಹುಕಾಲ ಕಾಡುತ್ತವೆ ಕಾಲ ಸರಿದಂತೆ ಮಹಾಪ್ರಾಣಗಳು ಪ್ರಾಣವನ್ನೆ...

ಪೋಸ್ಟರ್ ಬರೆಯುವ ಮಂದಿ

ನವಿಲಿನ ಕಣ್ಣಿನ ಬಣ್ಣವ ಹಿಡಿದು ಮುಳುಗುವ ಸೂರ್ಯನ ಕಿರಣವ ತಡೆದು ಮಾರ್ಗದ ಮಧ್ಯೆ ನಿಲ್ಲಿಸುವವರು ಪೋಸ್ಟರ್ ಬರೆಯುವ ಅನಾಮಿಕರು ರೆಡ್ಡಿಯಂಗಡಿ ಅಟ್ಟದ ಮೇಲೆ ಬಣ್ಣ ಬಣ್ಣಗಳ ಸರಮಾಲೆ ಸಕ್ಕರೆ ಕಾರ್ಖಾನೆಯಲಿ ನಾಳೆಯಿಂದ ಸಂಪು ಅದಕೆಂದೇ...

ನನ್ನ ಸಂಕಲನ

ನನ್ನ ಸಂಕಲನವೆಂದರೆ ನದಿ ಅದರ ಕವಿತೆಗಳೆಂದರೆ ಉಪನದಿಗಳು ಅವು ಎಲ್ಲಿಂದಲೊ ಯಾವ ಮೂಲದಿಂದಲೊ ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ ಎಷ್ಟೊ ಹೊಲದಲ್ಲಿ ಹರಿದು ಬಂದಿವೆ ನನ್ನ ಸಂಕಲನವೆಂದರೆ ವೃಕ್ಷ ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು ಅವು...

ಆನೆಗಳು ಎರಡು ವಿಧ

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀತಿ ಜಗಳ ಹೋರಾಟ ಜನನ...

ಗರಗಸ

ಬೆಂಗಳೂರಿನ ಸೆರೆಮನೆಯಲ್ಲಿರುವ ಖೈದಿಗೆ ಬೇಕಾದ್ದು ಸಿಗರೇಟಲ್ಲ, ಪುಸ್ತಕವಲ್ಲ, ಪತ್ರಿಕೆಯಲ್ಲ ಮಾತಾಡಲು ಜನರಲ್ಲ, ಪ್ರೇಯಸಿಯಿಂದ ಪತ್ರವಲ್ಲ, ಬೇಕಾದ್ದು ಗರಗಸ! ಆಹ! ಅದೆಷ್ಟು ಮುದ್ದಾದ ಅಕ್ಷರಗಳಿಂದ ಮಾಡಿದ್ದು (ಬೋರ್ಹೆಸ್‌ ನ ಒಂದು ಪದ್ಯ ಓದಿ) *****

ರೂಪಮಹಲಿನ ರಾಣಿ

ರೂಪಮಹಲಿನ ರಾಣಿ! ತಂದಿರುವೆನಿದೊ ನೂಲೇಣಿ ಬಿಡಿಸಲೆಂದೆ ನಿನ್ನ ಸೆರೆ ಬಂದಿರುವೆ ಕಿಟಕಿ ತೆರೆ ಇಳಿದು ಬಾ ಒಂದೊಂದೆ ಮೆಟ್ಪಲನು ನನ್ನ ಹಿಂದೆ ಹಿಡಿ ನನ್ನ ಕೈಯ ಇದು ಕೋಳಿ ಕೂಗುವ ಸಮಯ ತಲ್ಲಣಿಸದಿರಲಿ ಮನ...

ಭಾಗ್ಯನಗರ

ಈ ಚೌಕಾಂಬದಲಿ ನಿಂತು ಕೇಳುವೆನು ನಾನು ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ? ಇಷ್ಟೆತ್ತರದಿಂದ ಕಾಣಿಸುವುದೇನು-ಜನರು ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು ಯಾರೋ ಆಡುತ್ತಿರುವ ಆಟಿಕೆಗಳಂತೆ ಮನುಷ್ಯರ ಮಾತುಗಳು ಗೊಂದಲದಂತೆ ಗಾರೆಯಲಿ...

ಹಿಮ ಮಾನವ

ನೀರಿಲ್ಲ ನೆರಳಿಲ್ಲ ಹೊರಗೆ ಕಾಲಿಡುವಂತಿಲ್ಲ ಅಂಥ ಕಡು ಬೇಸಗೆಯಲ್ಲಿ ಹಿಮಾಲಯದಿಂದೊಬ್ಬ ಹಿಮ ಮಾನವ ಹೈದರಾಬಾದಿಗೆ ಬಂದು ಕುಳಿತನು ಒಂದು ದೊಡ್ಡ ಬಂಡೆಯ ಮೇಲೆ ಅದೇನು ವಿಚಿತ್ರ! ತಣ್ಣಗಾಯಿತು ಹವೆ ಒಮ್ಮೆಲೆ ಹುಲ್ಲು ಕಮರಿದಲ್ಲಿ ನೆಲ...

ತಾರನಾಕದ ಚೌಕ

ತಾರನಾಕದ ಚೌಕದಲಿ ನಿಂತು ತಾರೆಗಳನೆಣಿಸಲಾರೆವು ನಾವು ಒಂದೆಡೆ ಮೌಲಾ‌ಆಲಿ ಬೆಟ್ಟ ಇನ್ನೊಂದೆಡೆ ಯಾದ್ಗಿರಿ ಗುಟ್ಟ ಇವುಗಳ ನಡುವೆ ಆರಿಸಬೇಕೆಂದರೆ ಅದು ನಿಜಕ್ಕೂ ಕಷ್ಟ ಬನ್ನಿ, ಕುಳಿತು ಕುಡಿಯುತ್ತ ಮಿರ್ಚಿಭಜಿ ಕಡಿಯುತ್ತ ಸಮಸ್ಯೆಯ ಬಿಡಿಸಿ ಇದು...

ಉಸ್ಮಾನ್ ಸಾಗರದ ದಂಡೆಯಿಂದ

ತದೇಕ ಚಿತ್ತದಿಂದ ಎಲಾ ಯುವಕ ನೀನು ಅದೇನ ನೋಡುತ್ತಿರುವೆ ಗಾದೆಮಾತಿನ ಮೀನ ಹೆಜ್ಜೆಗಳನ್ನೋ ಅಥವ ನೀನು ಪ್ರೀತಿಸುವ ಹೆಣ್ಣಿನ ನಿಗೂಢ ಒಳದಾರಿಗಳನ್ನೋ? ತಳಮಳಿಸುವ ಸರೋವರದ ತೆರೆಗಳ ಮೇಲೆ ತೇಲಿ ಬರುತಿರುವ ಛಿದ್ರ ಚಿತ್ರ ತಳೆಯುವುದಾವ...