ಹೇ ರಾಮ್!

ಎಲ್ಲ ನೆನಪುಗಳಿಗೆ ವಿರಾಮ ಹೋಗಿ ಬರುವೆ ರಾಮ ಇರಿಸುವೆ ನನ್ಹೆಸರ ಉರಿಸಿಕೊ ನಿನ್ನೊಳಗೆ ಹೋಗಿ ಬರುವೆ ರಾಮ.... ನಾ ಬಲ್ಲೆ ನಿನ್ನೊಲುಮೆ ಇತ್ತ ಬಿತ್ತಿ ಬೆಳೆದಿಹ ಪ್ರೇಮ ಅತ್ತ ಒತ್ತಿ ಸುತ್ತಿಹ ನೇಮ ಕೊರಗದಿರು...

ಅರ್‍ಥವಾಗುತ್ತಿಲ್ಲ

ಹೂವು ಮುಳ್ಳಿನ ಬಗ್ಗೆ ಮುಳ್ಳು ಹೂವಿನ ಬಗ್ಗೆ ಏನು ಹೇಳುತ್ತಿದೆಯೋ ಅರ್‍ಥವಾಗುತ್ತಿಲ್ಲ. ಹಗಲು ರಾತ್ರಿಯ ಬಗ್ಗೆ ರಾತ್ರಿ ಹಗಲಿನ ಬಗ್ಗೆ ಏನು ಹೇಳುತ್ತಿದೆಯೊ ಅರ್‍ಥವಾಗುತ್ತಿಲ್ಲ. ನಗು ಅಳುವಿನ ಬಗ್ಗೆ ಅಳು ನಗುವಿನ ಬಗ್ಗೆ ಏನು...

ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು|| ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ...

ದುಃಖ

ಮುಳ್ಳು ಬಿತ್ತಿದ ಕೈಗೆ ಹೂವು ನೀಡಕ್ಕ.... ಹಾವು ಹೆಡೆ ಬಿಚ್ಚಿದರೆ ಹಾಲು ನೀಡಕ್ಕ ಸೀದ ಮಡಿಕೆಗೂ ದುಃಖ ಸುಟ್ಟ ಕಟ್ಟಿಗೆಗೂ ದುಃಖ ಬೆಂದ ಬೆಳ್ಳಿಯಂತೆ ಬದುಕು ಕಾಣಕ್ಕ..... ||ಮುಳ್ಳು|| ಉದುರಿದ ಎಲೆಗಳಿಗೂ ದುಃಖ ಅದುರಿದ...

ಎಲ್ಲ ಹುಡುಗಿಯರ ಕನಸು

ಅವ್ವ ಕೇಳೇ ನಾನೊಂದ ಕನಸ ಕಂಡೇ.... ಅವ್ವ ಕೇಳೇ ಕನಸೊಂದ ಕಂಡೆನೆ.... ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು....

ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಅವ್ವ.... ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ ಮುದ್ದು ಮುದ್ದಾಗಿ ಮಾತಾಡಿ ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ ಹೂವು, ಎಲೆ, ಗಂಧ ಗಾಳಿಯ ಗಮನ ಎತ್ತೆತ್ತಲೋ ಸೆಳೆದು ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ ನದಿಯೂ...

ಯಾವುದು ಇಷ್ಟ?

ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವ ಬಣ್ಣ ಇಷ್ಟ? ಗೊರಟೆ, ಗುಲಾಬಿ, ಸೇವಂತಿಗೆ ದಾಸವಾಳ, ಕನಕಾಂಬರ, ಮಲ್ಲಿಗೆ ಹೆಣೆದು ನಿಂತವು ಅನ್ನಿಸಿತು: ಆಯ್ಕೆ ಬಹಳ ಕಷ್ಟ. ೨ ಹುಲಿ,...

ಕಾಗೆ ಮತ್ತು ಕೋಗಿಲೆ

ಅಚ್ಚಚ್ಚು ಬೆಲ್ಲದಚ್ಚು ಅಲ್ಲಿ ನೋಡು ಇಲ್ಲಿ ನೋಡು ಸಂಪಂಗಿ ಮರದಲ್ಲಿ ಕಾಗೆ ನೋಡು.... ಗೆಳತಿ ಗುಣುಗುಣಿಸಿದಳು. ನಾನು ನೋಡಿದೆ: ಮರದ ಮೇಲೆ ಕುಳಿತುಕೊಂಡು ಹುಳುವೊಂದನ್ನು ಅವುಚಿ ಹಿಡಿದು ಕಾಗೆ ಕೂಗುತ್ತಿತ್ತು. ಕಾ.... ಕಾ..... ಕಾ.......

ಮುಗಿಯದ ಕತೆ

ಅವನು ರಾಮನು ಗುಣ ಸಂಪನ್ನನು ನೀತಿ ನೇಮಕ್ಕೆ ತಲೆಬಾಗುವನು ಗುರುಹಿರಿಯರಿಗೆ ಪ್ರೀತಿಪಾತ್ರನು ಯಾರನ್ನೂ ನೋಯಿಸನು. ಅನು ರಹೀಮನು ಅವನೂ ಗುಣ ಸಂಪನ್ನನು ಕೊಂಚ ಸಂಕೋಚದ ಸ್ವಭಾವ ಸದಾ ಧ್ಯಾನಸ್ಥನು ಏಕಾಂತ ಪ್ರಿಯನು. ಹೀಗೊಮ್ಮೆ ರಾಮನೂ...

ಸೇತುವೆ ಕುಸಿದಿದೆ

ನಾನು ಕಳಿಸಿದ್ದು ಮಿಂಚುಗಳನ್ನು ತಲುಪಿದ್ದು ಮಿಣುಕು ಹುಳುಗಳೇ? ಹಾಗಾದರೆ ಮಿಂಚೆಲ್ಲ ಹೋಯಿತು? ನನ್ನ ಕುಂಚದಿಂದ ಮೂಡಿದ ಮೊಲ ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ? ಹಾಗಾದರೆ ಮೊಲವೆಲ್ಲಿ ಮಾಯವಾಯಿತು? ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು ಮೌನದ ಗಂಟೆಯನ್ನು ಕತ್ತರಿಸಿದ್ದು...