ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ ಅರಿದರಿದು ಬಿಲುಗಾರನಹೆಯೋ ಎಸೆದಿಬ್ಬರು ಒಂದನೀ ಹರು ಗಡ ಇದು ಹೊಸತು ಚೋದ್ಯವೀ ಸರಳ ಪರಿ ನೋಡಾ ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು ನಾವಿಬ್ಬರೊಂದಾಗೆ ಬಿಲ್ಲಾಳಹೆ ಎಸೆಯಲೋ ಕಾಮ [ಚೋದ್ಯ-ಆಶ್ಚರ್ಯ, ಹರು...

ಕೂಡಲರಿಯದಿದೇನು ಗುಣಿಸುವುದೋ? ಶೂನ್ಯದೊಳು

ಕೂಡಿ ಬಾಳಿದೊಡೆಲ್ಲ ತಲೆಮಾರೊಂದಾದೊಡದು ಕುಟುಂಬ ಕೂಡಿ ಬೆಳೆದೊಡೆಲ್ಲ ಗಿಡಮರಬಳ್ಳಿಗಳೆಡೆಗದುವೆ ಕೃಷಿಯು ಕೂಡಿ ಬಾಳಲು ಕೂಡಿ ಬೆಳೆಯಲು ಮಮತೆಯಂತರ್‍ಜಲ ಕುಡಿಯ ಬೇಕಲ್ಲದಿದೇನಂಗಡಿ ಸರಕಿನವಸರವು ಕಾಡಿನೊಳೆಲ್ಲ ಕೂಡಿ ಬಾಳ್ವಂತಿರದೆ ಅದೆತ್ತಣಂತರ್‍ಜಲವು - ವಿಜ್ಞಾನೇಶ್ವರಾ *****
ವಚನ ವಿಚಾರ – ಮನಸ್ಸು ಕೋತಿ

ವಚನ ವಿಚಾರ – ಮನಸ್ಸು ಕೋತಿ

ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು ಎನ್ನ ನಿಂದಲ್ಲಿ ನಿಲಲೀಯದು ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ ಎಂದು...

ಕುಂತಂತೆ ಧನ ಧ್ಯಾನಗಳನ್ನು ಬೇರೆನುವ ಜ್ಞಾನವಿನ್ನೆಷ್ಟು ದಿನವೋ?

ಎಂತು ನೋಡಿದೊಡಂ ಅನ್ನ ಮತ್ತಾನಂದಗ ಳೊಂದೆ ನಾಣ್ಯದೆರಡು ಮುಖವಿರುತಿರಲು ಅಂತೆ ಕುಂತು ದುಡಿವುದೇನೋ ಅನ್ನಕೆಂದೊಂದಷ್ಟು, ಮತ್ತಾ ನಂದವನರಸಿ ಅಲೆವುದೇನೋ ಮನೆ ಬಿಟ್ಟು ರುಂಡ ಮುಂಡಗಳೊಂದಾಗಿ ದುಡಿದರಾ ಜೀವನವೇ ಕೃಷಿಯಕ್ಕು -ವಿಜ್ಞಾನೇಶ್ವರಾ *****
ವಚನ ವಿಚಾರ – ಇನಿಯನಿಗೆ ತವಕವಿಲ್ಲ

ವಚನ ವಿಚಾರ – ಇನಿಯನಿಗೆ ತವಕವಿಲ್ಲ

ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ ಮನದಿಚ್ಛೆಯನರಿವ ಸಖಿಯರಿಲ್ಲ ಇನ್ನೇವೆನವ್ವಾ ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ ದಿನ ವೃಥಾ ಹೋಯಿತ್ತಾಗಿ ಯೌವನ ಬೀಸರವಾಗದ ಮುನ್ನ ಪಿನಾಕಿಯ ನೆರಹವ್ವಾ...

ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು ಬಹು ಕಾಲವೃದ್ಧಿಯೊಳಪ್ಪ ಮೋಪಿಂಗು ಕಾಸಿನ ಕಶಿಯಿಕ್ಕುವುದು - ವಿಜ್ಞಾನೇಶ್ವರಾ...
ವಚನ ವಿಚಾರ – ಇಲ್ಲೇ ಇದ್ದಾರೆ

ವಚನ ವಿಚಾರ – ಇಲ್ಲೇ ಇದ್ದಾರೆ

ಇದಿರೆನ್ನ ಹಳಿವವರು ಮತಿಯ ಬೆಳಗುವರು ಮನದ ಕಾಳಿಕೆಯ ಕಳೆವವರೆನ್ನ ನಂಟರು ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ ಹೇಯೋಪಾದಿಯ ತೋರುವವರು ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು ಸಕಳೇಶ್ವರದೇವರ ತೋರುವರೊಳರು ಇಲ್ಲಿಯೆ [ಕಾಳಿಕೆ-ಕಲ್ಮಶ, ತೋರುವರೊಳರು-ತೋರುಬಲ್ಲಸಮರ್ಥರು] ಸಕಲೇಶಮಾದರಸನ...

ವ್ಯಾಜ್ಯವಿದ್ಯಾಕೋ? ಸಹಜ ಬೀಜದ ಕುರಿತು

ಬೀಜ ವೃಕ್ಷ ನ್ಯಾಯವದಂತಿರಲಿ ಅನ್ಯಾಯವದಾವ ಬೀಜಕುಂ ವೃಕ್ಷಕುಂ ಆಗದಿರಲಿ, ರಾಶಿ ಬೀಜವಿದ್ಯಾಕೆನುತ ಕೋಜ ಬೀಜ ಬೆಳೆಸುವಾಧುನಿಕ ಕೃಷಿ ಬಾಳದಿರಲಿ ಯೋಜನೆಗಳಂತಿಮದಿ ಕೃಷಿ ಹೆಸರಿನೊಳಾ ಪೂಜ್ಯ ಬದುಕಿನೊಸರನಾರಿಸದಿರಲಿ - ವಿಜ್ಞಾನೇಶ್ವರಾ *****
ವಚನ ವಿಚಾರ – ಪುರುಷತ್ವ

ವಚನ ವಿಚಾರ – ಪುರುಷತ್ವ

ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ [ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ, ಕಳ-ಅಖಾಡ] ಅಕ್ಕ ಮಹಾದೇವಿಯ...

ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ?

ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು - ವಿಜ್ಞಾನೇಶ್ವರಾ *****