ಹೃಷೀಕೇಶಕ್ಕೆ

ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ (ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?) ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ ಇದು ಧ್ಯಾನಾಸಕ್ತಿಯೊ...

ಕುಂಬಳೆ ಕೋಟೆ

ಎತ್ತದಿರು ಕಲ್ಲುಗಳ ಮೆಟ್ಟದಿರು ಹುಲ್ಲುಹಾಸುಗಳ ಮುಟ್ಟದಿರು ಅಲ್ಲಿ ಮಲಗಿರುವ ಹಸುಳೆಗಳ ಎಷ್ಟೋ ವರ್ಷಗಳಿಂದ ಮಲಗಿರುವರವರು ಮಳೆಗಾಳಿಗೊಮ್ಮೊಮ್ಮೆ ಕನವರಿಸುವರು ಇನ್ನು ಈ ತೆರೆಗಳ ನಿರಂತರ ಶಬ್ದ ಅದನುಳಿದರೆ ಬಾಕಿ ಎಲ್ಲವೂ ಸ್ತಬ್ದ ಪಾರ್ವತಿಸುಬ್ಬನೆಂಬ ಕವಿಯೊಬ್ಬನಿದ್ದ ಯಾರಿಗೂ...

ಅವಧ

ಲಖನೋವಿನಲ್ಲಿ ನಾನು ಲಖನವಿ ಕುರ್ತ ಧರಿಸಿದೆನು ಅತಿ ತೆಳ್ಳಗಿನ ಒಂದು ಜತೆ ಚಪ್ಪಲಿಯ ಮಟ್ಟಿದೆನು ಮತ್ತೆ ಗಡ್ಡವೂ ಬೆಳೆದಿತ್ತು, ಅಲ್ಲಲ್ಲಿ ಬಿಳಿಯಾಗಿತ್ತು, ಇಡಿಯ ಹಜರತ್‌ಗಂಜ್ ನನ್ನ ಕಾಯುವಂತಿತ್ತು ಮೆಟ್ಟು ಮೆಟ್ಟಲಿಗೆ ಅಂಗಡಿ ಬಾಗಿಲುಗಳು ತೆರೆದು...

ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ ದೇಹವನು ಮಾತ್ರ ಕರೆಯುವುದು ಭೂಮಿ ಆಹ್! ಯೊಹಾನಸ್ ಕೆಪ್ಲರ್ ಆಕಾಶವನಳೆದವನು ಭೂಮಿಯ ನೆರಳನಳೆಯುತ್ತಿರುವೆಯ ! ಆ ವಾಕ್ಯಗಳನೆಂತು ಮರೆಯುವುದು ಆ ಅರ್ಥಗಳನೆಂತು ಬರೆಯುವುದು ಒಂದು ಹೆಜ್ಜೆಯಲೆ ಕಲ್ಪಗಳ ದಾಟಿದವನೆ ಕವಿಯೆ, ವಿಜ್ಞಾನಿಯೆ,...

ವಾನ್‌ಗಾಫ್‌ನ ಬೂಟುಗಳು

ವಾನ್‌ಗಾಫ್ ಕೆಫೆಗಳನ್ನು ಚಿತ್ರಿಸಿದ ಬೀದಿಗಳನ್ನು ಚಿತ್ರಿಸಿದ ಪಾರ್ಕುಗಳನ್ನು ಚಿತ್ರಿಸಿದ ಹೊಲಗಳನ್ನು ಚಿತ್ರಿಸಿದ ಪೈನ್ ಮರಗಳನ್ನು ಬಣ್ಣದಲ್ಲಿ ಮುಳುಗಿಸಿದ ವಿಮರ್ಶಕರಂದರು "ಛೇ! ಛೇ! ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ? ಯಾರಾದರೂ! ಇಕಾರಸ್‌ನ ಮರಣ ಮಹಾ ಪ್ರಳಯ ಕ್ರೈಸ್ತನ ಪುನರುತ್ಥಾನ...

ಕೇವಲ ನಗೆ

ಬೋಟಿನಲ್ಲಿ ಸಹಪ್ರಯಾಣ ಕೆಲೆ ನಿಲ್ದಾಣದಲ್ಲಿ ಕೇವಲ ನಗೆ ನಂತರ ಲೂವ್ರ್‌ ಮ್ಯೂಸಿಯಮಿನಲ್ಲಿ ಬೆರಗಿನಿಂದ ಎಲ್ಲರೂ ಕತ್ತೆತ್ತಿ ನೋಡುತಿದ್ದಾಗ ನಾನು ಕಂಡದ್ದೇನು-- ನೋಡಲೆಂದು ಇಲ್ಲಿಯ ತನಕ ಬಂದ ಮೋನಾ ಲಿಸಾ ಚಿತ್ರವನ್ನೆ ಅಥವ ಹೆಸರು ಸ್ಥಳ...

ಟ್ರಾನ್ಸಾಲ್ಪಿನೋ

ಅಂಥ ಮಾಂತ್ರಿಕ ಹೆಸರಿದ್ದ ಮೇಲೆ ಅದು ಬರೇ ಗಾಡಿಯಲ್ಲ ಸಾರೋಟು ಸಾಗುವುದು ಅಪರಿಚಿತ ಸ್ಥಳಗಳಿಗೆ ಆ ಅಕ್ಷರಗಳೇ ಹಾಗೆ ಒಂದನ್ನೊಂದು ಬಳಸುತ್ತ ಬೆಳೆಯುತ್ತ ಮುಗಿಲ ಕಡೆ ಕೈಚಾಚುತ್ತ ಹೇಳಿ ಮುಗಿಸುವ ಹೊತ್ತಿಗೆ ಎಷ್ಟೊಂದು ಬಾರಿ...

ಶನಿವಾರ ಸಂತೆ: ರೆಡಿಂಗ್

ಕ್ಯಾಬೇಜು ಮಾರಲು ಕೂತ ಗಂಡಸು ಕ್ಯಾಬೇಜಿನಂತೆ ಕಾಲಿಫ್ಲವರು ಮಾರುವ ಹೆಂಗಸು ಕಾಲಿಫ್ಲವರಿನಂತೆ ಇದ್ದಾರೆಯೆ ಇಲ್ಲವೆ- ಕಚಕಚನೆ ಕುರಿಮಾಂಸ ಕಡಿದು ಕೊಡುತ್ತಿರುವ ಹುಡುಗ ಹೂವಿನ ರಾಸಿಯ ಹಿಂದೆ ತಲೆ ಮರೆಸಿದ ಹುಡುಗಿ ಪ್ರೇಮಿಗಳೆ ಅಲ್ಲವೆ- ಬಟಾಟೆ...

ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ! ಮುಂದೆ ನೋಡುವಿರ ಹಿಂದೆ ನೋಡುವಿರ ಮನುಷ್ಯನಿಗಿರುವುದು ಎರಡೇ ಕಣ್ಣುಗಳು ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ ಬಂದರೂ...

ಥೆಮ್ಸ್ ನದಿಯ ಮೇಲೆ

(ಕಾರ್ಮೆನ್‌ಗೆ) ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ ಥೆಮ್ಸ್ ನದಿಗೆ ಅಪರೂಪದ ಭರ ನದಿಯ ಮಧ್ಯದ ತನಕ ಹಾಕಿದ ಮರದ ಸೇತುವೆಯಲ್ಲಿ ನಾವು ನಡೆದವು. ರೊಟ್ಟಿಯ ತುಣುಕಿಗೆ ಅಥವಾ ಸೇಬಿನ ತಿರುಳಿಗೆ ಬಾತುಕೋಳಿಗಳು ಹತ್ತಿರಕ್ಕೆ ಬರುತ್ತಿದ್ದುವು ನೋಡುತ್ತ...