ನಿನ್ನ ನೆನಪಿನಲಿ

ನಾನಿಲ್ಲಿ ಸುಮ್ಮನೆ ಬೀಳುವ
ಮಳೆಯ ಹನಿಗಳಿಗೆ ಪರಿತಪಿಸುತಿರುವೆ
ಮಾತಿಲ್ಲದೆ ಮಿಂಚು ಸುಳಿಗೆ
ಹರಿದಾಡುವ ಪರಿಗೆ ಭಯಪಡುತಿರುವೆ
ಆರ್ಭಟದ ಗುಡುಗಿನ ಸಪ್ಪಳಗೆ
ಬಡಿದುಕೊಳ್ಳುವ ಎದೆ ಕುಸಿಯುತಿದೆ
ನಿನ್ನ ನೆನಪಿನಲಿ.

ಎಲ್ಲ ದಿಕ್ಕುಗಳಿಂದ ಗಾಳಿ ಹೊತ್ತು
ತಂದ ಗಂಧದ ಪರಿಮಳಕೆ ತಳಮಳ
ಮರದಿಂದ ತೊಟ್ಟಿಕ್ಕಿದ ಹನಿಗಳು
ಎಲ್ಲೋ ಕಾಡಿ ವಿಭ್ರಮಿಸುವ ಕನಸುಗಳು
ಕುಡಿಯೊಡೆದ ಚಿಗುರು ಹಸಿರು ಮೂಡಿದ
ಮೂಕ ಮರ್ಮರ ಉಸಿರು
ಬಸಿರಾಗುತಿದೆ ನಿನ್ನ ನೆನಪಿನಲಿ.

ಮುರಳಿ ಊದಿದ ಕೊಳಲುಗಾನ
ಸೊಂಪಾಗಿ ಕರೆಯುತಿರೆ ಕೊರಳು
ಪ್ರೀತಿಯಲಿ ಹನಿಹನಿಯಾಗಿ ಹರಿದ
ಯಮುನೆಯ ತಟದಲಿ ನಿನ್ನ ಭಾವ
ಗೀತೆಗಳು ಉಲಿಯುತಿದೆ ಅಂತರಂಗದಲಿ
ಕರೆಯ ಬಾರದೇ ನೀನು, ಹಗುರಾಗಬೇಕಾಗಿದೆ
ನಾನು ನಿನ್ನ ನೆನಪಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ಕಾಲ ಅಳಿದಿಹುದು
Next post ಆವೇದನ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…