ಕಣ್ಣಂಚಿನವರೆಗೆ
ಬಂದು ಕೂತು
ಕೇಳಿ ಬಿಡುತ್ತದೆ
ಒಂದು ಮಾತು!
ಒಳಗಿರಲೋ?
ಹೊರಬರಲೋ?
ಹೊರಬರಲು
ಒಂದೇ ಮಿಟುಕು ಸಾಕು!
ಒಳಹೋಗಲು
ವರ್ಷಗಳು ಕಾಯಬೇಕು!
ಹೊರಬಿದ್ದುದು ನೀರಾಗಿ
ಒಂದೇ ಗಳಿಗೆಗೆ
ಆವಿಯಾಗಿ ಸಾವು!
ಒಳಗುಳಿದದ್ದು
ಒಡಲಾಳದಲ್ಲೇ
ಮಥಿಸಿ, ಮಥಿಸಿ
ನಿಟ್ಟುಸಿರಾಗಿ
ಹೊರಹೊಮ್ಮಿ
ಇಡೀ ವಿಶ್ವವೇ
ವಿಷಮಯವಾಗಿ
ತಲ್ಲಣಿಸುವ ಕಾವು!
*****