ಸಮಾಧಾನ

ಎಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ!
ಅಕ್ಕಿ, ಗೋಧಿ, ಸಕ್ಕರೆಗಳಲ್ಲೋ
ಹೆಸರು, ಉದ್ದು, ಕಡಲೆಗಳಲ್ಲೋ
ಒಗ್ಗರಣೆ, ಲಟ್ಟಣಿಕೆಗಳಲ್ಲೋ
ಕಳೆದುಹೋಗಿದ್ದಾಳೆ ನನ್ನ ಹುಡುಗಿ

ಟಿ.ವಿ. ಫ್ರಿಜ್ಜು ಸೋಫಾಗಳಲ್ಲೋ
ಕರೆಂಟು ಗ್ಯಾಸು ಸೀಮೆಎಣ್ಣೆಗಳಲ್ಲೆಲ್ಲೋ
ಕಳೆದು ಹೋಗಿದ್ದಾಳೆ ನನ್ನ ಹುಡುಗಿ

ಅಡುಗೆ ಮನೆಯ ಕತ್ತಲಲ್ಲೋ
ದೇವರು ಮನೆಯ
ಉಸಿರು ಕಟ್ಟಿಸುವ ಮೌನದಲ್ಲೋ
ಬಹುಶಃ ಕೊಲೆಯಾಗಿದ್ದಾಳೆ
ನನ್ನ ಹುಡುಗಿ!
ಎಂದುಕೊಳ್ಳುತ್ತಾ,

ದನಿ ಎತ್ತರಿಸಿ ಕೂಗಿದರೊಮ್ಮೆಮ್ಮೆ
ನರಳುವ ಮುಲುಗುಟ್ಟುವ
ಸದ್ದಿನಡಿಯಿಂದ
‘ಹೂಂ’ ಗುಟ್ಟುತ್ತಾಳೆ.

ಸಧ್ಯ! ಬದುಕಿದ್ದಾಳೆಂದು ಸಂಭ್ರಮಿಸುತ್ತೇನೆ
ಕಣ್ಗೆ ಕಾಣದಿದ್ದರೂ
ಕೊಲೆಯಾಗಿಲ್ಲವೆಂದು
ಸಮಾಧಾನದ ಉಸಿರೆಳೆಯುತ್ತೇನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕಗಳೇ
Next post ವಿಶ್ವಕರ್ತನ ಗುಡಿ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…