ಸೂರ್ಯ
ನಿನ್ನದೆಂಥಾ ಬಿಸಿಲೋ
ನಮ್ಮ ಹೊಟ್ಟೆಯ
ಹಸಿವಿನ ಮುಂದೆ
ಸುಡು
ಹಸಿಹಸಿ ಹಸಿವ
ಬಿಸಿಲಿರಲಿ
ಹೊಂಬಿಸಿಲಾಗಿ
ಮೋಡಗಳೇ
ನಿಮ್ಮದೆಂಥಾ ಮಳೆಯೋ
ನಮ್ಮ ಬಡತನದ
ಕಣ್ಣೀರಿನ ಮುಂದೆ
ಸುರಿ
ಬಡತನ ಬಡವಾಗುವ
ಮಳೆಯ
ಹೊನ್ಹೊಳೆಯ
ಬಿರುಗಾಳಿಯೇ
ನಿನ್ನದೆಂಥಾ ಆರ್ಭಟವೋ
ನಮ್ಮ ಬದುಕ ಕಳೆದ
ನಿಟ್ಟುಸಿರಿನ ಮುಂದೆ
ಬೀಸು
ನೆಮ್ಮದಿಯ ನೆಮ್ಮದಿಯಾಗಿ
ಗಾಳಿ
ತಂಗಾಳಿ
ಇಂದೇ.
ಈಗಲೇ,
ಈ ಕ್ಷಣವೇ.
*****