ಇವಳ ಹುಲ್ಲು ಹುದುಗಲಿನಂಥ, ಕಳ್ಳಕೆಸರಿನಂಥ,
ವಿಲವಿಲಿ ಹುಳ ಹರಿದಾಡುವಂಥ
ಚಾರಿತ್ರ ಹೀನ ಚರಿತ್ರೆಯು ಪಾತಾಳಕ್ಕೆ ಬೇರಿಳಿಸಿದೆ
ಮೇಲಿನ ತೊಳೆಯೋಣ ತಿಕ್ಕೋಣಗಳೆಲ್ಲ
ಮೋಟುಮರಕ್ಕೆ ಗಾಳಿ ಮಾಡುವ ಪರಿಣಾಮವಷ್ಟೆ
ಸಾವಿರಾರು ವರ್ಷಗಳ ಇವಳ ಹಳಸು ರೋಗ
ವಂಶಾನುಗತವಾಗಿ ರಕ್ತದಲ್ಲೇ ಹರಿಯುತ್ತಾ ಬಂದಿದೆ
ಸುಧಾರಣೆ ಕ್ರಾಂತಿಗಳೆಂಬ ವಾಂತಿ ಭೇದಿಗಳು
ಇವಳ ಏನೇನೂ ಅಲ್ಲಾಡಿಸಲಾರವು
ಅಲುಗಾಡಿದಂತೆ ಕಂಡರೂ ಕೆಸರೂಳಗಿನ ಕಾಲಿನಂತೆ
ಇನ್ನಷ್ಟು ಕೆಳಗಿಳಿದು ಗಾಢವಾದೀತು ಗೂಢವಾದೀತು ಅಷ್ಟೇ
ಇವಳ ಹೀನ ಚರಿತ್ರೆಯ ಹೊಸಪುಟ ತೆರೆಯದು
ಇವಳ ರೋಗ ನಿರೋಗವಾಗದು
*****
Related Post
ಸಣ್ಣ ಕತೆ
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…
-
ಟೋಪಿ ಮಾರುತಿ
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…