ಅಪ್ಪ ಪ್ರತಿ ಬಿಂಬ
ಅಮ್ಮ ಗತಿ ಬಿಂಬ
ಮಕ್ಕಳು ‘ಕರಿ’ ಬಿಂಬ!
೧
‘ಹೌದು! ಅಂದವರ್‍ಯಾರು?
ನಮ್ಮನ್ನು ತಬ್ಬಲಿಗಳೆಂದು?
ಅಪ್ಪ, ಅಮ್ಮರಿಲ್ಲದಾ ಅನಾಥರೆಂದು?!’
೨
ಅಕ್ಕನ ನೋಡು:
ಅಪ್ಪನ ಹೋಲಿಕೆ!
ಮಾತು, ಕಥೆ, ವ್ಯಥೆ…
ಎಲ್ಲ ಟಂಕಸಾಲೆಯಂತೆ!
ನೋಟುಗಳ ಮುದ್ರಣದಂತೆ!
ಅಪ್ಪಟ ಝೆರಾಕ್ಸ್ ಪ್ರತಿಗಳಂತೆ!!
೩
ಇನ್ನು ಅಮ್ಮ-ತಮ್ಮನಂತೆ!
ಮೂಗು ಅಳ್ಳಿ ಮೂಗು,
ಮುಶಿಣಿ ಹಂದಿಯಂತೆ,
ಹಲ್ಲುಗಳು ಕೊಪ್ಪೆ ಪಾಸಿನಂತೆ!
ಕೈಕಾಲುಗಳು:
ಕಾಗೆ, ಕೋಳಿ, ಗುಬ್ಬಿಯಂತೆ!
೪
‘ಅಂದವರ್‍ಯಾರು?
ನಾವು ಬೇರೆ ಬೇರೆಂದು??’…
ಮಕ್ಕಳು, ಮರಿಮೊಮ್ಮಕ್ಕಳು…
ಅಪ್ಪ ಅಮ್ಮರ ಪಡಿಯಚ್ಚಿನಂತೆ!
೫
ಚರಿತ್ರೆಯೆಂದರೆ… ನಮ್ಮದು!
ಈ ಜಗವ ಸೃಷ್ಟಿಸಿದಾ… ತಾತ, ಮುತ್ತಾರದು!
ಇತಿಹಾಸ ಸೃಷ್ಠಿಸಲು,
ಹೊಸತು ರಚಿಸಲು
ಸಾಧ್ಯ ಸಾಧ್ಯ…
ಈ ನಮ್ಮ ಮನೆ, ಮನಗಳ, ವ್ಯಥೆ, ಕಥೆಯಿಂದ!!
*****