ಸಣ್ಣ ಹುಡುಗನ ಶಡುವಿಗೆ

ಸಣ್ಣ ಹುಡುಗನ ಶಡುವಿಗೆ
ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡೆದು ||ಪ||

ಅಣಕವಾಡು ಶಿವನಂದಿ ಪಿಟೀಲಿಗೆ
ತುಣಕ ಚರಂತಿಯ ತಾಳ ಕುಟೀಲಗೆ
ಹೆಣಕ್ಯಾಡುವ ಸೊಟ್ಟದ ಕೌಚಾಪಿಗೆ
ಕಣಕಹಚ್ಚಿ ಬಾರಿಸುವ ಮೃದಂಗದ
ಘನಶಾಸ್ರ ಅರಿಯದ ಗುಣಗೇಡಿಗಳಿಗೆ ||೧||

ಹೊಸಹಳ್ಳಿ ಗ್ರಾಮದ ಗಾಣಿಗ ಕುಲ
ರಸಿಕನಾದನೋ ಆಗ ಸಾಲಿಗೆ ಬಂದು
ಅಸಮ ಪ್ರಸಂಗಕ ಸರಿ ಇಟ್ಟನು ಇದು
ಕಿಸಿ ಕಿಸಿ ಹಲ್ಲುಗಳ ತೆರೆದು ನಕ್ಕನವ
ಹೆಸರಿಗೆ ಕಾಲನ ಹೊಸತರ ಚೇಷ್ಟಿಗೆ ||೨||

ಪುಂಡ ಶಿಶುನಾಳಧೀಶನ ಸೇವಕ
ತೊಂಡ ಶೂರನ ಗ್ರಾಮ ಸಂಹಾರಕ
ಪಂಡಿತರಿಗೆ ಹಿತವಾದ ವಿಚಾರಕ್ಕೆ
ಮಂಡಲದೊಳು ಗುರುಲಿಂಗ ಕೃಪಾಂಗಗೆ
ಇಂಗಿತವರಿಯದ ಮಂಗಮನುಜರಿಗೆ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಮುಖ
Next post ಸ್ವರ್ಣಪಂಜರ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…