ಲಾಲ್‌ಬಾಗ್

ಪ್ಯಾರೆಲಾಲ್ ಭಾಗಮತಿಯರು
ಇಲ್ಲಿ ಬರದೇ ಹೋದರೆ
ಅದು ಲಾಲ್‌ಬಾಗ್ ಹೇಗಾದೀತು?
ಗಿಡಗಂಟಿ ಪೊಟರೆಗಳ ತುಂಬೆಲ್ಲ
ಪ್ಯಾರೆಲಾಲ್‌ನ ಪ್ರೇಮಕಾವ್ಯ-
ಅವನ ಪ್ಯಾರೇ ಪ್ಯಾರೆ ಕಹಾನಿಗಳಿಗೆ
ಭಾಗಮತಿಯ ಕೆನ್ನೆ ಕೆಂಪು
ಮೈ ತುಂಬಾ ಚಳಿ ನಾಚಿಕೆ.
ಮಾತು ಮಾತಿಗೂ ಕಣ್ಣಲಿ
ಬಿರಿಯುವ ಬಣ್ಣ ಬಣ್ಣಗಳ ಹೂವುಗಳು
ಚಿತ್ತಾರಗಳು ನಗುವ ತುಟಿಯಲಿ.

ಅವನೆದೆಯ ಟೊಂಗೆಗಳಿಗೆ
ನೂರಾರು ಚಿಗುರು
ಮೆಲ್ಲಗೆ ಮೊದಲ ಸ್ಪರ್ಶವೋ ಏನೋ!
ಜುಮ್ಮೆನ್ನುವ ತಂಗಾಳಿ
ಗರಿಗಳ ತಿಕ್ಕಾಟ ಅಪ್ಪುಗೆಯೊಳಗೆ
ಮಿಂಚು ಮುತ್ತುಗಳ ಚೆಲ್ಲಾಪಿಲ್ಲಿ.

ಸಾವಿರ ಸಾವಿರ ಹೂವು
ಜೇನುಗಳ ಸ್ವರ್ಗತೋರಣ
ಇರಲೇಬೇಕು ಲಾಲ್‌ಬಾಗ್‌ಗೆ
ಪ್ಯಾರೆಲಾಲ್ ಭಾಗಮತಿಯರ
ಪ್ರೇಮ ಸ್ಪರ್ಶದ ಅಕರ್ಷಣೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿ
Next post ವಿರುದ್ಧ ಸಾಲುಗಳು

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…