ಪದವ ಬ್ಯಾಗನೆ ಕಲಿ

ಪದವ ಬ್ಯಾಗನೆ ಕಲಿ
ಶಿವ ಶರಣರ ಹೃದಯ ಕೀಲಿ ||ಪ||

ಅಡಿಗಣ ಪ್ರಾಸಕೆ ದೊರಕದ ಪದವು
ನುಡಿಶಬ್ದಕೆ ನಿಜ ನಿಲುಕದ ಪದವು
ಕುಡುಬಟ್ಟಿನ ಕೈತಾಳ ಮಾತ್ರೆಯ
ಬಡಿವಾರಕೆ ಬೈಲಾಗದ ಬ್ರಹ್ಮನ ||೧||

ಗಣ ನೇಮದ ಗುಣಗೆಡಿಸುವ ಪದವು
ತುಣಕುಶಾಸ್ತ್ರಕೆ ಮಣಿಯದ ಪದವು
ಗುಣಿಸಿಕೊಂಡು ಸಂಗೀತ ಸ್ವರಂಗಳ
ಎಣಿಸಿ ಏಣಿಸಿ ಕುಣಿಶ್ಯಾಡುತ ಪದವು ||೨||

ಲಯ ಪ್ರಳಯಕೆ ಒಳಗಾಗದ ಪದವು
ನಿಲಯದೊಳು ನಿಜ ನಿಲಿಸುವ ಪದವು
ಒಲಿಸಿಕೊಂಡು ಶಿಶುನಾಳೇಶನು
ಸುಲಭದಿಂದ ಎನಗ್ಹೇಳಿದ ಪದವು ||೩||
****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಾರಗ ಪದ ಬರಕೊಟ್ಟೆನು
Next post ಮರಣ ಮೃದಂಗ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…