ತಂಗಿ ನಮಗೆ ಕೊಡಿರೆಂದು
ಕೊಟ್ಟಳ್ಹಂಗಿನರಕಿಯನು ||ಪ||
ಇಂಗಿತ ಅರಿದವ ಅಣ್ಣ ನೀ ಬಾರೆಂದು
ಬಂಗಿ ಸೇದಿಸಿ ಬ್ರಹ್ಮಾಂಡದ ಬಯಲೊಳು ||ಅ.ಪ.||
ತನುತ್ರಯಕ್ಕೆ ತಾ ಬಾಧ್ಯಳೋ
ಎನ್ನ ಘನ ಆತ್ಮಕ್ಕೆ ಪ್ರಸಿದ್ಧಳೋ
ವನಜಾಕ್ಷಿಯು ತನ್ನ ಚಿನುಮಯ ರೂಪದಿ
ಮನಮುಟ್ಟಿ ಹರಸುತ ||೧||
ಆನಂದವಾಯ್ತು ಇದು ಬಹು
ಸ್ವಾನಂದಮಯವಾಯ್ತು ಸಿಂಧು ತಾನೇ
ತಾನಾದಂಥ ಜ್ಞಾನಿ ಗುರುಗೋವಿಂದ
ಏನೊಂದನೆಣಿಸದೇ ತಾನಿತ್ತ ವರವನು ||೨||
****