ಒಬ್ಬ ಕಾಲೇಜು ತರುಣಿ ಮತ್ತು ಒಬ್ಬ ಗ್ರಹಸ್ಥ ಮಹಿಳೆ ಇಬ್ಬರೂ ಬಸ್ಸಿಗಾಗಿ ಕಾದು ನಿಂತಿದ್ದರು. ಕಾಲೇಜು ತರುಣಿ ತನ್ನ ಸಿಗರೇಟ್‍ಕೇಸನ್ನು ತೆಗೆದು ತಾನು ಒಂದು ತೆಗೆದುಕೊಳ್ಳುತ್ತಾ ಪಕ್ಕದ ಹೆಂಗಸಿಗೂ ಸಿಗರೇಟ್‍ಕೇಸ್ ಹಿಡಿದು “ತೆಗೆದುಕೊಳ್ಳಿ ಬಸ್ ಬರೋದು ತಡ ಇದೆ’. ಅಂದಳು “ಏನು ಹೆಂಗಸರು ಸಿಗರೇಟ್ ಸೇದುವುದೆ? ಅದರ ಬದಲಿಗೆ ದಾರಿಯಲ್ಲಿ ಹೋಗುವ ಯಾವುದಾದರೂ ಗಂಡಸನ್ನು ಮದುವೆ ಆಗಿಬಿಡುವುದು ಎಷ್ಟೋ ಮೇಲು” ಎಂದಳು ಆ ಗೃಹಸ್ಥೆ. ತಕ್ಷಣವೇ ತರುಣಿ ಸಿಗರೇಟ್ ಕೇಸನ್ನು ಮುಚ್ಚುತ್ತಾ “ನೀವು ಹೇಳೋದೇನೋ ಸರಿಯಾಗಿಯೇ ಇದೆ. ಆದರೆ ಆಂತಹ ಗಂಡಸು ಬರುವವರೆಗೂ ಹೇಗೆ ಕಾಲ ಕಳೆಯುವುದು? ಅದಕ್ಕಾಗಿಯೇ ಈ ಸಿಗರೇಟು!”
***
Related Post
ಸಣ್ಣ ಕತೆ
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಕುಟೀರವಾಣಿ
ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…