ಬಟ್ಟಬಯಲಲ್ಲಿ ಒಂದು ಶರಧಿ ಹುಟ್ಟಿತ್ತು.
ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು.
ಆ ಕಮಲದ ನೆಲೆಯ ಕಾಣಲರಿಯದೆ, ತೊಳಲಿ ಬಳಲಿ,
ಜಗದೊಳಗೆ ನಚ್ಚುಮೆಚ್ಚಿಗೊಳಗಾಗಿ,
ಮುಚ್ಚಳ ಪೂಜೆಗೆಸಿಲ್ಕಿ ಕುಲಕೆ ಛಲಕೆ ಕೊಂದಾಡಿ,
ಭವಕೆ ಗುರಿಯಾಗುವ ಮನುಜರ ಕಂಡು,
ನಾಚಿತ್ತನ್ನ ಮನವು. ಈ ಮನದ ಬೆಂಬಳಿಗೊಂಡು,
ಹೋದವರೆಲ್ಲ ಮರುಳಾಗಿ ಹೋದರು.
ಇದ ನೋಡಿ ನಾನು ಬಟ್ಟಬಯಲಲ್ಲಿ
ನಿಂದು ನೋಡಿದರೆ, ಶರಧಿ ಬತ್ತಿತ್ತು,
ಕಮಲ ಕಾಣಬಂದಿತ್ತು, ಆ ಕಮಲ ವಿಕಾಸವಾಯಿತ್ತು.
ಪರಿಮಳವೆಂಬ ವಾಸನೆ ತೀಡಿತ್ತು.
ಆ ವಾಸನೆವಿಡಿದು, ಜಗದಾಸೆಯ ಹಿಂಗಿ,
ಮಾತುಮಥನವ ಕೆಡಿಸಿ ಮಹಾಜ್ಯೋತಿಯ
ಬೆಳಗಿನಲಿ ಓಲಾಡುವ ಶರಣರ ಆಸೆ
ರೋಷ ಪಾಶಕ್ಕೊಳಗಾದ ಈ ಜಗದ
ಹೇಸಿಗಳೆತ್ತಬಲ್ಲರು ಈ ಮಹಾ ಶರಣರ
ನೆಲೆಯ ಅಪ್ಪಣಪ್ರಿಯ ಚನ್ನಬಸವಣ್ಣಾ?
*****
Related Post
ಸಣ್ಣ ಕತೆ
-
ಆ ರಾತ್ರಿ
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಕನಸುಗಳಿಗೆ ದಡಗಳಿರುದಿಲ್ಲ
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…