ಸಹನೆ

” ಜಗತ್ತಿನ ಜೀವನದಲ್ಲಿ  ನುಗ್ಗಾಟ-ಜಗ್ಗಾಟಗಳು ಅನಿವಾರ್ಯವಾಗಿವೆಯೆಂದೂ, ತೂರಾಟ-ಹೋರಾಟಗಳು ತಪ್ಪಲಾರವೆಂದೂ  ತಿಳಿಯಿತು. ಮೇಲಾಟವಿಲ್ಲದೆ  ಜೀವ ಉಳಿಸಿಕೊಳ್ಳುವದೇ ಕಠಿಣವೆಂದೂ  ಮನವರಿಕೆಯಾಯಿತು. ಮಥನವಿಲ್ಲದೆ ಯಾವ  ನಿಷ್ಟತ್ತಿಯೂ  ಸಾಧ್ಯವಿಲ್ಲವೆಂದು ಗೊತ್ತಾಯಿತು. ವಿರೋಧ ಪರಿಸ್ಥಿತಿಯೊಡನೆ ಕಾದಾಡುವಾಗ ಸಹನೆ ಅದೆಷ್ಟಿದ್ದರೂ ಕಡಿಮೆಯೆಂದೇ ಎಣಿಸಿದ್ದೇವೆ. ಆದ್ದರಿಂದ ಆ ಸಹನೆಯ ನೆಲೆ-ಬೆಲೆಗಳನ್ನು ಅರಿತುಕೊಳ್ಳದೆ ಗತ್ಯಂತರವಿಲ್ಲವೆಂಬ ನಿರ್ಣಯಕ್ಕೆ ಬಂದಿರುವೆವು. ಆ ವಿಷಯವನ್ನು ನಿಚ್ಚಳವಾಗಿ ವಿವರಿಸಬೇಕೆಂದು ಬಿನ್ನಯಿಸುತ್ತೇನೆ” ಎಂದು ಜೀವಜಂಗುಳಿಯು ಕೇಳಿಕೊಂಡಿತು.

ತಾಳ್ಮೆಯ ಕಣಿಯಾದ ಸಂಗಮಶರಣನು ಆ ವಿಷಯದಲ್ಲಿ ಸಾವಧಾನ ಪೂರ್ವಕವಾಗಿ ಪ್ರಶ್ನೆಯನ್ನು ಗ್ರಹಿಸಿ ಆದರ ಒಳಗುಟ್ಟನ್ನು ಬಿಡಿಸುವದಕ್ಕೆ ಅಣಿಯಾದುದು ಹೇಗೆಂದರೆ-
“ವಿರೋಧಕ ಪರಿಸ್ಥಿತಿಯನ್ನು ಅಲ್ಲಗಳೆಯುವದಾಗಲಿ, ಅದನ್ನು ಕೊಡುವದಕ್ಕೆ ಮೈಅಲುಗಿಸುವುದಾಗಲಿ ಪ್ರಾಣದ ಕೆಲಸ. ತನಗೊಲ್ಲದ ಕೆಲಸವು ಬೇಡವೆಂದು ಗೊಣಗುಟ್ಟುವುದು ಪ್ರಾಣದ ಸ್ವಭಾವವೇ ಆಗಿವೆ. ಶರೀರವು ಸಹಿಸಬಲ್ಲದು; ಬುದ್ಧಿಯು ಗ್ರಹಿಸಬಲ್ಲದು ಆದರೆ ಪ್ರಾಣವು ಹಾಗೆಂದೂ ಮಾಡಲರಿಯದು.

ಗಂಡಾಂತರವನ್ನೆದುರಿಸುವದೂ, ಅಡೆ-ತಡೆಗಳಿಗೆ ಎದೆಗೊಡುವದೂ ಪ್ರಾಣಕ್ಕೆ ಒಲ್ಲದ ಕೆಲಸ. ಗಂಡಾಂತರದಿಂದ ತಪ್ಪಿಸಿಕೊಳ್ಳುವುದೂ, ಅಡೆ-ತಡೆಗಳಿಗೆ ಬೆಂದಿರುಹುವುದೂ ಅದಕ್ಕೆ ಬೇಕಾದ ಕೆಲಸ. ಗಂಡಾಂತರವೆಂದರೆ
ಸುಸಂಧಿಯೆಂಬುದು ಅದಕ್ಕೆ ಗೊಕ್ತಿಲ್ಲ. ಅಡೆ-ತಡೆಗಳೆಂದರೆ ಗೆಲವು ನೀಡಬಂದ ವರದಹಸ್ತಗಳೆಂಬುದು ಅದಕ್ಕೆ ತಿಳಿದಿಲ್ಲ.

ಗಂಡಾಂತರವು ಸುಸಂಧಿಯೆಂದು, ಬೇಕೆಂದೇ ಅದನ್ನು ಮೈಮೇಲೆ ಹಾಕಿ ಕೊಳ್ಳುವದು ಜಾಣತನನಲ್ಲ. ಅಡೆ-ತಡೆಗಳು ವರಗಳೆಂದು ಕಾಡಿ-ಬೇಡಿ ಅವನ್ನು ಪಡೆಯುವದು ಸರಿಯಾದ ದಾರಿಯಲ್ಲ. ಅವು ಉದ್ದೇಶವೂರ್ವಕ- ವಾಗಿ ಬಂದವುಗಳಾಗಿರುವದರಿಂದ ತಮ್ಮ ಉದ್ದೇಶವು ಕೊನೆಗೊಳ್ಳುತ್ತಲೇ ಅವು ಅಲ್ಲಿ ಒಂದು ನಿಮಿಷ ಸಹ ನಿಲ್ಲಲಾರದೆ ತೊಲಗಿಬಿಡುವವು.

ಅವುಗಳ ಉದ್ದೇಶವು ಸಫಲವಾಗಬೇಕಾದರೆ ಜೀವಿಯು ಸಾವಧಾನ ದಿಂದ ವರ್ತಿಸಬೇಕಾಗುತ್ತದೆ. ರೋಗಿಯು ಚುಚ್ಚುಮದ್ದು ಚುಚ್ಚಿಸಿಕೊಳ್ಳುವಾಗ ಗಸನಿಸಿಮಾಡಲಾರದೆ, ವೈದ್ಯನಿಗೆ ಮೈಗೊಡುಮತೆ, ಕೈಗೊಡುವಂತೆ
ಸಾವಧಾನಿಯಾಗಿತಕ್ಕದ್ದು. ಸಾವಧಾನಿಯಾಗಿರದ ರೋಗಿಯ ಚಿಕಿತ್ಸಯು-ಸಫಲವಾಗುವದಂತೂ ದೂರವೇ ಉಳಿದು ವಿಪರೀತ ಪರಿಣಾಮವನ್ನು ತಂದೊದ್ದಿ, ರೋಗದ ಬಳಲಿಕೆಗಿಂತ ವಿಪರೀತ ಪರಿಣಾಮದ ಬಳಲಿಕೆಯೇ ಹೆಚ್ಚು ಅಸಹ್ಯವಾಗುವದುಂಟು. ಆಗ ಒಂದು ಚುಚ್ಚುಮದ್ದಿನ ಅವಶ್ಯಕತೆ ಯಿದ್ದ ರೋಗವು, ಶಸ್ತ್ರಚಿಕಿತ್ಸೆಯ ಅವಶ್ಯಕತೆಯನ್ನು ನಿರ್ಮಿಸಿಕೊಳ್ಳುವದು.

ಅದಕ್ಕಾಗಿ ಸಹನೆ ಬೇಕು. ಸಹನೆಯು ವಿರೋಧ ಪರಿಸ್ಥಿತಿಯ ಅಸಹ್ಯತೆ ಯನ್ನು ಕಡಿಮೆ ಮಾಡುತ್ತದೆ. ಅದರ ಉದ್ದೇಶಪುರ್ತಿಯು ಸತ್‍ಪರಿಣಾಮಕರವಾಗಿ ಪೂರ್ತಿಗೊಳ್ಳುತ್ತದೆ. ನಾಲ್ಕು ದಿನದಲ್ಲಿ ಮುಗಿದುಹೋಗುವ
ಕುತ್ತು ಒಂದೇಕ್ಷಣದಲ್ಲಿ ಕಡೆಗಾಗುತ್ತದೆ.

ನಾವು ನೆಲೆಸಿದ ನೆಲೆಯೇ ಭಯಾನಕವಾಗಿದೆ. ಬೆಟ್ಟದ ಮೇಲಿನ ಗುಡಿಸಲಿಗಿಂತ ಹೆದರಿಕೆಯ ಸ್ಥಳದಲ್ಲಿ ನಾವು ಬೀಡುಬಿಟ್ಟರುವೆವು. ಸಮುದ್ರದ ಅಲೆಯ ಹೊಡೆತದಲ್ಲಿ ಕಾಲೂರಿ ನಿಂತಿರುವೆವು. ಸಂತೆಯಸ್ಥಳದಲ್ಲಿ ಮನೆಕಟ್ಟಿ
ಏಕಾಂತವನ್ನು ಬಯಸುತ್ತಿರುವೆವು. ಆ ಠಾವಿನ ಹೊರತು ಅನ್ಯಗತಿಯೇ ನಮಗಿಲ್ಲ. ಅವೆಲ್ಲ ತೊಂದರೆಗಳಿಗೆ ಪರಮೌಷಧಿಯೆಂದು ಸಮಾಧಾನವೃತಿಯನ್ನೇ ತಳೆಯಬೇಕಾಗಿದೆ.

ಬೆಟ್ಟದ ಮೇಲೊಂದು ಮುನೆಯ ಮಾಡಿ
ಮೃಗಳಿಗಂಜಿದಡೆಂತಯ್ಯ!
ಸಮುದ್ರದ ತಡೆಯಲ್ಲಿ ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯ!
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯ!
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ.
ಲೋಕದೊಳಗೆ ಹುಟ್ಟದ ಬಳಿಕ ಸ್ತುತಿನಿಂದೆಗಳು ಬಂದರೆ,
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಸ್ತುತಿಯೆಂದರೆ ಪ್ರಾಣದ ಸವಿದುತ್ತು. ಹೊಗಳಿಕೆಗೆ ಮೈಮರೆಯುವ ವದೇ ಪ್ರಾಣದ ಜೀವಾಳ. ಅದಕ್ಕೆ ಉಬ್ಬಿಹೋಗುವದೇ ಅದರ ಹಸಿವೆ-ತೃಷೆ ಗಳ ತೃಪ್ತಿ. ಹೊಗಳಿಕೆಗೆ ಅಡಿಯಾಳಾಗಿ, ಅಡಿದೊತ್ತಾಗಿ ಬಿದ್ದುಕೊಂಡಿ
ರುವ ಪ್ರಾಣವು ಅದಕ್ಕೆ ತೀರ ವಿರೊಧಕರವಾದ ತೆಗಳಿಕೆಯನ್ನು ತಾಳುವುದೆಂತು? ಸಿಟ್ಟಿಗೇಳುವುದು; ಕಿಡಿಕಿಡಿ ಕೆದರುವದು; ಗಳಹುವುದು; ಹೋರಾಟಕ್ಕೆ ನಿಲ್ಲವುದು. ಅಂಥ ಹುಚ್ಚಾಟಗಳನ್ನೆಲ್ಲ ಬದಿಗಿರಿಸಿ ಸಮಾಧಾನ
ಯಾಗಿರುವುದೇ ನಿಜವಾದ ದಾರಿ. ಅಂಥ ಸನುತೆಯನ್ನು ಕಾಯ್ದುಕೊಳ್ಳುವದಕ್ಕೆ ಪ್ರಾಣವನ್ನು ಹತ್ತಿಕ್ಕಬೇಕಾಗುತ್ತದೆ.

ಪ್ರಾಣವು ತನ್ನ ಗೊಣಗಾಟನನ್ನು ಆರಂಭಿಸುತ್ತದೆ. ಅದರ ನೆತ್ತಿಯನ್ನು ಕುಕ್ಕಿ ಕುಳ್ಳಿರಿಸಬೇಕು. ಅದು ಮೈಕೊಡಹಲು ಆರಂಭಿಸುತ್ತಲೇ ಅದನ್ನು ಬಿಗಿಹಿಡಿದು ನಿಲ್ಲಿಸಬೇಕು. ಆಗ ಬುದ್ದಿಯು ಸಮತೆಯನ್ನು ಕಾಯ್ದುಕೊಳ್ಳಬಲ್ಲದು. ಮೈ ತನ್ನ ಕುಣಿತಕ್ಕೆ ತಾಳ ಕಲಿಸಬಲ್ಲದು.

ಆರೇನೆಂದರೂ ಓರಂತಿಪ್ಪುದೇ ಸಮತೆ.
ಆರು ಜರೆದರೂ ಅವರನ್ನ ಮನದ ಕಾಳಿಕೆಯ
ಕಳೆದರೆಂಬುದೇ ಸಮತೆ.
ಆರು ಸ್ತೋತ್ರ ಮಾಡಿದರೂ ಅವರೆನ್ನ ಜನ್ಮದ
ಹಗೆಗಳಂತೆ ಸಮತೆ,
ಇಂತಿದು ಗುರುಕಾರುಣ್ಯ.
ಮನವಚನಕಾಯದಲ್ಲಿ ಅಹಿತವಿಲ್ಲದೆ
ಕಪಿಲಸಿದ್ಧಮಲ್ಲಕಾರ್ಜುನಯ್ಯ, ನಿಮ್ಮವರ
ನೀನೆಂಬುದೇ ಸಮತೆ.
ನಿಮ್ಮವರನ್ನು ನೀನೆಂಬುದೇ ಸಮತೆಯಾಯ್ತು. ಹಾಗಾದರೆ ನಿಮ್ಮವರೆಂದರೆ ಯಾರು? ದೈವಭಕ್ತರಿಗೆ ನಿಮ್ಮವರೆನ್ನಬೇಕಲ್ಲವೇ? ದೈವಭಕ್ತರಾದವರು- ಯಾವ ಜಾತಿಯಲ್ಲಿ ಹುಟ್ಟದರೇನು, ಯಾವ ಗೋತ್ರದಲ್ಲಿ ಬೆಳೆದರೇನು, ಅವರ ಮತ ಯಾವುದೇ, ಇರಲೊಲ್ಲದೇಕೆ, ಅವರ ಪಂಥವು ಏನೇ ಇರೇಲೊಲ್ಲದೇಕೆ.
ದೈವಭಕ್ತರೆಲ್ಲ ಒಂದೇ ಕುಲದವರು. ಅವರು ಒಂದೇ ಪಂಥವನ್ನು ತುಳಿಯ ತಕ್ಕವರು. ಒಂದೇ ಮತವನ್ನು ಅನುಸರಿಸತಕ್ಕವರು. ಒಂದೇ ಜಾತಿಗೋತ್ರದ ಎಳೆಯಲ್ಲಿ ಪವಣಿಸಲ್ಪಟ್ಟವರನ್ನೆಲ್ಲ ಸಮದೃಷ್ಟಿಯಿಂದ ಕಾಣುವದಕ್ಕೂ ಸಹನೆ ಬೇಕು; ತಾಳ್ಮೆಬೇಕು; ಸಮತೆ ಕೈಗೂಡಬೇಕು. ಅದು ಹೃದಯಾಂತರಾಳದಿಂದ ದ್ರವಿಸಬೇಕು.

ದೇವದೇವ, ಬಿನ್ನಪವ ಅವಧಾರು.
ವಿಪ್ರಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತ ರಾದವರನ್ನೆಲ್ಲ ಒಂದೇ ಎಂಬೆ.
ಹಾರುವ ಮೊದಲು ಅಂತ್ಯಜ ಕಡೆಯಾಗಿ
ಭವಿಯಾದವರನೊಂದೇ ಎಂಬೆ.
ಹೀಗೆಂದು ನಂಬುವದೆನ್ನ ಮನವು.
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು
ಸಂದೇಹವುಳ್ಳರೆ,
ಹಲ್ಲುದೋರ ಮೂಗ ಕೊಯ್ಯಿಕೂಡಲಸಂಗಮದೇವಾ.

ದೈಭಕ್ತರನ್ನೆಲ್ಲ ದೈವವೆಂದೇ ಭಾವಿಸಿದರೆ ಸಮತೆಯ ಒಂದು ಉಚ್ಚನೆಲೆ ಯನ್ನೇರಿದಂತೆಯೇ ಸರಿ. ಅವನಿಗೆ ಮುಳ್ಳುಹಾಸಿಗೆಯೂ ಅಷ್ಟೇ; ಹಂಸ ತುಪ್ಪಳದ ಹಾಸಿಗೆಯೂ ಅಷ್ಟೇ. ತಲೆಯ ಮೇಲೆ ಕೈದುಗಳೆರಗಿದರೂ ಹೂಗ
ಳೇರಿದರೂ ಒಂದೇ ಅವನಿಗೆ. ತಟ್ಟೆಯಲ್ಲಿ ಅನ್ನ ನೀಡಿದರೆ ಅವನು ಹಿಗ್ಗನು; ಮಣ್ಣು ಸುರಿದರೆ ಕುಗ್ಗನು. ಉರಿ ಬಂದರೂ ಸರಿಯೆ, ಸಿರಿ ಬಂದರೂ ಸರಿಯೇ. ಹಾಲಲ್ಲಿ ಅದ್ದಿದಾಗ ಹರುಷಬಟ್ಟಂತೆ ನೀರಲ್ಲದಿದ್ದಾದಾಗಲೂ ಹೊರೆಯೇರುವನು.

ಅಂಥ ಸಮದೃಷ್ಟಿಯುಳ್ಳವನ ಕಣ್ಣಿಗೆ ಉದ್ಯೊಗಭೇದದಿಂದ ಉಚ್ಚ ನೀಚತೆಗಳು ಕಾಣಿಸಿಕೊಳ್ಳಿಲಾರವು. ಜನ್ಮಭೇದದಿಂದ ಮೇಲು-ಕೀಳುಗಳು ಗೋಚರಿಸಲಾರವು. ಅವನ ದೃಷ್ಟಿಯು ಬಾಳುಬದುಕಿನ ಜಂಜಡಗಳನ್ನೆಲ್ಲ
ಉರಿದು ಹಾಕಿ, ಅಚ್ಚ ಚಿನ್ನವನ್ನೇ ಉಳಿಸಿ ಕಾಣಸಮರ್ಥವಾಗಿರುತ್ತದೆ. ಅಂತೆಯೇ ಅಂಥವರು-

ಸೆಟ್ಟಿಯೆಂಬೆನೇ ಸಿಂಯಾಳನ?
ಮಡಿವಳನೆಂಬೆನೆ ಮಾಚಯ್ಯನ ?
ದೋಹರನಂಬೆನೇ ಕಕ್ಕಯ್ಯನ ?
ಮಾದರನೆಂಬೆನೇ ಚನನ್ನಯ್ಯ ?
ಅನು ಹಾರುವನೆಂದಡೆ ಕೂಡಲಸಂಗಯ್ಯ
ನಗುವನಯ್ಯ.
ಎಂದು ಹೇಳುತ್ತಾರೆ.
ದೈವಭಕ್ತನು ಒಂದು ಕೈಯಲ್ಲಿ ಕತ್ತಿಯನ್ನು ಹಿರಿದಿರಲಿ, ಇನ್ನೊಂದು-ಕೈಯಲ್ಲಿ ಮಾಂಸನನ್ನು ಹಿಡಿದಿರಲಿ, ಬಾಯಲ್ಲಿ ಸುರೆಯಗಡಿಗೆ ಕಟ್ಟಿರಲಿ; ಆದರೆ ಅವನ ಕೊರಳಲ್ಲಿ ದೇವರಿದ್ದರೆ ಸಾಕು. ಅವರನ್ನು ಲಿಂಗನೆಂದು ಭಾವಿಸಲಿಕ್ಕೂ, ಸಂಗನೆಂದು ಸಂಭಾವಿಸಲಿಕ್ಕೂ ಹಿಂದುಮುಂದು ನೋಡದ ಸಮ ಚಿತ್ತನು. ಅಂಥವರನ್ನು ಲಿಂಗಮುಖಿಗಳೆಂದು ಬಗೆಯುವದರಲ್ಲಿ ಸಂಶಯವೇ ಇಲ್ಲ. ಇಷ್ಟಲ್ಲದೆ ಇನ್ನೂ ಗಟ್ಟಿಯಾಗಿ ಹೇಳುವುವೇನಂದರೆ-.

ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ, ಬಂಟ,
ಓಲೆಯಕಾರನೆಂದೆನಾದಡೆ
ನೀ ಮುಂತಾಗಿ ಬಂದ ಭಕ್ತರ ನೀನೆಂದೆನ್ನದಿರ್ದಡೆ
ಅದೇ ದ್ರೋಹ,
ನಡೆನುಡಿ ಹುಸಿಯುಂಟಾದರೆ ಕೂಡಲಸಂಗಮದೇವರ
ತೋರಿದ ಚೆನ್ನಬಸವಣ್ಣನಾಣೆ.

ದೈವಭಕ್ತರೆಲ್ಲ ಒಂದೇ ಎನ್ನುವ ದೃಷ್ಟಿಯು, ದೈವಸೃಷ್ಟಿಯೆಲ್ಲ ಒಂದೇ ಎಂದು ಬಗೆಯುವದಕ್ಕೆ ತಡವಾಗದು. ಸಮದೃಷ್ಟಿ ಸಮತಾ ಬುದ್ಧಿಯ ಕೈಗೋಲು. ಸಮತೆಯು ಸಹನೆಯ ಶಿಶು. ಸಮತೆ ತಪ್ಪಿದಲ್ಲಿ ಸಮದೃಷ್ಟಿ ಕಾಣೆಯಾಗುತ್ತದೆ. ಸಮದೃಷ್ಟಿ ತಪ್ಪಿದರೆ ಸಹನೆ ಅದೃಶ್ಯನಾಗುತ್ತದೆ. ಹೊಗಳಿಕೆಯನ್ನು ಸ್ವಾಗತಿಸಿ ತೆಗಳಿಕೆಯನ್ನು ಅಲ್ಲಗಳಿಯುವ ನಗ್ನನಟನೆಯನ್ನು ಆಗ ಪ್ರಾಣವು ಆರಂಭಿಸುತ್ತದೆ. ಸಹನೆಗೆಡೆಗೊಡದ ಪ್ರಾಣವು ಪರರ ಸ್ತುತಿ-ಪ್ರಶಂಸೆಗಳನ್ನು ಉಣ್ಣುವುದಕ್ಕೆ ಬಾಯ್ತೆರೆದು ನಿಲ್ಲುತ್ತದೆ. ಹಾಕಿದಷ್ಟೂ ಕಬಳಿಸುತ್ತದೆ. ಬಾಯಿಗೆ ಬಂದಷ್ಟೂ ನುಂಗುತ್ತದೆ. ಅದರಿಂದ ಅವಿದ್ಯೆ-ಅಜ್ಞಾನಗಳು ಹೆಚ್ಚುತ್ತಲೇ ಹೋಗುವದು. ಅದೇ ಮಾಯೆಯ ಕೈಚಳಕ. ಮಾಯೆಯ ಕೈಚಳಕಕ್ಕೆ ಸಿಲುಕಿದ ಗೊಂಬೆಯಾದ ಒಡಲು, ಯಾರ ಮಾತು ಕೇಳುವುವಕ್ಕೂ ಸಹನೆಯನ್ನು ಕಳಕೊಂಡಿರುತ್ತದೆ.

ಎನ್ನೊಡಲಾದರೆ ಎನ್ನಿಚ್ಚೆಯಲ್ಲಿರದೆ ?
ನಿನ್ನೊಡಲಾದರೆ ನಿನ್ನಿಚ್ಛೆಯಲ್ಲಿರದೆ?
ಅದು ಎನ್ನೊಡಲೂ ಅಲ್ಲ, ನಿನ್ನೊಡಲೂ ಅಲ್ಲ.
ಅದು ನೀಮಾಡಿದ ಜಗದ ಬಿನ್ನಣದೊಡಲು
ಕಾಣಾ ರಾಮನಾಥಾ.
ಎನ್ನುವ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಹೊಗಳಿಕೆಗೆ ಹೇಸಿ ತೆಗಳಿಕೆ ಯನ್ನು ನಗೆಮೊಗದಿ೦ದ ಬರಮಾಡಿಕೊಳ್ಳ ನಿಲ್ಲುವುದೇ ಸಹನೆಯ ಪರಿಪಕ್ವತೆ. ಅದೇ ಪ್ರಾಣಪರಿವರ್ತನದ ಲಕ್ಷಣ. ಪರರಿಗಿಂತ ತನ್ನ ತಪ್ಪು ಹಿರಿದಾಗಿ ಕಾಣ
ತೊಡಗುವದು ಇಲ್ಲಿಯೇ. ಎನಗಿಂತ ಕಿರಿಯರಿಲ್ಲನೆಂಬ ಭಾವನೆಯು ಮೊಳೆಯುವುದು ಇಲ್ಲಿಯೇ. ಮಾವಿನಕಾಯೊಳಗೊಂದು ಎಕ್ಕೆಯ ಕಾಯಿ ನಾನೆಂದೆಣಿಸುವದು ಇಲ್ಲಿಯೇ. ಮರದ ನೆರಳಲ್ಲಿ ಕುಳಿತು ತನ್ನ ನೆರಳನರಸುವರೇ- ಎಂದು ಕೇಳುವುದು ಇಲ್ಲಿಯೇ.

ಎನ್ನವರೊಲಿದು ಹೊನ್ನಶೂಲದಲಿಕ್ಕಿದರೆನ್ನ
ಹೊಗಳಿ ಹೊಗಳಿ.
ಎನ್ನ ಹೊಗಳತೆ ಎನ್ನ ಮೈಗೊಂಡಿತಲ್ಲಾ!
ಅಯ್ಯೋ ನೊಂದೆನು, ಸೈರಿಸಲಾರೆನು.
ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ!
ಅಯ್ಯೋ ನೊಂದೆನು, ಸೈರಿಸಲಾರೆನು.
ಕೂಡಲಸಂಗಮದೇವಾ ನೀನೆನಗೊಳ್ಳಿದನಾದರೆ
ಎನ್ನ ಹೊಗಳತೆಗಡ್ಡಬಾರಾ ಧರ್ಮೀ.

ಎಂದು ಅಂತರಂಗದಲ್ಲಿ ಕಲವಲವೇಳುವುದು ಇಂಥಲ್ಲಿಯೇ ಜೀವಿಯು ಆತ್ಮಸ್ತುತಿಗೆ ಹೇಸಿಕೊಳ್ಳುವುದು ಅಷ್ಟೇ ಅಲ್ಲ, ಪರನಿಂದೆಗೆ ಬೇಸರನನ್ನೂ ತಳೆಯುತ್ತದೆ. ಹೊಗಳಿಕೆಯು ಹೊನ್ನಶೂಲವಾಗುವದು ಮೊದಲು. ಹೊಗಳಿಕೆಯಂತೆ ಪರನಿಂದೆಗೆ ಜಿಗುಪ್ಸೆಹುಟ್ಟುವುದು ಹಿಂದಿನಿಂದ.

ಬಯ್ದವರೆನ್ನ ಬಂಧುಗಳೆಂಬೆನು.
ನಿಂದಿಸಿದವರೆನ್ನ ತಂದೆಯೆಂಬೆನು ”
ಎಂದೆನ್ನುವದಕ್ಕೆ ಸಿದ್ಧನಾದ ಜೀವಿಯ ಪ್ರಾಣವು ಪರಿವರ್ತಿತವಾಗಿರುವುದರಲ್ಲಿ ಸಂಶಯವೇ ಇಲ್ಲ. ಅದೇ ಸಹನೆಯ ಅರಳುಮಲ್ಲಿಗೆ.

ಪ್ರಾಣವು ಜಗ್ಗಿದತ್ತ ಬೆಂಬಳಿಸುವದೇ ಸಹನೆಯಲ್ಲ. ಅದರ ಹಾರಾಟ ತೂರಾಟಗಳಿಗೆ ಎದೆಗೆಡದೆ ಎದೆಗೊಟ್ಟು ನಿಲ್ಲುವದೇ ಸಹನೆ. ಪ್ರಾಣದ ಗೊಣಗಾಟಕ್ಕೆ ಕಿವಿಗೊಡದಿರುವುದೇ ಸಹನೆಯೆನ್ನಲಡ್ಡಿಯಿಲ್ಲ.

ಮನುಷ್ಯನು ಏನೇ ಮಾಡನಿಂತರೂ ಅದಕ್ಕೆ ಸಹನೆ ಮೂಲ ಬಂಡವಲು. ಆತನು ಏನೇ ಆಗ ನಿಂತರೂ ಅಲ್ಲಿ ಸಹನೆ ಮೈಗೊಡುವದು ಅನಿವಾರ್ಯ. ಇದ್ದುದನ್ನು ಅಲ್ಲಗಳೆದು, ಇಲ್ಲದ್ದನ್ನು ಬೇಡಿ, ಅತ್ತು, ಕರೆದು, ಜೀರಿ, ಕೂಗಿ, ಕಾಲುಹೊಸೆದು ಉರುಳಾಡುವ ಪ್ರಾಣವು, ತನಗಿಂತ ದುಃಖತರ ಪರಿಸ್ಥಿತಿಯನ್ನು ಬಗೆಯದೆ, ತನಗಿಲ್ಲದ ಅನುಕೂಲತೆಯಿರುವ ಕಡೆಗೆ ಕೈಮಾಡಿ ತೋರಿಸಿ ಅದು ಬೇಕೆಂದು ಹಟತೊಟ್ಟಾಗ, ಅದರ ಗೊಂದಲಕ್ಕೆ ಲಕ್ಷ್ಯಗೊಡದಿರುವದೇ ಅವಕ್ಯಕ ಉಪಾಯ.

ಹೊಗಳಿಕೆಯ ಬೇಸರು, ತೆಗಳಿಕೆಯ ಸ್ವಾಗತ ಇದು ಸಹನೆಯ ಒಂದು ನೆಲೆಯಾದರೆ, ಬಂದ ಸಂಕಟಗಳನ್ನು ನಗೆಮೊಗದಿಂದ ಎದುರಿಸುವದು ಸಹನೆಯ ಇನ್ನೊಂದು ನೆಲೆ. ತಪ್ಪು ಹೆರವರದಿದ್ದರೆ ಮನ್ನಿಸುವನು, ತನ್ನದಿದ್ಧರೆ
ಲೆಕ್ಕಿಸದೆ ಮನ್ನಿಸುವನು. ನೂರುಸಾರೆ ಬಿದ್ದರೂ ನೂರುಸಾರೆ ಎದ್ದೇಳಲಿಕ್ಕೆ ಆತನು ಗಂಡಗಚ್ಚಿಹಾಕಿ ನಿಂತಿರುತ್ತಾನೆ.

ನಾಳೆಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ಎಮಗೀಗಲೇ ಬರಲಿ.
ಇದಕಾರಂಜುವರು, ಇದಕಾರಳಕುವರು?

ಅಂಜದಿದ್ದರೆ ತೀರಲಿಲ್ಲ, ಅಳುಕದಿದ್ದರೆ ತೀರಲಿಲ್ಲ. ವಿಘ್ನಗಳನ್ನು ನಗೆ ಮೊಗದಿಂದ ನೋಡುವದು ಬಹು ಮುಖ್ಯವಾದ ಕೆಲಸ. ವೈರಿಯನ್ನು ಕಂಡು ನಗುವದೆಂದರೆ ಅವನ ಕೈಯೊಳಗಿನ ಕೈದುಗಳನ್ನೆಲ್ಲ ಕಸಿದುಹಾಕಿದಂತೆಯೇ ಅಹುದು. ಹೋರಾಟವಿಲ್ಲದೆ ವೈರಿಯನ್ನು ಸೋಲಿಸಲಿಕ್ಕೆ ಸಹನೆಕೊಟ್ಟು ನಗೆ ಮೊಗದಿಂದ ನಿಲ್ಲುವದು ಸರಿಯಾದ ಉವಾಯ.

ಆ ನಗೆಯಲ್ಲಿ ಆತ್ಮನಿರ್ಧಾರವಿರುತ್ತದೆ; ಅದರಲ್ಲಿ ದೈವೀಶ್ರದ್ಧೆಯಿರುತ್ತದೆ. ಆತ್ಮನಿರ್ಧಾರವೂ ದೈವೀಶ್ರದ್ಧೆಯೂ ಹುಟ್ಟದಾಗಲೇ ಸಹನೆ ಸಾರ್ಥಕಗೊಳ್ಳುತ್ತದೆ. ಆತ್ಮನಿರ್ಧಾರಪೂರಿತವೂ ದೈವೀಶ್ರದ್ಧಾಯುಕ್ತವೂ ಆದ ನಗೆಯು ಸಹ
ನೆಯ ನೆಲಗಟ್ಟಿನ ಮೇಲೆ ನಿಂತಾಗ ಅದು, ಪರಾಕ್ರಮಣವ ದಾಳಿಗಾರರಿಗೆ ಏವಾಗಿ ಪರಿಣಮಿಸುತ್ತದೆ-ಬಲ್ಲಿರಾ ?

ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ,
ಉಭಯವನೊಡಗೂಡದ ಚಿಮ್ಮುಟ.
ರೂಹಿಲ್ಲದ ಬಾಣ, ಹಲ್ಲಿಲ್ಲದ ಹಣಿಗೆ.

ಹೀಗೆ ಸಹನೆಯು ಸೋಲಿಲ್ಲದ ಶಸ್ತ್ರವಾಗಿದೆ. ನೋಲರಿಯದ ಅಸ್ತ್ರವಾಗಿದೆ. ಸೋತವರಿಗೂ ಗೆಲವನ್ನು ನೀಡುವ ಪ್ರಚಂಡ ದಿಗ್ವಿಜಯವಾಗಿದೆ. ಅದು ಕಾಯದ ಕತ್ತಲೆಯನ್ನು ಕಳೆಯುವ ಮಿಂಚಿನ ಬೆಳಕು. ಅದು ಮಾಯೆಯ
ಮರೆಯನ್ನು ತೆಗೆದುಹಾಕುವ ಪೊಂಚಿನ ಸೆಳಕು.”

ದಯಾಮಯಿಯಾದ ಜಗನ್ಮಾತೆಯು ಸಹನೆಯನ್ನು ಕುರಿತು, ಕೊನೆಯಲ್ಲಿ ಉಸುರಿದ ಅಮರ ನುಡಿಗಳು ಯಪವೆಂದರೆ–
” ಪ್ರಾಣದಲ್ಲಿ ಉಂಟಾದ ಸಹನಶೀಲತೆಯ ಮೂಲಕ ಈ ದೇಹವನ್ನು ಸ್ವಾಧೀನಪಡಿಸಿಕೊಳ್ಳುವದೇ ನಿಜವಾದ ಸಭ್ಯತೆ; ಸಜ್ಜನಿಕೆ. ಮುಂದೆ ಬಂದು ನಿಲ್ಲುವ ಅಡೆ-ತಡೆಗಳನ್ನು ಎದುರಿಸಬಲ್ಲ ಸಾಹಸವೃತ್ತಿಯಾಗಲಿ, ಕ್ರೀಡಾ ಲೋಲ ಭಾವನೆಯಾಗಲಿ, ಲೋಕೈಕವೀರನ ಧೈರ್ಯವಾಗಲಿ ಆದರ್ಶ ಸಹನೆಯ ಪ್ರತೀಕಗಳೇ ಆಗಿವೆ.

ದಿವ್ಯ ಪರಿವರ್ತನವು ಕಷ್ಟಸಹಿಣ್ಣುತೆಯಿಂದಲೇ ಸಾಧ್ಯವೆಂದು ಕಟ್ಟು.ನಿಟ್ಟು ಇದ್ದರೆ, ಪ್ರಾಣವು ಬೇಕಾದುದನ್ನು ಪ್ರಾಂಜಲವಾಗಿ ನಗನಗುತ್ತ ಸಹಿಸಲು ಸಿದ್ಧವಾಗುವ ಕ್ಷಣವೂ ಬರುತ್ತದೆ. ಯಾವಾಗ? ಪರಿವರ್ತನಹೊಂದಿದ
ಪ್ರಾಣಕ್ಕೆ ಜಯಸಿದ್ದಿಯ ಬಗ್ಗೆ ಅಚಲ ವಿಶ್ವಾಸವುಂಟಾದಾಗ.

ಸಮರವು ಅದೆಷ್ಟು ದೀರ್ಫಕಾಲ ನಡೆದರೂ ಚಿರವಿಜಯವು ನಿಶ್ಚಿತ ವಾಗಿರುವದರಿಂದ ಮೊದಲು ತುಸು ಹೊತ್ತು ಧೀರೋಚಿತವಾಗಿ ಸಹಿಸಿ ಕೊಳ್ಳುವ ಸಂಕಲ್ಪಮಾಡಿರಿ. “

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರವೀಂದ್ರರ ಮುಖಚಿತ್ರ
Next post ನಗೆ ಡಂಗುರ-೧೫೯

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…