ನಾವು ಜರ್ಮನ್-ಅಮೇರಿಕನ್ ಕ್ಯಾಂಪಸ್ಸಿನಲ್ಲಿ ಇರುತ್ತಿದ್ದರಿಂದ ಕ್ಯಾಂಪಸ್ಸಿನ ಸ್ತ್ರೀ ಸಮೂಹದಲ್ಲಿ ಮಾತ್ರ ಎರಡು ತುಂಡಿನ ವಾತಾವರಣ ನೋಡುವುದು, ಕೇವಲ 20 ಕಿ.ಮೀ. ಅಂತರದ ಜೆಡ್ಡಾ ಪಟ್ಟಣದಲ್ಲಿ ಮೈಯೆಲ್ಲಾ ಬುರ್ಕಾದಲ್ಲಿ ಮುಚ್ಚಿಕೊಂಡು ಬುರ್ಕಾದ ಕಿಂಡಿಯೊಳಗೆ ಕೇವಲ ಅವರ ಕಣ್ಣುಗಳೆರಡು ನೋಡುವದು-ಎರಡು ವಿರುದ್ದ ಧ್ರುವಗಳಂತೆ ಇರುತ್ತಿತ್ತು. ಎಷ್ಟೋ ಶತಮಾನಗಳ ಅಂತರ ಇಲ್ಲಿ ಒಂದೇ ದಿನದಲ್ಲಿ ಎರಡು ವಿಭಿನ್ನ ವಾತಾವರಣ ಕಣ್ಣು ಮುಂದೆ ನಿಲ್ಲುತ್ತದೆ. ಇವೆರಡನ್ನೂ ಒಂದುಗೂಡಿಸುವುದು ಇಲ್ಲಿ ವ್ಯರ್ಥ ಪ್ರಯತ್ನ.
ಸುಮಾರು 1960ರ ವರೆಗೆ ಹುಡುಗಿಯರಿಗಾಗಿ ಕ್ರಮಬದ್ಧವಾದ ಶಿಕ್ಷಣವೇ ಇಲ್ಲಿ ಇರಲಿಲ್ಲವಂತೆ. ನಂತರದಿಂದ ಇಲ್ಲಿಯವರೆಗೆ ಸಾಕಷ್ಟು ಸುಧಾರಿಸಿದ್ದಾರೆ. ಆದರೆ ಸಹ ಶಿಕ್ಷಣ ಸಂಸ್ಥೆಗಳು ಇನ್ನೂ ರೂಢಿಯಲ್ಲಿ ಬಂದಿಲ್ಲ. ವಿದೇಶೀ ಶಿಕ್ಷಣ ಸಂಸ್ಥೆಗಳು ನಡೆಸುವ ಶಾಲೆಗಳು ಬೇರೆ ಇವೆ. ಅಲ್ಲಿಲ್ಲ ಎಲ್ಲ ದೇಶದ ಮಕ್ಕಳು ಸಹ ಶಿಕ್ಷಣ ಪಡೆಯುತ್ತಾರೆ.
ಸೌದಿಯಲ್ಲಿ ಸುನ್ನಿ ಮುಸ್ಲಿಂ ಧರ್ಮದ ಗುರುಗಳು (ಇವರಿಗೆ ಸೌದಿಯಲ್ಲಿ ಉಲೇಮಾ ಅಥವಾ ಮುತ್ತವಾ ಎಂದು ಕರೆಯುತ್ತಾರೆ). ಕೆಲವೊಂದು ಬಿಗಿಯಾದ ಕಾಯ್ದೆ ಕಾನೂನುಗಳನ್ನು ಮಾಡಿದ್ದಾರೆ. ಈ ಧಾರ್ಮಿಕ ಕಾಯ್ದೆ ಕಾನೂನುಗಳ ಹಿತರಕ್ಷಣೆ ಎಲ್ಲ ಅವರ ಕೈಯಲ್ಲಿಯೇ. ಹೀಗಾಗಿ ರಾಜಕೀಯ ಇವರಿಗೇನೂ ಅಡ್ಡಬರುವುದಿಲ್ಲ. ಬದಲಾಗಿ ಇವರಿಗೇ ಎಲ್ಲ ಆಡಳಿತ ವರ್ಗ ಆದಷ್ಟು ತಗ್ಗಿಕೊಂಡು ನಡೆಯುತ್ತಾರೆ. ಹೀಗಿರಬೇಕಾದಲ್ಲಿ ಸ್ತ್ರೀಯರ ಸಾಮಾಜಿಕ ಚಟುವಟಿಕೆಗಳನ್ನು ಈ ಮುತ್ತವಾಗಳು ಕಠೋರವಾಗಿಯೇ ನಿಯಂತ್ರಿಸುತ್ತಾರೆ.
ಶೇ. 98ದಷ್ಟು ಸ್ತ್ರೀಯರಿಗೆ ಅನಿಸಿಕೆ ವಿಚಾರಗಳಲ್ಲಿ ಸ್ವತಂತ್ರತೆ ಅನ್ನುವದರ ಅರ್ಥ ಬಹುಶಃ ಗೊತ್ತೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇದ್ದಾರೆ. ಗಂಡನಿಗೆ ಯಾವುದೇ ದೃಷ್ಟಿಯಿಂದಲೂ ಮರು ಉತ್ತರವಾಗಲೀ, ಮಾತಾಡುವುದಾಗಲೀ ಮಾಡುವುದಿಲ್ಲ. ಸ್ವಲ್ಪ ಧ್ವನಿ ಎಲ್ಲಾದರೂ ಏರಿಸಿದರೆ ಗಂಡ ತನ್ನನ್ನು ಬಿಟ್ಟಾನು ಎನ್ನುವ ಹೆದರಿಕೆ. ಹೀಗಾಗಿ ಮೂಕವೇದನೆಯ ರೋದನೆ ಯಾವತ್ತೂ. ಇನ್ನೊಂದೆಂದರೆ ಇಲ್ಲಿಯ ಸ್ತ್ರೀ-‘ಹೆಣ್ಣಾಗಿ ಹುಟ್ಟಿರುವದೇ ಗಂಡನ-ಮಕ್ಕಳ ಸೇವೆಗೆ, ಅದು ಬಿಟ್ಟು ಬೇರೆ ಏನೂ ಮಾಡುವಂತಿಲ್ಲ’ ಎಂದು ತಿಳಿದುಕೊಂಡೇಬಿಟ್ಟಿರುತ್ತಾಳೆ.
ಪ್ರತಿಯೊಂದು ಹೆಣ್ಣು ತಾನು ತನ್ನ ಮನೆಯಲ್ಲಿ ತನ್ನ ತಾಯಿ ಅಕ್ಕ-ಅಜ್ಜಿ-ಮುತ್ತಜ್ಜಿಯ ಕಥೆ ಕೇಳಿರುತ್ತಾಳೆ, ನೋಡಿರುತ್ತಾಳೆ. ಅಷ್ಟೇ ಅಲ್ಲದೆ ತನ್ನ ನೆರೆಹೊರೆಯ, ಸಂಬಂಧಿಕರ ಸ್ತ್ರೀಯರ ಮಾನಸಿಕ-ದೈಹಿಕ ಪರಿಸ್ಥಿತಿ ಕಣ್ಣಾರೆ ನೋಡಿರುತ್ತಾಳೆ. ಹೀಗಾಗಿ ತನಗೆ ಬುದ್ದಿ ಬಂದಂದಿನಿಂದ ತಾನು ಸುಂದರ ವಧುವಾಗಿ ಹಸೆಮಣೆ ಏರಿ ಸಂಸಾರ ಕಟ್ಟುವ ಕನಸು ಕಾಯುವಲ್ಲಿ ಮಾನಸಿಕವಾಗಿ ಅರ್ಧ ಕುಸಿದು ಹೋಗಿರುತ್ತಾಳೆನಿಸುತ್ತದೆ.
ಯಾಕೆಂದರೆ ತಾನು ಗಂಡನಿಗೆ ಎರಡನೆಯ-ಮೂರನೆಯ-ನಾಲ್ಕನೆಯ ಹೆಂಡತಿ ಯಾಗಬಹುದು. ಮೊದಲ ಗಂಡನ ಮೊದಲ ಹೆಂಡತಿಯಾಗುವ ಅದೃಷ್ಟ ಅತಿ ಕಡಿಮೆ ಎನ್ನುವದು ಸಂಸಾರಿಕ ಪರಿಸರದಿಂದ ಗೊತ್ತೇ ಆಗಿರುತ್ತದೆ. ಹೀಗಾಗಿ ಅವರು ಎರಡನೆಯ, ಮೂರನೆಯ, ನಾಲ್ಕನೆಯ ಹೆಂಡತಿಯ ಪಾತ್ರ ಯಾವ ಕಣ್ಣೀರಿಲ್ಲದೇ ತೆಗೆದು- ಕೊಳ್ಳುತ್ತಾರೆ. ಅವರಿಗೆ ಬೇರೆ ಹಾದಿಯೇ ಇಲ್ಲ. ತಾಯಿ-ಅಜ್ಜಿ ತುಳಿದ ಹಾದಿಯಲ್ಲಿಯೇ ತನಗೇ ಗೊತ್ತಿಲ್ಲದಂತೆಯೇ- ಒಪ್ಪಿಕೊಂಡು ಮದುವೆಗೆ ಸಿದ್ದಳಾಗುತ್ತಾಳೆ. ಮೊದಲನೆಯವಳಾದರೆ ಅದೃಷ್ಟ ಸ್ವಲ್ಪ ಒಳ್ಳೆಯದು. ಇಲ್ಲದೇ ಹೋದರೆ ದೊಡ್ಡವಳ ದರ್ಬಾರಿನಲ್ಲಿ ಒದ್ದಾಡುವದಂತೂ ಖಂಡಿತ.
ಇಲ್ಲಿಯ ಮಹಿಳೆಯರಿಗೆ ಕೆಲಸದ ಆಳುಗಳು ಬೇಕೇ ಬೇಕು. ಇತ್ತೀಚಿಗೆ ಅದೊಂದು ದೊಡ್ಡಸ್ತಿಕೆಯ ವಿಷಯವೇ ಆಗಿದೆ. ಊಟ ಇಲ್ಲದಿದ್ದರೂ ಪರವಾಗಿಲ್ಲ, ಕೆಲಸದಾಳುಗಳು ಬೇಕೇ ಬೇಕಂತೆ. ಮಧ್ಯಮ ವರ್ಗದ ಮತ್ತು ಶ್ರೀಮಂತ ಕುಟುಂಬದವರಿಗೆ ಸಿರಿಯನ್. ಲೆಬನಾನ್, ಜೋರ್ಡಾನ್, ಇಜಿಪ್ತದ ಕೆಲಸದ ಹುಡುಗಿಯರು ಬೇಕು. ಸ್ಥಳೀಯ ಬಡ ಹುಡುಗಿಯರು ಚುರುಕಾಗಿರುವದಿಲ್ಲವೆಂಬ ಭಾವನೆ ಇರುವದು. ಮಧ್ಯಪೂರ್ವದಲ್ಲಿಯೇ ಲೆಬನಾನ್ ಮಹಿಳೆಯರು ಅತೀ ಸುಂದರಿಯರು. ಸುತ್ತ ಮುತ್ತಲಿನ ಅರಬರು ಈ ಮಹಿಳೆಯರನ್ನು ಮದುವೆಯಾಗಲು ಹಾತೊರೆಯುತ್ತಾರೆ.- ಬೇಕಾದಷ್ಟು ಹಣ ಕೊಟ್ಟು ಕೊಂಡುಕೊಳ್ಳಲಿಕ್ಕೆ ಇವರು ಸಿದ್ಧರು.
ಒಮ್ಮ ಸೌದಿ ಪೇಪರದಲ್ಲಿ ಓದಿದ ಕತೆ ಅಪ್ಪ ಮಗನ ಮದುವೆಗ ವ್ಯವಸ್ಥೆ ಮಾಡಿ ಕೊನೆಗೆ ಮಗ ವೇಳೆಗೆ ಸರಿಯಾಗಿ ಬರದೇ ಹೋದಾಗ ಮಗನ ಹುಡುಗಿಯನ್ನು (ತನ್ನ ಸೊಸೆಯನ್ನು) ತಾನೇ ಅ ಕ್ಷಣ ಮದುವೆಯಾದನಂತೆ. ನಮ್ಮಲ್ಲಿಯೂ ಇಂತಹ ಕಥೆಗಳು ಸಾಕಷ್ಟು.
ನೌದಿ ಅರೇಬಿಯದಲ್ಲಿ ಜೆಡ್ಡಾ ಅತ್ಯಾಧುನಿಕ ನಗರ-ಬೇರೆ ನಗರಗಳಷ್ಟು ಬಿಗಿ ಇಲ್ಲಿ ಅಷ್ಟಿಲ್ಲ. ಇಲ್ಲಿ ಸ್ಥಳೀಯ ಮಹಿಳೆಯರು ಅಂದರೆ ಹುಡುಗಿಯರು ಅಷ್ಟಿಟ್ಟು ಬೇರೆ ದೇಶ ಸುತ್ತಿ ಬಂದವರು ಸ್ವಲ್ಪ ಫ್ರೀ ಆಗಿ ಅಡ್ಡಾಡುತ್ತಾರೆ. ಅಂದರೆ ಹಗುರಾದ ನೈಲಾನ್ ಬುರ್ಕಾ ಹಾಕಿಕೊಂಡು ಝಗಝಗಿಸುವ ಷಾಪಿಂಗ್ ಕಾಂಪಲೆಕ್ಸ್‌ದಲ್ಲಿ ತಿರುಗಾಡುವ ಅವರನ್ನು ನೋಡಬೇಕು. ಬುರ್ಕಾದೊಳಗಡೆಯಿಂದ ಅವರ ಬಿಳಿಕಾಲುಗಳನ್ನು ಅಲಂಕರಿಸಿರುವ 3-4 ಇಂಚು ಎತ್ತರ ಚಪ್ಪಲಿಗಳು-ಸೊಂಟಕ್ಕೆ ಹಾಕಿದ ಅಮೇರಿಕನ್ ಡೈಮಂಡ್ ಚೈನ್‌ಗಳು- ಕುತ್ತಿಗೆಗೆ ಬಿಗಿದಿದ್ದ ನೆಕ್ಲೇಸ್‌ಗಳು ಕೈಯಲ್ಲಿ ಹೊಳೆಯುವ ಬಳೆಗಳು ಇವೆಲ್ಲದಕ್ಕೂ ಮಿಗಿಲಾಗಿ ಅವರು ತುಟಿಗೆ ಹಚ್ಚಿದ ಲಿಪ್‌ಸ್ಟಿಕ್, ಗಲ್ಲದ ರೋಜು ಎಲ್ಲಾ ಕಾಣುತ್ತವೆ. ಅವರ ಬಳುಕಾಡುವ ಮೈಮಾಟ ನೋಡಿ ಹುಡುಗರೇನು ಸುಮ್ಮನಿರುತ್ತಾರೆಯೇ? ಅವಳು ಯಾರು-ಯಾವ ಮನೆಯವಳು ಎಲ್ಲ ಗೊತ್ತಿರುತ್ತದೆ. ಬುರ್ಕಾ ಹಾಕಿಕೊಂಡು ಗುಂಪಿ ನಲ್ಲಿದ್ದರೂ ಇವಳೇ ಎಂದು ಗುರುತುಹಿಡಿಯುತ್ತಾರೆ.
ಜೆಡ್ಡಾ, ರಿಯಾದ್‌ದಲ್ಲೆಲ್ಲ ಪ್ತಿನ್ಸ್‌ಗಳು ಜಾಸ್ತಿ ಕಾಣಿಸುವರು. ಸೌದಿ ರಾಜನಿಗೆ (ಅಬ್ದುಲ್ ಅಜೀಜ್‌ಗೆ) ನೂರಾರು ಹೆಂಡತಿಯರು ಇದ್ದರೆಂದು ಒಂದು ಹೇಳಿಕೆ ಇದೆ. ಕಾಯಿದೆಯ ಪ್ರಕಾರ 3-4-5 ಎಂದೇ -ಇದ್ದರೂ ರಾಜನಿಗೆಲ್ಲಿಯ ಕಾಯ್ದೆ? ನೂರಾರು ಹೆಂಡತಿಯರಿರ ಬೇಕಾದರೆ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು ಸಂಖ್ಯೆ ಎಷ್ಟಿರಬೇಕೆಂದು ಊಹಿಸಲಸಾಧ್ಯ. ಇಂತಹ ಹುಡುಗರೆಲ್ಲ ನೌದಿ ರಾಜಕುಮಾರರುಗಳೆಂದು ಮೆರೆಯುತ್ತಾರೆ. ಇವರಿಗೆ ಒಳ್ಳೊಳ್ಳೆ ಕಾರುಗಳಿರುತ್ತವೆ. ಇವರ ಜೊತೆ ಬೇರೆ ಶ್ರೀಮಂತ ಹುಡುಗರೂ ಇರುತ್ತಾರೆ. ಹೀಗೆ ಗುಂಪು ಗುಂಪಾಗಿ ಕಾರಿನಲ್ಲಿ ಬಂದು ಹುಡುಗಿಯರ ಹಿಂದೆ ಚುಡಾಯಿಸುತ್ತ ಅಡ್ಡಾಡುತ್ತಾರೆ. ಬುರ್ಕಾದೊಳಗೇ ಇವರ ನಗು- ನಡದೇ ಇರುತ್ತದೆ. ಅವರ ಭಾಷೆ ನಮಗೇನೂ ತಿಳಿಯುತ್ತಿರಲಿಲ್ಲ. ಆದರೆ ನೈಸಗಿರ್ತಿಕವಾಗಿ ಹುಡುಗರು ಹುಡುಗಿಯರು ಒಂದೆಡೆ ಕೂಡಿದಾಗ ಆಡುವ ಮಾತು-ನಗೆ-ಎಲ್ಲ ಕಡೆಗೂ ಎಲ್ಲ ದೇಶದಲ್ಲೂ ಒಂದೇ ಎಂದು ತಿಳಿದು ನೋಡಿ ನಾವು ನಕ್ಕುಬಿಡುತ್ತಿದ್ದವು. ಮನೆಯ ಬಿಗಿ ವಾತಾವರಣದಿಂದ ಹುಡುಗಿಯರು ಬೇಸತ್ತು ಇಲ್ಲೋಂದಿಷ್ಟು ಹಗುರಾಗಿ ಹಾರಾಡುತ್ತಾರೆಂದೆನಿಸಿತು.
ತಮ್ಮ ಮಹಿಳೆಯರು ಹೊರಗಿನವರ್ಯಾರನ್ನೂ ನೋಡದಂತೆ, ಹೊರಗಿನವರು ಇವರನ್ನು ನೋಡದಂತೆ ಮನೆಯ 10 ಫೂಟಿನ ಕಂಪೌಂಡುಗಳು ಇಲ್ಲಿ ಸಾಮಾನ್ಯ. ಮನೆಗಳಿಕ್ಕಿಂತ ಕಾಂಪೌಂಡುಗಳ ಆಕಾರವೇ ಧಡೂತಿಯಾಗಿ- ರುತ್ತವೆ. ಮನೆಯಲ್ಲಿ ಮಾಮೂಲಿ ಡ್ರೆಸ್‌ನಲ್ಲಿದ್ದು (ಬುರ್ಕಾ ಹೊರಗೆ ಮಾತ್ರ್ತ ಅಥವಾ ಯಾರಾದರೂ ಗಂಡಸರು ಬಂದರೆ ಮಾತ್ರ ಮನೆಯಲ್ಲಿ) ಕೆಲಸದಲ್ಲಿ ತೊಡಗಿರುತ್ತಾರ.
ಈ ಮಹಿಳೆಯರಿಗೆ ಇಲ್ಲಿ ಸ್ಥಳೀಯ ಕೆಲಸದಾಳುಗಳು ಯಾರೂ ಸಿಗುವದಿಲ್ಲ. ಎಲ್ಲರೂ ತಮ್ಮ ತಮ್ಮ ದೊಡ್ಡಸ್ತಿಕೆ- ಯಲ್ಲಿರುವರು ಹೀಗಿರುವದರಿಂದ ನೆರೆಯ ದೇಶಗಳಾದ ಸುಡಾನ್, ಯಮನ್, ಜೋರ್ಡಾನ್ ಅಲ್ಲದೇ ಸ್ವಲ್ಪ ಜೋರಾಗಿದ್ದು ಇಂಗ್ಲಿಷ್ ಮಾತಾಡುಪ ಹುಡುಗಿಯರು ಬೇಕಿದ್ದರೆ ಫಿಲಿಪೈನ್ಸ್, ಇಂಡೋನೇಶಿಯಾ, ಥೈಲ್ಯಾಂಡ್ ಮೊದಲಾದ ಕಡೆಗಳಿಂದ ಹುಡುಗಿಯರನ್ನು ಮನೆಯಲ್ಲಿ ಕೆಲಸಕ್ಕಿಟ್ಟುಕೊಳ್ಳುವರು. ಒಮ್ಮೆ ಈ ಹುಡುಗಿಯರು ಅಲ್ಲಿ ಹೋಗಿ ಪಾಸ್‌ಪೋರ್ಟ್ ಅವರ ಕೈಯಲ್ಲಿ ಸಿಕ್ಕಿಸಿದರೆ ಮುಗಿದೇ ಹೋಯಿತು. ನರಕದಲ್ಲಿ ಬಿದ್ದಂತೆಯೇ ಎಷ್ಟೋ ಸಲ ಮನೆಯ ಒಡತಿಯ ಬೈಗುಳ-ಪೆಟ್ಟುಗಳಲ್ಲದೆ, ಇತರ ಹಿಂಸೆಗಳಿಗೂ ಬಲಿಯಾಗಬೇಕಾಗುತ್ತದೆ.
ಇತ್ತೀಚಿನ 15-20 ವರ್ಷಗಳಲ್ಲಿ ನೌದಿ ಅರೇಬಿಯದಲ್ಲಿಯ ಮಹಿಳೆಯರು ಜಾಗೃತರಾಗುತ್ತಿದ್ದಾರೆ, ತಮ್ಮ ದೇಶದಲ್ಲಿ ಬೇರೆ ಬೇರೆ ದೇಶಗಳ ಮಹಿಳಾ ವೈದ್ಯರು, ಉಪಾಧ್ಯಾಯಿನಿಯರು, ದಾದಿಯರು, ಪ್ರಯೋಗಾಲಯದಲ್ಲಿಯ ಕೆಲಸ ತಂತ್ರಜ್ಞರು ಇವರನ್ನೆಲ್ಲ ನೋಡಿ ತಾವೂ ಏನಾದರೂ ಸಾಧಿಸುವ ಛಲ ಅವರಿಗೆ ಬರುತ್ತಿದೆ.
ಅಂತೆಯೇ ಈಗ ಶಾಲೆ ಕಾಲೇಜುಗಳಲ್ಲಿ ಹುಡುಗಿಯರು ಮನಸ್ಸಿಟ್ಟು ಓದಿ ಒಳ್ಳೆಯ ಅಂಕ ತೆಗೆಯುತ್ತಿದ್ದಾರೆ. 1977ರಲ್ಲಿ ಮೊದಲನೆಯ ಸ್ತ್ರೀ ಸಮೂಹದ ಹನ್ನೆರಡು ಯುವತಿಯವರು ಪದವಿ ಪಡೆದಿದ್ದಾರೆಂದು ತಿಳಿಯುವದು. ಆಗಲೇ ಸಾಕಷ್ಟು ಹುಡುಗಿಯರು ಅಮೇರಿಕ-ಯುರೋಪ-ಇಂಡಿಯಾಗಳಲ್ಲಿದ್ದು ಡಾಕ್ಟರ್ ಡಿಗ್ರಿಗಳನ್ನು ತೆಗೆದುಕೊಂಡು ಮರಳಿದ್ದಾರೆ. ಈಗ ಅಲ್ಲಲ್ಲಿ ಒಳ್ಳೆಯ ಆಸ್ಪತ್ರೆಗಳಲ್ಲಿ ವೈದ್ಯರು ಕಾಣಿಸುತ್ತಾರೆ. ಜೆಡ್ಡಾದಲ್ಲಿ ಸಾಕಷ್ಟು ಒಳ್ಳೊಳ್ಳೆಯ ಆಸ್ಪತ್ರೆಗಳಿವೆ ನಾನು ಎರಡು ದಿವಸ ಆಸ್ತತ್ರೆಯಲ್ಲಿ ದಾಖಲು ಆಗಿದ್ದೆ. ಅಲ್ಲಿ ಬೆಡ್ ಮೇಲೆ ಮಲಗಿಕೊಂಡೇ ಸೌದಿ ಸ್ತ್ರೀ ವೈದ್ಯರು-ಪ್ರಯೋಗಾಲಯದ ತಂತ್ರಜ್ಞರ-ದಾದಿಯರ ಚಟುವಟಿಕೆಯೆಲ್ಲ ನೋಡಿದೆ. ಉದ್ದನೆಯ ಫ್ರಾಕ್ ಹಾಕಿಕೊಂಡು ತಲೆಗೆ ಸ್ಕಾರ್ಫ್ ತರಹ ಹಿಂದೆ ಕಟ್ಟಿಕೊಂಡು ಓಡಾಡುತ್ತಿರುತ್ತಾರೆ. ಆದರೆ ಮನೆಯವರ-ನೆರೆಹೊರೆಯವರ ವಿರೋಧದ ಮಾತುಗಳು ಒಮೊಮ್ಮೆ ಬೇಸರತರಿಸುತ್ತವೆ ಎಂದು ಒಬ್ಬ ದಾಯಿ ನನಗೆ ಇಂಜೆಕ್ಷನ್ ಕೊಡಲು ಬಂದಾಗ ನಾನಷ್ಟಿಷ್ಟು ಕೇಳಿದಕ್ಕೆ ಹೇಳುತ್ತಿದ್ದಳು.
ಜೆಡ್ಡಾದಲ್ಲಿ ಸ್ತ್ರೀಯರಿಗಾಗಿಯೇ ಸ್ತ್ರೀಯರು ನಡೆಸುವ ಕೆಲವು ಶಾಪಿಂಗ್ ಸೆಂಟರ್‌ಗಳು- ಬ್ಯಾಂಕುಗಳು, ಇವೆ. 1960ರಲ್ಲಿ ಎಣ್ಣೆ ಹಣ ಬಂದು ಬೀಳತೊಡಗಿದಂತೆ ವಿದೇಶ ಬ್ಯಾಂಕುಗಳು ಎಚ್ಚೆತ್ತು ನೌದಿ ಅರೇಬಿಯದ ತುಂಬೆಲ್ಲ ತಮ್ಮ ಶಾಖೆಗಳನ್ನು ಹಾಕಲು ಹಾತೊರೆದರು. ಅಂತೆಯೇ ಜಂಟಿ ಸಹಭಾಗಿತ್ವದ ಮೂಲಕ ಇಂದು ಸಾಕಷ್ಟು
ಬ್ಯಾಂಕುಗಳು ಸೌದಿ ಅಮೇರಿಕನ್, ಸೌದಿ ಬ್ರಿಟಿಷ್, ಸೌದಿ ಹಾಲಂಡ್-ಪ್ರಾನ್ಸ್ ಮುಂತಾದವುಗಳು ಭರದಿಂದ ನಡೆದಿರುವದು ಸುತ್ತಲ್ಲ ಕಾಣುತ್ತೇವೆ. ಇಲ್ಲಿಯ ವ್ಯವಹಾರ ಕೇವಲ ಗಂಡಸರಿಗೆ ಮಾತ್ತ ಬಿಟ್ಟಿದ್ದು. ಹೆಂಗಸರು ನೇರವಾಗಿ ಬ್ಯಾಂಕಿಗೆ ಹೋಗಿ ವ್ಯವಹಾರ ಮಾಡುವಂತಿಲ್ಲ. ಇತ್ತೀಚಿಗೆ ಸ್ವಲ್ಪ ಸುಧಾರಿಸುತ್ತಿದೆಯೆಂದರೆ, ಯಾರಾದರೂ (ಮಹಿಳೆ) ಬ್ಯಾಂಕಿಗೆ ಹೋದರೆ ಪೂರ್ತಿ ಬುರ್ಕಾ ಹಾಕಿಕೊಂಡು ಕೈಗಳಿಗೆ ಕರಿಯ ಅಥವಾ ಬಿಳಿಯ ಕೈಚೀಲ ಹಾಕಿಕೊಂಡು ಕೌಂಟರಿನಲ್ಲಿ ವ್ಯವಹರಿಸಬೇಕು. ಇವರ ಬೆರಳುಗಳನ್ನು ಯಾರಾದರು ಗಂಡಸರು ನೋಡಿದರೆ?
ಯುರೋಪಿನ ಎಷ್ಟೋ ಭಾಗಗಳಲ್ಲಿ ನಾನು ಬ್ಯಾಂಕಗಳು ಸೋಡಿದೆ. ಅಲ್ಲಿಲ್ಲ ಎಷ್ಟೊಂದು ಮುಕ್ತ ವಾತಾವರಣ, ಹುಡುಗಿಯರು ಎಷ್ಟೊಂದು ಚೂಟಿಯಾಗಿರುತ್ತಾರೆ. ಕೇಳಿದ್ದಕ್ಕೆಲ್ಲ ಬೇಗ ಬೇಗ ಸಮಾಚಾರ ತಿಳಿಸುವಾದಾಗಲೀ ಸಹಾಯ ಮಾಡುವ ದಾಗಲೀ ನೋಡುವಾಗ ಎಷ್ಟು ಚಟುವಟಿಕೆಯಿಂದ ಇರುತ್ತಾರಲ್ಲ ಎಂದು ಆಶ್ಚರ್ಯವಾಗವದು. ಮುಕ್ತವಾತಾವರಣ ಎಂದ ಮೇಲೆ Staff Members ಕೂಡಾ Free. ಹೀಗಾಗಿ ಕೆಲಸದ ಸಮಯದಲ್ಲಿ ಎಚ್ಚರಿಕೆಯಿಂದ ಕೆಲಸಮಾಡಿರೆ ವಿರಾಮ ವೇಳೆಯಲ್ಲಿ ಧಾರಾಳವಾಗಿ ಹರಟೆಯೂ ಹೊಡೆಯುತ್ತಾರೆ.
ನಮ್ಮ ಭಾರತದ ಬ್ಯಾಂಕುಗಳಲ್ಲಿ ಸ್ತ್ರೀಯರಿಗೆ ಒಳ್ಳಯ ಸ್ಥಾನ ಇದೆ. ಕೆಲವೊಂದು ಭಾಗಗಳಲ್ಲಿ Computer ಹಾಗೂ ಇನ್ನಿತರ ವ್ಯವಸ್ಥೆ ಇರದ್ದರಿಂದ ಆತೀಯಾಗಿ ಕೆಲಸಕ್ಕೆ ಬಡೆದುಕೊಳ್ಳುತ್ತಾರೇಸೋ ಅನಿಸುವದು. ಏನೇ ಆಗಲಿ ಬ್ಯಾಂಕಿನ ಕೆಲವು ಭಾಗಗಗಳು ಸ್ತ್ರೀಯರಿಗೆ ಹೇಳಿ ಮಾಡಿಸಿದಂಥವು. ಮನೆ ತೊಂದರೆಗಳು ಮನಸ್ಸಿನಲ್ಲಿಟ್ಟುಕೊಂಡು ಗ್ರಾಹಕರ ಮುಂದೆ ಜೋಲು ಮುಖ ಹಾಕಿಕೊಂಡೋ, ಸಿಟ್ಟು ಮಾಡಿಕೊಂಡೋ ಉತ್ತರಿಸುವದಕ್ಕಿಂತ ನಯ-ವಿನಯತೆ ಹೆಚ್ಚಿದ್ದರೆ ಇನ್ನು ಮೆರಗುಬರುತ್ತದೆ.
ಇತ್ತೀಚೆಗೆ ಜೆಡ್ಡಾದಲ್ಲಿ ಸ್ತ್ರೀಯರಿಗೆಂದೇ ಬೇರೆ ಬ್ಯಾಂಕ್ ಕಟ್ಟಿದ್ದಾರೆ. ಇಲ್ಲಿ ಯಾವ ಗಂಡು ಪ್ರಾಣಿಗೂ ಅವಕಾಶವಿಲ್ಲ. ಒಳಗಡೆ ಬ್ಯಾಂಕಿನ ವ್ಯವಹಾರ ನೋಡುವವರು ಸೌದಿ ಮಹಿಳೆಯರೆ. ಸಮಾಜ ಇಲ್ಲಿಯೂ ನಿಧಾನವಾಗಿ ಮುಂದು- ವರೆಯುತ್ತಿದೆ. ವಿದೇಶದಲ್ಲಿ ವ್ಯಾಸಂಗ ಮಾಡಿದ ತರುಣಿಯರು ಎಲ್ಲಾ ಕಾರುಭಾರ ನೋಡಿಕೊಳ್ಳುವರು. ಸಾಕಷ್ಟು ಶ್ರೀಮಂತ ತರುಣಿಯರು ತಮ್ಮದೇ ಹೆಸರಿನಲ್ಲಿ ಮನೆಗಳು- ಇನ್ನಿತರ ಆಸ್ತಿ ಪಾಸ್ತಿ ಇಟ್ಟುಕೊಂಡು ಆರಾಮವಾಗಿದ್ದಾರೆ. ಅಂಥವರು ಇಂಥ ಬ್ಯಾಂಕಿನಲ್ಲಿ ನಿರರ್ಗಳವಾಗಿ ತಮ್ಮದೇ ಖಾತೆ ತೆಗೆದುಕೊಂಡು ಆರಾಮವಾಗಿ ಚೈನಿ ಹೊಡೆಯುತ್ತಲೂ ಇದ್ದಾರೆ.
ಒಂದು ಸಲ ನಮ್ಮ ಕ್ಯಾಂಪಸ್ಸಿನಿಂದ ಬಸ್ ಮಾಡಿಕೋಡು ಮಹಿಳೆಯರೇ ನಡೆಸುವ ಲೇಡೀಸ್ ಸೂಕ್ (souq) ಅಥವಾ ವಿಮೆನ್ಸ್ ಸೆಂಟರ್‌ಗೇ ಹೋಗಿದ್ದವು. 10 ಗಂಟೆಗೆ ಶುರುವಾಗಬೇಕಾದ ಅಂಗಡಿಗಳು ತೆರೆದಿರಲಿಲ್ಲ. ತಾವೇ ಸ್ವಂತ ಕಾರು ಹೊಡೆದುಕೊಂಡು ಬರುವಂತಿಲ್ಲ. ಗಂಡನ ಮೇಲೆ ಅವಲಂಬಿಸ ಬೇಕು. ನಿಧಾನವಾಗಿ ಒಬ್ಬೊಬ್ಬರು ಬರಲು ಶುರುವಾದರು. ಅವರವರ ಗಂಡಂದಿರು ಅವರನ್ನು ಹೊರಗಡೆಯೇ ಬಿಡುವರು. ಒಳಗೆ ಯಾವ ಗಂಡಸರಿಗೂ ಅವಕಾಶವಿಲ್ಲ ಇವರು ಬಂದು ಸಾವಕಾಶವಾಗಿ ಕೀಲಿತೆಗೆದು ಧೂಳು ಜಾಡಿಸಿ ತಮ್ಮ ಕುರ್ಚಿ ಮೇಲೆ ಕುಳಿತುಬಿಟ್ಟರಂತೂ. ಮುಖದ ಮೇಲೆ ನಗು ಇಲ್ಲ. ಒಂಥರಾ ಅತಿಯಾದ ಗಂಭೀರತನ.
ಒಳಗಡೆ ಶಾಪಿಂಗ್ ಕಾಂಪ್ಲೆಕ್ಸ್ ದೊಡ್ಡದಿದೆ. ಇವರಿಗೆ (ಸೌದಿಗಳಿಗೆ) ಸಾಕಷ್ಟು ಹಣ ಇರುವದರಿಂದ ಯಾವುದೂ ತಾಕ್ಕಾಲಿಕ ಎಂದು ಮಾಡುವದಿಲ್ಲ. ಮಾಡಿದ್ದಲ್ಲ ಗಟ್ಟಿ ಮುಟ್ಟು. ವಿದೇಶಿ ಸಲಹಾಗಾರರೂ ಸಾಕಷ್ಟು! ಅವರದೇನು ಹೋಗುವದು, ಒಳ್ಳೊಳ್ಳೆಯ ಅಂಗಡಿಗಳು, ಒಳಾಲಂಕರಣ, ಬೆಳಕಿನ ವ್ಯವಸ್ಥೆಗಳ ವಿನ್ಯಾಸ ಎಲ್ಲಾ ಮಾಡಿಕೊಟ್ಟು ತಾವೂ ಸಾಕಷ್ಟು ಹಣ ಮಾಡಿಕೊಳ್ಳುತ್ತಾರೆ. ಆದರೆ ಇವರು ಆ ಅಂಗಡಿಗಳಿಗೆ ತಕ್ಕಹಾಗೆ ಚುರು ಕಾಗಿದ್ದು ಮುಗುಳ್ನಗೆ ತೋರಿ ಗ್ರಾಹಕರನ್ನು ಸ್ವಾಗತಿಸಿದರೆ ಇನ್ನೂ ಚೆಂದಾಗುತ್ತದೆ. ಆದರೆ ಇನ್ನೂ ಅವರಲ್ಲಿ ಮಬ್ಬುತನ ಹೋಗಿಲ್ಲ. ಬೆವರಿನ ಹನಿಯಿಂದ ದುಡಿದ ಹಣವಾದರೆ ಇದೆಲ್ಲ ಮಾಡುತ್ತಾರೆ. ಆದರೆ ಹಾಗೆ ಇಲ್ಲಿ ಆಗಿಲ್ಲವಲ್ಲ, ಅಂತೆಯೇ ಆಲಸಿತನ ಇವರಲ್ಲಿ ಜಾಸ್ತಿ.
ಸರಿ, ಈ ವಿಶಾಲ ಕಾಂಪ್ಲೆಕ್ಸ್‌ದೊಳಗಿಡ 30 ಶಾಪ್‌ಗಳಾದರೂ ಇರಬೇಕು. ಹೆಚ್ಚಾಗಿ ಎಲ್ಲ ಸೌಂದರ್ಯು ಸಾಧನೆಯ ವಸ್ತುಗಳವೇ ಅಂದರೂ ಅಡ್ಡಿ ಇಲ್ಲ. ಒಳ್ಳೆಯ ಪ್ಯಾರಿಸ್ ಸ್ಟೈಲ್ ಬಟ್ಟೆಗಳು, ಸೌಂದರ್ಯ ಪ್ರಸಾಧನಗಳು, ಆಭರಣ- ಗಳಿಂದ ಹಿಡಿದು ಅಡುಗೆ ಮನೆಗೆ ಸಂಬಂಧಿಸಿದ ವಸ್ತುಗಳು, ಕೆಲವಡೆ ಪುರಾತನ ವಸ್ತುಗಳು, ಮಕ್ಕಳಿಗೆ ಸಂಬಂಧಿಸಿದ ಎಲ್ಲ ಸಾಮಾನುಗಳು ಎಲ್ಲ ಒಂದಕ್ಕಿಂತ ಒಂದು ಆಕರ್ಷಕ ಇಲ್ಲಿ. ಅದರೆ ಬೆಲೆ ಮಾತ್ರ ದುಬಾರಿ. `ಬಹುಶಃ ಇಲ್ಲಿ ಸಾಮಾನ್ಯ ಜನರು ಬರುವದಿಲ್ಲವೇನೋ’ -ಅನ್ನೋ ತರಹದ ವಾತಾವರಣ. ಶ್ರೀಮಂತ ಮಹಿಳೆಯರು ಆರಾಮವಾಗಿ ಬಂದು ಯಾವ ಮೀನ ಮೇಷ ಇಲ್ಲದೆ ಸಾವಿರಾರು ರಿಯಾಲ್‌ಗಳು ಖರ್ಚು ಮಾಡಿ ಬೇಕಾದದ್ದೆಲ್ಲ ಒಯ್ಯುವುದನ್ನು ನೋಡಿದೆವು. ಅಮರಾವತಿಗೆ ಬಡತನವೆಲ್ಲಿ?
ನಾವು ಒಂದು ರೆಡಿಮೆಡ್ ಬಟ್ಟೆ ಅಂಗಡಿಯಲ್ಲಿ ಕಾಲಿಟ್ಟಾಗ ನಾವು ಊಹಿಸಿ ದಂತೆಯೇ ಎಲ್ಲ ಬೆಲೆಗಳ ದುಬಾರಿ ಬೆಲೆ ಪಟ್ಟಿ ನೋಡಿದೆವು. ಸಾದಾ ಒಂದು ಮಗುವಿನ ಫ್ರಾಕ್‌ಗೆ ಇಲ್ಲಿ 200-400-800 ರಿಯಾಲ್‌ಗಳು (! ರಿಯಾಲ್ ಎಂದರೆ ಈಗ 8 ರೂಪಾಯಿ) ಒಂದು ಫ್ರಾಕ್‌ಗೆ ಇಷ್ಟೆಂದ ಮೇಲೆ ಇನ್ನುಳಿದ ಸಾಮಾನುಗಳಿಗೆ ಎಷ್ಟಿರಬೇಕೆಂದು ಊಹಿಸುವುದು ನಿಮಗೆ ಬಿಟ್ಟುಕೊಟ್ಟದ್ದು. ಅಲ್ಲಿ ಯಾರೂ ಏನೂ ಸಾಮಾನು ಕೊಂಡುಕೊಳ್ಳಲೇ ಇಲ್ಲ. ಯುರೋಪಿ- ಯನ್ನರಂತೂ ಇನ್ನೂ ಚಾಣರು. ಅವರು ಎಲ್ಲಿ ಸೇಲ್ ಇದೆ, ಎಲ್ಲಿ ಕಡಿಮೆ (Discount) ಇದೆ, ಅದೇ ಹುಡುಕುತ್ತಾರೆ. ನೇರವಾಗಿ ಹೋಗಿ ಬಟ್ಟಿ ಬರೆ ಕೊಂಡುಕೊಳ್ಳುವವರು ಅತೀ ಕಡಿಮೆ. ಎಲ್ಲರೂ ಪ್ರದರ್ಶನ ನೋಡಲಿಕ್ಕೆ ಬಂದ ತರಹ ನೋಡಿದೆವಷ್ಟೇ. ಒಂದು ಕಡೆಗೆ ಬೇಕರಿ ಇದೆ. ಒಂದಿಷ್ಟು ಕೇಕ್, ಕೋಲಾಗಳು ತೆಗೆದುಕೊಂಡು ಕಾಂಪ್ಲೆಕ್ಸ್ ನಡುವೆ ಇರುವ ವಿಶಾಲ ಸ್ಥಳಗಳಲ್ಲಿ ಹಾಕಿರುವ ಬೆಂಚ್ ಮೇಲೆ ಕುಳಿತು ತಿಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು.
ಇಲ್ಲಿಯ ಸೌದಿ ಮಹಿಳೆಯರು ಕಾರು ಚಲಾಯಿಸುವಂತಿಲ್ಲ. ವಿದೇಶಿ ಮಹಿಳೆಯರು ತಮ್ಮ ತಮ್ಮ ದೂರದ ಕಾಪ್ಲೆಕ್ಸ್‌ನಲ್ಲಿ ಹಾಯಾಗಿ ಓಡಾಡಿಸುವರು. ಇವರಿಗೂ ಕಾರು ಚಲಾಯಿಸುವ ಆಸೆ. ಅಂತೆಯೇ ಅಲ್ಲಿಯ ರಾಜನಿಗೆ ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಯಾವ ಸೂಚನೆ ಕಂಡು ಬರುತ್ತಿಲ್ಲ. ಆಕಸ್ಮಿಕ ಏನಾದರೂ ಪರವಾನಿಗೆ ಸಿಕ್ಕರೆ ಈ ಮಹಿಳೆಯರು ಮನೆಯಲ್ಲಿ ಕೂಡ್ರುವದಿಲ್ಲ ಎಂದೆನಿಸುತ್ತದೆ; ಕಾಯುತ್ತಿದ್ದಾರೆ.
ಹೊಸಪೀಳಿಗೆಯ-ಶ್ರೀಮಂತ ಹುಡುಗಿಯರು ಬಹಳ ಆಶಾವಾದಿಗಳಾಗುತ್ತಿದ್ದಾರೆ. ಸಾಕಷ್ಟು ಬುದ್ಧಿ ಬೆಳೆಸಿಕೊಳ್ಳುತ್ತ ತಾವೂ ಕೆಲವೊಂದು ಸಂಕೋಲೆಗಳನ್ನು ಕಿತ್ತೊಗೆದು ಹೊರಗೆ ಧುಮ್ಮಿಕ್ಕಲು ಹಾತೊರೆಯುತ್ತಲೂ ಇದ್ದಾರೆ. ಆದರೆ ಕೆಲವೊಂದು ಸಂಪ್ರದಾಯಿಕ ಕಟ್ಟೆಚ್ಚರಿಕೆಗಳಿಂದ ಬೇಸತ್ತರೂ ಪಾಶ್ಚಾತ್ಯರ ಅತೀಯಾದ ಮುಕ್ತಿ ವಾತಾವರಣ ನೋಡಿ ಮೊದಲೆಲ್ಲ ತಾವೂ ಆ ತರಹ ಇರಬೇಕೆಂದು ಆಸೆಪಟ್ಟರೆ ಕೊನೆಗೆ ತಮ್ಮದೇ ಒಳ್ಳೆಯದೆಂದು ಒಪ್ಪಿಕೊಂಡು ಮತ್ತೆ ಹೊಂದಿಕೊಂಡುಬಿಡುವರು.
ಕೊನೆಯದಾಗಿ ಇಲ್ಲಿ ಒಂದು ಮಾತು. ಆಭರಣ ಎಂದರೆ ಹೆಣ್ಣು, ಹೆಣ್ಣು ಎಂದರೆ ಆಭರಣ ಅನ್ನುವಷ್ಟರ ಮಟ್ಟಿಗೆ ಇಲ್ಲಿಯ ಮಹಿಳೆಯರು ಮೈಮೇಲೆಲ್ಲ ಹೇರಿಕೊಂಡಿರುತ್ತಾರೆ. ಮನಬಂದಷ್ಟು ಬಂಗಾರ ಹೊತ್ತುಕೊಂಡು (ಆಭರಣ) ಯಾವುದೇ ಸಮಯದಲ್ಲೂ ಮುಕ್ತವಾಗಿ ಅಡ್ಡಾಡಬಹುದು, ಕಳ್ಳರ ಹಾವಳಿ ಇಲ್ಲಿಲ್ಲ. ಅಂತೆಯೇ ನಮ್ಮ ಭಾರತೀಯರು -ಪಾಕಿಸ್ತಾನಿಗಳು – ಬಂಗ್ಲಾದೇಶದ ಮಹಿಳೆಯರು ಮೊಳಕೈಯಿಂದ ಮುಂಗೈಗೆ ಬೀಳುವವರೆಗೆ ಬಳೆಗಳು, ಕತ್ತು ವಾಲುವಷ್ಟು ಸರಗಳು, ಫ್ರೀ ಆಗಿ ಬೆರಳುಗಳು ಸರಿದಾಡದಷ್ಟು ಉಂಗುರಗಳು ಹಾಕಿಕೊಂಡು ಖುಷಿಪಡುತ್ತಾರೆ.
ಮುಂಬಯಿ ವಿಮಾನ ನಿಲ್ದಾಣಕ್ಕೆ ಬರುವವರೆಗೆ ಮಾತ್ರ ನಾವು ಆರಾಮ ವಾಗಿ ಆಭರಣ ಹಾಕಿಕೊಳ್ಳಬಹುದು. ನಂತರ `ಸಹಾರ್’ ನಿಲ್ದಾಣದಿಂದ ನಮ್ಮೂರಿಗೆ ಬರಬೇಕಾದರೆ- ಒಂದೊಂದೇ ಎಲ್ಲ ತೆಗೆದು ಬ್ಯಾಗಿನಲ್ಲಿಟ್ಟು ಪ್ರಯಾಣಿಸು- ತ್ತೇವೆ. ಕಳ್ಳರ ಹಾವಳಿ, ಹೆದರಿಕೆ-ಎಂದು ಮತ್ತೆ ವಿಚಾರ ಶುರುವಾಗುತ್ತದೆ. Customsದವರ ಕಾಟ ಬೇರೆ.
*****