ಗಿರಿಧರ ಪ್ರಿಯತಮನ – ಶ್ರೀ
ಪಾದಕೆ ಸಲ್ಲುವನೇ
ಅವನೊಲವನು ಗೆಲ್ಲುವೆನೇ!
ಚೆಲುವಿನ ಚಂದ್ರಮ ಇನಿಯ-ನಾ
ಬೆರೆವೆನೆ ಆವನೊಳು ರಾತ್ರಿ;
ನನ್ನನೆ ಮೀರಿ ಕ್ಟಷನ ಸೇರಿ
ಮರೆವೆನೆ ಗಿರಿವನ ಧಾತ್ರಿ.
ಕ್ಟಷ್ಣನು ಕೊಟ್ಟುದ ತಿನುವೆ-ಸ್ವಾಮಿ
ಇತ್ತುದ ನಲಿಯುತ ಉಡುವೆ;
ಇಟ್ಟ ಜಾಗದಲಿ ಇರುವೆ, ಅವ-
ನಿಷ್ಟಾರ್ಥಕೆ ನಾ ಮಡಿವೆ.
ದಾಸಿ ನಾನು ಕನ್ನಯ್ಯಗೆ,
ಬೇಕಿದ್ದರೆ ಒಂದು ಕಾಸಿಗೆ
ಮಾರಲಿ ನನ್ನನು ಸಹಿಸುವೆ, ಹಿತ-
ವಾಗಲಿ ಸ್ವಾಮಿಯ ಮನಸಿಗೆ.
***