ಅಮೇರಿಕಾದಲ್ಲಿದ್ದ ಮಗಳು ಅಪ್ಪನಿಗೆ ಫೋನ್ ಮಾಡಿದಳು ಅಪ್ಪಾ ನಾನು ನಿನಗೆ ಒಂದು ವಿಷಯ ಹೇಳದೆ ಮುಚ್ಚಿಟ್ಟು ತಪ್ಪು ಮಾಡಿದ್ದೇನೆ ನನ್ನನ್ನು ನೀನು ಕ್ಷಮಿಸಲೇ ಬೇಕು ಎಂದು ಕೇಳಿಕೊಂಡಳು.
ಅಪ್ಪಾ ಚಿಂತೆಯಿಲ್ಲ ಮಗಳೆ ಅದೇನು ತಪ್ಪು ಮಾಡಿದೆ ಹೇಳು ನಾನೇನೂ ತಪ್ಪು ತಿಳಿಯೊಲ್ಲ ಮಗಳು ನಮ್ಮಕಂಪನಿಯಲ್ಲಿ ಒಂದು ಹುಡುಗ ಇದ್ದಾನೆ ನನಗೆ ತುಂಬಾ ಹಿಡಿಸಿದ ನಾನು ಅವನನ್ನು ನಿನ್ನೆ ದಿನ ಲಗ್ನವಾಗಿ ಬಿಟ್ಟೆ ಸಾರಿ ನಿಮ್ಮನ್ನು ಕರಿಸಿಕೊಳ್ಳವಷ್ಟು ಕಾಲ ಇರಲಿಲ್ಲ ಅಂದಳು, ಅಪ್ಪಾ ಅದಕ್ಕೇಕೆ ಗೋಳಾಡ್ತೀ ನಿನ್ನ ಮುಂದಿನ ಲಗ್ನಕ್ಕೆ ಖಂಡಿತಾ ಅಮ್ಮನನ್ನೂ ಕರೆದುಕೊಂಡು ಬರ್ತೇನೆ. ಎರಡುದಿನ ಮುಂಚಿಯೇ ತಿಳಿಸಿಬಿಡು. ಹಾ ಅದಕ್ಕೂ ನಾವು ಬರಲಾಗದಿದ್ದರೆ, ಅದರ ಮುಂದಿನ ಲಗ್ನಕ್ಕೆ ಖಂಡಿತಾ ನಾವು ಹಾಜರ್ ಓ.ಕೇ.
***
Related Post
ಸಣ್ಣ ಕತೆ
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…