Home / ಕಥೆ / ಕಿರು ಕಥೆ / ಖಾಲಿ ಮಾಡು

ಖಾಲಿ ಮಾಡು

ಒಂದು ಪಟ್ಟಣದಲ್ಲಿ ಒಬ್ಬ ಅತ್ಯಂತ ಧನಿಕನಿದ್ದ. ಅವನಲ್ಲಿ ಇರದ ವಸ್ತುಗಳಿರಲಿಲ್ಲ. ಜಗತ್ತಿನ ಎಲ್ಲಾ ವಸ್ತುಗಳನ್ನು ಖರೀದಿಸಿ ಶೇಖರಿಸಿದ್ದ. ಆದರೂ ಅವನಿಗೆ ತೃಪ್ತಿ, ಸಂತಸವಿರಲಿಲ್ಲ. ನೆಮ್ಮದಿ ಶಾಂತಿ ದೊರೆತಿರಲಿಲ್ಲ. ಅವನ ಬಾಳನ್ನು ವ್ಯಾಪಾರಿ ಮನೋಭಾವ ತುಂಬಿತ್ತು. ಧನ, ಕನಕ, ವಸ್ತು, ವೈವಿಧ್ಯವಿರುವ ತನ್ನದು ತುಂಬು ಜೀವನವೆಂದು ಹೆಮ್ಮೆಪಡುತ್ತಿದ್ದ. ಇದರ ಜೊತೆಯಲ್ಲಿ ಅವನ ಮನವು ಮಿಥ್ಯ, ಮೋಸ, ಈರ್ಷೆ, ದ್ವೇಷ, ಕಾಮ, ಕ್ರೋಧ, ಮದ, ಮಾತ್ಸರ್ಯಗಳಿಂದ ತುಂಬಿತ್ತು.

ಒಮ್ಮೆ ಆ ಪಟ್ಟಣಕ್ಕೆ ಒಬ್ಬ ಝುನ್ ಗುರು ಬಂದರು.

ತನ್ನ ಹಣದ ಹೆಚ್ಚಳಿಕೆಯನ್ನು ತೋರಿಸಿಕೊಳ್ಳಲು ಧನಿಕ, ಝೆನ್ ಗುರುಗಳನ್ನು ತನ್ನ ಮನೆಗೆ ಸ್ವಾಗತಿಸಿದ.

ಗುರುಗಳಿಗೆ ನಮಿಸಿ ತನಗೆ ಶಾಂತಿಯ ನೆಲೆ ಬೇಕೆಂದು ಕೇಳಿಕೊಂಡ. ಝೆನ್ ಗುರುಗಳು, ಧನಿಕನಿಗೆ ಕೆಲವು ನಿಬಂಧನೆಗಳನ್ನು ಹಾಕಿದರು.

ಧನಿಕ ಹೇಳಿದ “ಗುರುಗಳೇ ನಿಮಗೆ ಧನದ ಮೂಟೆಯನ್ನೇ ಕೊಡುವೆ, ನನಗೆ ಶಾಂತಿಯ ನೆಲೆ ದೊರತರೆ” ಎಂದ.

“ನಿನ್ನ ಧನದ ಅವಶ್ಯಕತೆ ನನಗಿಲ್ಲ. ನಿನ್ನ ಬೇಡಿಕೆ ಪೂರೈಸಲು ನಿನಗೆ ಒಂದು ಸೂತ್ರ ಕೊಡುತ್ತೇನೆ.”

“ಅದೇನು ಹೇಳಿ ಗುರುಗಳೇ”

“ನೀನು ಬಾಳಿನಲ್ಲಿ ಖಾಲಿ ಮಾಡುವುದನ್ನು ಕಲಿಯಬೇಕು”

“ಇಷ್ಟೇ ತಾನೇ, ಎಲ್ಲವನ್ನು ಖಾಲಿ ಮಾಡುತ್ತೇನೆ. ಹಾಗಾದರೆ ನನಗೆ ಶಾಂತಿ ಸಿಕ್ಕುತ್ತದಲ್ಲವೇ?” ಎಂದ ಧನಿಕ.

“ಖಾಲಿಮಾಡಿ ಜೀವನ ನಡೆಸು. ನಂತರ ಬಂದು ತಿಳಿಸು” ಎಂದರು ಝೆನ್ ಗುರುಗಳು.

ಧನಿಕನಿಗೆ ಹಲವಾರು ತಿಂಗಳುಗಳಾದರು ನೆಮ್ಮದಿ ಸಿಗಲಿಲ್ಲ ಎಂದು ಹಲುಬಿದ.

“ನಿನ್ನಲ್ಲಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ, ಈರ್ಷೆ, ದ್ವೇಷ, ಇವುಗಳನ್ನು ಖಾಲಿ ಮಾಡಿರುವೆಯಾ? ಎಂದರು ಗುರುಗಳು. ನಿನಗೆ ನೆಮ್ಮದಿ ಸಿಗಬೇಕಾದರೆ ನಿನ್ನ ಮನವು ಸತ್ಯದ ನಿರೀಕ್ಷೆಯಲ್ಲಿರುವ ಪ್ರಾಮಾಣಿಕತೆ, ಪ್ರೀತಿ, ಸ್ನೇಹ ಮನದಲ್ಲಿ ತುಂಬಿರಲಿ. ಮನವನ್ನು ಪ್ರಾಪಂಚಿಕತೆಯಿಂದ, ಸಂಸಾರದಿಂದ ದೂರ ಇಡು. ಆಗ ನಿನಗೆ ನೆಮ್ಮದಿಯ ನೆಲೆ ಸಿಗುತ್ತದೆ” ಎಂದಾಗ ಧನಿಕನಿಗೆ ಶಾಂತಿಯ ನೆಲೆ ಏನೆಂಬುದರ ಅರಿವಾಯಿತು.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...