Home / ಕವನ / ಕವಿತೆ / ಈ ತಿಂಗಳು ಜನವರೀ

ಈ ತಿಂಗಳು ಜನವರೀ

(೧೯೫೨ ರಲ್ಲಿ ಭಕ್ತಾಭಕ್ತರ ಮಾತು)

ಈ ತಿಂಗಳು ಜನವರೀ
(ಏನಾದರೆ ಏನರೀ?)

ರವಿ ತಿರುಗಿದನುತ್ತರಕ್ಕೆ
(ಸಮಯವೆಳ್ಳು ಬೆಲ್ಲ ಮುಕ್ಕೆ)
ಕ್ರಾಂತಿ ಸಂಕ್ರಾಂತಿಯಕ್ಕೆ!
(ನಮಗುಳಿವುದೋ ನಮ್ಮ ಹಕ್ಕೆ?)
ಈ ತಿಂಗಳು ಜನವರೀ!
(ಏನಾದರೆ ಏನರೀ?)

ಈ ತಿಂಗಳು ಗಾಂಧಿಸತ್ತ
(ಸತ್ತು ಕಳೆದನಾರ ಕುತ್ತ?)
ನಾಡಿದಾಯ್ತು ಸುಸ್ವತಂತ್ರ
(ಆವ ಕಲಿಯ ಕುಹಕತಂತ್ರ?)
ಇಂದಾಯಿತು ಜನವರೀ!
(ಏನಾದರೆ ಏನರೀ?)

ಈ ತಿಂಗಳು ಮೊದಲಿಟ್ಟಿತು
ಮೂಗುಜನದ ಮೊಗದಾಯ್ಕೆ.
(ಜಡಧಿಯೊಳಾರುತ್ಸವ ಕೀ
ಧನ ದಾಕ್ಷಿಣ್ಯದ ಹಾಯ್ಕೆ?)

ಪ್ರಜೆಗೆ ಸಂದಿತೀ ತಿಂಗಳು
ಬಹುಕಾಲದ ಪೂಣ್ಕೆ.
(ಕುದುರೆಗಂತು ಕೋಲತುದಿಯ
ಕೆಂಗೆಣಸಿನ ಕಾಣ್ಕೆ!)
ಈ ತಿಂಗಳು ಜನವರೀ
(ಅದು ಸರಿ ಮುಂದೇನರೀ?)

ಇನ್ನು ಬೆಳೆವುದೆಮ್ಮ ಕಲಾ.
(ಏನೀ ವೃದ್ಧರ ಚಪಲ!)
ಹುಲುಸುವುದಿನ್ನೆಮ್ಮ ನುಡಿ.
(ನಮಗೇಕೀ ನಾಲಗೆ ಮಡಿ!)
ನಮ್ಮ ವಿದ್ಯೆಯಿನ್ನೆಮಗೆ.
(ಬಂದಿತೆ ಗುಹೆವಾಸದ ಬಗೆ?)
ನಮ್ಮ ನಮ್ಮದೀ ರಾಜ್ಯ!
(ಯಾರದು ಯಾರಿಗೆ ತ್ಯಾಜ್ಯ!)
ಈ ತಿಂಗಳು ಜನವರಿ!
(ಸರಿ ಸರಿ ಮತ್ತೇನರೀ?)

ಎಲೆಲೇ ಪಾಯಸಮಕ್ಷಿಕ,
ನಿನಗೇಕೀ ಕಿಂಕೃತಿ?
ಭೋ, ವಾರ್ಷಿಕ ಹೃಷ್ಟಭೇಕ,
ಮೊಳಗಿಸು ಜಯ ಝಂಕೃತಿ!
ಇಂದಾಯಿತು ಜನವರೀ!
ಅದರಿಂದೆಮಗೇನರೀ?
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...