Home / ಕವನ / ಕವಿತೆ / ನೋಯಿಸದಿರು ಮನವ

ನೋಯಿಸದಿರು ಮನವ

ನೋಯಿಸದಿರು ಮನವ-
ಮನವೇ! ಕೋಯಿಸದಿರು ಮನವ
ನೊಂದರು ಬೆಂದರು ಯಾರೇನೆ೦ದರು
ನೋಯಿಸದಿರು ಮನವ
ಮನಮಲ್ಲಿಗೆ ಹೂವು; ಮನವೇ! ಮನ ಮಲ್ಲಿಗೆ ಹೂವು
ದೂರದಿ ಕಂಡು ಪರಿಮಳ ಉಂಡು ತಣಿದು ತೃಪ್ತಿ ಹೊಂದು
ಮನವೇ ತಣಿದು ತೃಪ್ತಿ ಹೊಂದು

ತಾಳಿಕೊಂಡು ಬಾಳು; ಮನವೇ! ತಾಳಿಕೊಂಡು ಬಾಳು
ಬೀಳುತ ಏಳುತ ಜೋಲಿಯ ಹಿಡಿಯುತ ಮುಂದೆ ಮುಂದೆ ಸಾಗು
ಮನವೇ! ಮುಂದೆ ಮುಂದೆ ಸಾಗು

ನುಂಗು ನುಂಗು ನುಂಗು; ಮನವೇ! ನುಂಗು ನುಂಗು ನುಂಗು
ಸಹನೆಯೆ ಭಕ್ತಿ ಸಹನೆಯೆ ಭುಕ್ತಿ ಸಹಿಸಿದಷ್ಟು ಶಕ್ತಿ
ಬರುವುದು ಸಹಿಸಿದಷ್ಟು ಶಕ್ತಿ

ಶ್ರದ್ಧೆಯಿಂದ ಸಾಗು; ಮನವೇ! ಶ್ರದ್ಧೆಯಿಂದ ಸಾಗು
ಹೊರಸವೀಂಟುವ ಹುಳು ಶಂಕೆಯನಳಿ. ನಂಬು ನಂಬು ನಂಬು
ಮನವೇ! ನಂಬು ನಂಬು ನಂಬು

ಸುಖ ದುಃಖವ ತ್ಯಜಿಸು: ಮನವೇ! ಸುಖ ದುಃಖವ ತ್ಯಜಿಸು
ಒಮ್ಮನದಲಿ ನಿಷ್ಕರ್ಮವ ಗೈಯುತ ದೇವನನ್ನು ಭಜಿಸು
ಮನವೇ ದೇವನನ್ನು ಭಜಿಸು
*****

Tagged:

Leave a Reply

Your email address will not be published. Required fields are marked *

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...