Home / ಕವನ / ಕವಿತೆ / ಆರಿದಾರಿದು?

ಆರಿದಾರಿದು?

ಆರಿದಾರಿದು ಕರಿಯ ಅಂಚಿನ
ಬಿಳಿಯ ಸೀರೆಯ ಕನ್ನೆಯು
ತುಂಬು ಜವ್ವನವನ್ನೆ ಬಿಂಬಿಪ
ನುಣುಪು ಕೆನ್ನೆಯ ಚೆನ್ನೆಯು?

ಕರಿಯ ಮೋಡದ ಮೇಲೆ ಥಟ್ಟನೆ
ಸುಳಿದು ಮೆರೆಯುವ ಮಿಂಚೊಲು
ಕಾಡಿಗೆಯ ಕಣ್‌ತುದಿಯೊಳಹಹಾ!
ಕಣ್ಣಮಿಂಚಿನ ಗೊಂಚಲು!

ಕಂಗಳೆಸೆಯುವ ಮಿಂಚಕುಡಿಗಳ-
ನೆಲ್ಲವೊಂದೆಡೆ ಹೀರುತ
ಕೂಡಿಸಿಟ್ಟೊಲು ನತ್ತು ಮೂಗಿನೊ-
ಳಿಹುದು ನಗೆಯನು ಬೀರುತ!

ಪ್ರೇಮ-ಸರದೊಳು ಕೊಂಕುನಗೆಗಳ-
ನೊಯ್ವ ದೋಣಿಯು ಚೆಂದುಟಿ!
ಮುಂದೆ ಬರಲಿಹ ಮುತ್ತುಗಳ ನೆನೆ-
ದಿಂದೆ ನಾಚಿದೆ ಕೆಂದುಟಿ!

ರತಿಗೆ ಚೆಲುವೊಳು ರತಿಯೆ ಸಾಟಿಯು;
ಬೆಲ್ಲದೊಲೆ ಸವಿ ಬೆಲ್ಲವು;
ಅಂತೆಯೀಕೆಯ ಚೆಲುವು ಮಾಟಗ-
ಳೂಟೆಯೆನಿಪೀ ಗಲ್ಲವು!

ಮದನ ಮಾಲಿಯು ರವಿಕೆ ಬೇಲಿಯು
ಜನರ ಮನಗಳೆ ಹೊಲಗಳು!
ತುಂಬಿದೆದೆಗಳು ದೇಹ-ಲತೆಯೊಳು
ಬಿಟ್ಟ ಸುಮಧುರ ಫಲಗಳು!

ಕಾಣೆನೇತಕೊ ನಗುತಲಿರುವಳು
ಅದೆಕೊ ಕದಪೊಳು ಕುಳಿಗಳು-
ಮನವ ಸೆಳೆಯುತ ಮೋಹದಾಳಕೆ
ತಳ್ಳಲೆಳಸುವ ಸುಳಿಗಳು!

ಇಂಥ ಚೆಲುವೆಯು ಮತ್ತೆ ಸಿಕ್ಕಳು
ಎನುತಲವಳನು ಅಪ್ಪಲು
ಮುಂದೆ ನುಗ್ಗಲು ಕನಸು ಒಡೆದುದು;
ಕಣ್ಗೆ ಕವಿದಿತು ಕತ್ತಲು!
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...