ಬಂಡನೋರ್ವ ತಾ ರಂಡಿಯ ಮನೆಯೊಳು, ಹೆಂಡಕುಡಿದು ನಿಶೆಯಾಗುತಲವನೂ |
ಹೆಂಡಿರು ಮಕ್ಕಳ ಪರಿವೆಯು ಯಿಲ್ಲದೆ, ಕಂಡಹಾಗೆ ತಾ ಜೋಲಿಯ ಹೊಡೆಯುತೇ |
ಕಂಡಕಡೆಗೆ ತಾನೂರೊಳು ತಿರುಗುತೆ, ಬಂಡಬಂಡತಾ ಬೈಗಳ ಬೈಯ್ಯುತೆ
ಅಂಡಜೋದ್ಭವನ ಸೃಷ್ಠಿಯೊಳುತಾ, ಚಂಡವಿಲಕ್ಷಣ ಪ್ರಾಣಿಯು ತೋರುತೆ |
ಖಂಡಪರಶುವಿನ ರಾಜ್ಯದಿ ಮೆರೆವಾ, ಖಂಡಪಿಶಾಚಿಗಳಾಗ್ರಣಿ ತೋರುತೆ |
ಕೆಂಡದಂಥಕಂಣ್ಜೋತಿಯ ಬೀರುತೆ, ತಂಡ ತಂಡ ಜನದಿಟ್ಟೆಯಶೆಳೆಯುತೆ |
ಚಂಡರಾತ್ರಿಯಲಿ ಬಿಸಿಲೆನ್ನುತೆ ಕೊಡೆ, ಕೊಂಡು ಮಾರ್ಗದೊಳ್ನಡೆದಿರೆ ಮಧ್ಯದಿ |
ಕಂಡು ನೆಲವಹೊಳೆಯೆನ್ನುತ ಲೀಜುತೆ, ಕಂಡಹಾಗೆ ಮೈ ಗಾಸಿಯ ಗೊಳಿಸುತೆ |
ಪುಂಡತನವ ತಾನೀಪರಿ ನಡಿಸಿರೆ ತಂಡವೊಂದು ಪೋಲೀಸರ ಬರಲವ |
ತಿಂಡಿ ತೀರ್ದುನಿಶೆಯಿಳಿಯುತೆ ಲಾಚಣ, ದಂಡಿತನಾಗುತೆ ಶೆರೆಮನೆ ಸೇರ್‍ದನು ||
*****

















