ಹಾಡುಗಬ್ಬದ ಕಬ್ಬಿಗರ್ಗೆ ತಲೆಮಣಿಯಾಗಿ
ರಾರಾಜಿಸುತ್ತಿರುವೆ ಭರತೇಶ ವೈಭವವ
ಸಾಂಗತ್ಯ ಸಂಗೀತ ಧಾಟಿಯಲಿ ವಿರಚಿಸುವ
ಸೈಪಿಂಗೆ ನೊ೦ತ ರತ್ನಾಕರನೆ! ನೀ ಯೋಗಿ-
ಭೋಗಿಗಳ ಬಗೆಯಲರುವಂತೆ ಯೋಗ-ತ್ಯಾಗ-
ಗಳ ಬಟ್ಟೆಯಲಿ ಹಾಸು ಹೊಕ್ಕಾಗಿ ಜಾಣ್ಮೆಯಲಿ
ರಾಗ ಭೋಗಗಳನ್ನು ನೆಯ್ದಿರುವೆ ಜೈನರಲಿ
ಆದ್ಯ ಚಕ್ರೇಶ ಭರತನ ಕತೆಯ ರಸದಾಗ-
ರವದಾಗೆ ತಿಳಿಗನ್ನಡದ ಸುಲಭ ಶೈಲಿಯಲಿ
ಬರೆದಿರುವೆಯಲ್ಲದಪರಾಚಿತೇಶ್ವರ ಶತಕ
ರತ್ನಾಕರಾಧೀಶ ಶತಕಗಳ ತ್ರೈಲೋಕ
ಶತಕವನ್ನಧ್ಯಾತ್ಮ ಗೀತಗಳನೋಚೆಯಲಿ
ರಚಿಸಿರುವೆ. ನಮ್ಮ ದಕ್ಷಿಣ ಕನ್ನಡದೊಳಿರುವ
ಮೂಡಬಿದರೆಯೊಳಿದ್ದೆ ರಸಿಕ ಜನ ಸಂಜೀವ!
*****
೧೯೪೪








