ಮಿನಿಮಿನಿ ಉರಿಯುವ ದೀಪವು ಇರುವದು
ಬೆಕ್ಕಿನ ಕಣ್ಣಿನ ಗುಡ್ಡದೊಳು
ಅಂತೆಯೆ ಅಲೆದಾಡುವದದು ಸುಲಭದಿ
ಮನಬಂದಂತೇ ಕಾರಿರುಳು
ಸಿಟ್ಟಿಗೆಯೆದ್ದಾಗಪ್ಪನ ಕಣ್ಣು
ಕಿಡಿಕಿಡಿ ಬೆಂಕಿಯ ಕಾರುವದು
ಸಿಟ್ಟು ಅಪ್ಪನಿಗೆ ಎಷ್ಟೇಬರಲಿ
ಬೆಕ್ಕಿನ ಹಾಗೇ ಕಾರಿರುಳಿನಲಿ
ಅವನಿಗೆ ಅಲೆದಾಡಲು ಬರದೆಂದು
ಮನಸಿಗೆ ತೋರುವದು| ನನ್ನ
ಮನಸಿಗೆ ತೋರುವದು.
*****

















