ನಿಗೂಢ ಘಳಿಗೆ

ನಾವು ಮತ್ತೆ ಮತ್ತೆ ಕೆಲವು
ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು
ಅವು ನಾಯಿಗಳನ್ನು ಸಾಕಿಕೊಂಡಂತೆ
ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ

ನಾವು ಮತ್ತೆ ಮತ್ತೆ ಉತ್ತರಗಳನ್ನು
ಬಿಟ್ಟುಕೊಡಲೇಬಾರದು
ಅವು ಮೀನುಗಳಂತೆ
ಪುಳಕ್ಕನೆ ಜಾರಿ ಕಣ್ಮರೆ
ಸುಳಿಗೆ ಸಿಕ್ಕು ಸುಮ್ಮನೆ ಒದ್ದಾಟ

ನಾವು ಎಷ್ಟೋ ಸಲ ಸಿಹಿಕಹಿಗೆಂದು
ಕಟ್ಟಿಕೊಳ್ಳುವ ಪ್ರಶ್ನೋತ್ತರಗಳು
ತಲೆಬುಡವಿಲ್ಲದೆ ಜಾರುಬಂಡೆಯಲಿ
ಜಾರುವಾಗ ಮನಸು ಮದುವೆಗೋ
ಮಸಣಕೋ ಸರಿಯುವ ಘಳಿಗೆ
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಕಾಕ್ ಚಳುವಳಿ ಸೂರ್ಯ ಅಸ್ತಂಗತನಾದ್ನಲ್ಲ
Next post ನಗೆ ಡಂಗುರ – ೭೦

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…