Home / ಕವನ / ಕವಿತೆ / ಗುಜುಗುಜು ಮಾಪುರಿ

ಗುಜುಗುಜು ಮಾಪುರಿ

ಇತ್ತಂಡವರು:- ಗುಜಗುಜ ಮಾಪುರಿ ಆಡೋಣ
ಗುಜೇರ ಮಾಪುರಿ ಆಡೋಣ
ಸಾಮದಂಡಿ ಆಡೋಣ
ಸರಲೋಕಕ್ಕೆಲ್ಲ ತಿಳಿಸೋಣ  ||ಪ||
ಇತ್ತಂಡದವರು:- ಗುಜಗುಜ ಮಾಪುರಿ ಗಂಡವರು
ಗುಜೇರ ಮಾಪುರಿ ಹೆಣ್ಣವರು
ಸಾಮದಂಡಿ ಹೆಣೆಯವರು
ಸರಲೋಕಕ್ಕೆಲ್ಲ ಸಭೆಯವರು  ೧
ಇತ್ತಂಡದವರು:- ಗುಜಗುಜ ಮಾಪುರಿಗೇನೈತೆ
ಗುಜೇರ ಮಾವುರಿಗೇನೈತೆ
ಸಾಮದಂಡಿಗೇನೈತೆ
ಸರಲೋಕಕ್ಕೆಲ್ಲ ಏನೈತೆ  ೨
ಗಂಡು:- ಗುಜಗುಜ ಮಾಪುರಿ ಗಂಡೈತಿ
ಗುಣೀರ ಮಾವುರಿ ಹೆಣ್ಣವರ
ಸಾಮದಂಡಿಗೆ ಗಂಡೈತಿ
ಸರಲೋಕಕ್ಕೆಲ್ಲ ಗಂಡೈತಿ  ೩
ಹೆಣ್ಣು :- ಗುಜಗುಜ ಮಾಪುರಿ ಗಂಡವರ
ಗುಜೇರ ಮಾಪುರಿ ಹೆಣ್ಣೈತಿ
ಸಾಮದಂಡಿಗೆ ಹೆಣ್ಣೈತಿ
ಸರಲೋಕಕ್ಕೆಲ್ಲ ಹೆಣ್ಣೈತಿ  ೪
ಗಂಡು:- ಗುಜಗುಜ ಮಾಪುರಿಗೇನೇನ
ಗುಜೇರ ಮಾಪುರಿಗೇನೇನ
ಸಾಮದಂಡಿಗೇನೇನ
ಸರಲೋಕಕ್ಕೆಲ್ಲ ಏನೇನ  ೫
ಚೌಕು ೧-
ಗಂಡು:- ಒಂದು ರೂಪಾಯಿ ಕೊಡತಿವಿ
ಹೆಣ್ಣ ಕೋಡತಿಗೆ ಹೆಣ್ಣ ಕೊಡತಿಗೆ ||
ಹೆಣ್ಣು :- ಒಂದು ರೂಪಾಯಿಯೆಂಬುದು
ಹಾಸೂದು ಹಾಸುಣಕಿ
ಬೀಸೂದು ಬೀಸುಣಕಿ
ಗಂಡನ ಮನಿ ದುಡಕಿ
ನಿನ್ನಂಥ ಬಿಡಕಿಗೆ
ಹೆಣ್ಣಿಲ್ಲತಿಗೆ ಹೆಣ್ಣಿಲ್ಲತಿಗೆ
****
ಗಂಡು:-ಗುಜಗುಜ ಮಾಪುರಿಗೇನ್ವಸ್ತ
ಗುಜೇರ ಮಾಪುರಿಗೇನ್ವಸ್ತ
ಸಾಮದಂಡಿಗೇನ್ವಸ್ತ
ಸರಲೋಕಕ್ಕೆಲ್ಲ ಏನ್ವಸ್ತ  ೬
ಚೌಕು ೨ :-
ಗಂಡು:- ವಂಕಿ ಸರಗೀಯ ಇಡತಿವಿ
ಹೆಣ್ಣ ಕೋಡತಿಗೆ ಹೆಣ್ಣ ಕೋಡತಿಗೆ ||
ಹೆಣ್ಣು:- ವಂಕಿ ಸರಗೀಯ ಭಂಗಾರ
ಮಯ್ಯೊಳು ಒಣ ಭಾರ
ಮಗಳಿಗೆ ದುಡಕಿಯ
ಕಟಕಿಟಿ ಬಲು ಜೋರ
ನಿನ್ನಂಥ ಬಿಡಕಿಗೆ
ಹೆಣ್ಣಿಲ್ಲತಿಗೆ ಹೆಣ್ಣಿಲ್ಲತಿಗೆ ||
ಗಂಡು:-ಗುಜಗುಜ ಮಾಪುರಿ ಮದವೀಗೆ
ಗುಜೇರ ಮಾವುರಿ ಮದುವೀಗೆ
ಸಾಮದಂಡಿ ತಂದೀವಿ
ಸರಲೋಕಕ್ಕೆಲ್ಲ ಕರೆದೀವಿ
****
ಚೌಕು ೩:-
ಗಂಡು:- ಬೇಡಿದ್ದ ಕೊಡತಿವಿ ಬೇಡಿದ್ದ ಇಡತಿವಿ
ಹೆಣ್ಣ ಕೋಡತಿಗೆ ಹೆಣ್ಣ ಕೋಡತಿಗೆ ||
ಹೆಣ್ಣು:- ಕುಲಸುದ್ದ ಮನಿಯಾಗ
ವರಸುದ್ದ ಇರಬೇಕ
ತಾಳ್ಯೊಂದು ಮೂಗುತಿ
ಮಂದ್ಯಾಗ ಮನಿಮುಂದ
ಮದುವೆಯ ಮಾಡಿದರ
ಹೆಣ್ಣೈತತಿಗೆ ಹೆಣ್ಣೈತತಿಗೆ ||
ಇತ್ತಂಡದವರು:- ಗುಜಗುಜ ಮಾವುರಿ ಅನ್ನೀರೆ
ಗುಜೇರ ಮಾಪುರಿ ಆಡೀರೆ
ಸಾಮದಂಡಿ ಹಣೆಯೀರೆ
ಸರಲೋಕಕ್ಕೆಲ್ಲ ಹಾಡೀರೆ
*****
ಈ ಹಾಡಿನ ಬೇರೆ ಬೇರೆ ರೂಪಾಂತರಗಳು ಸಿಗುತ್ತವೆ. ಅವುಗಳಲ್ಲಿ ಅರ್ಥ ಭಾವೋದ್ದೇಶವುಳ್ಳದ್ದನ್ನು ಇಲ್ಲಿ ಎತ್ತಿಕೊಳ್ಳಲಾಗಿದೆ.
Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...