Home / ಲೇಖನ / ಇತಿಹಾಸ / ಜರ್‍ಮನಿಯಲ್ಲಿ ಹಿಟ್ಲರ್ ಹಾಗೂ ಆತನ ನಾಜೀ ಪಕ್ಷದ ಉದಯ

ಜರ್‍ಮನಿಯಲ್ಲಿ ಹಿಟ್ಲರ್ ಹಾಗೂ ಆತನ ನಾಜೀ ಪಕ್ಷದ ಉದಯ

೧ ಪ್ರಥಮ ಜಾಗತಿಕ ಯುದ್ಧದ ನಂತರದ ಜರ್‍ಮನಿ

೧೯೧೮ರ ನವೆಂಬರನಲ್ಲಿ ಕೊನೆಗೊಂಡ ಪ್ರಥಮ ಜಾಗತಿಕ ಯುದ್ಧವು ಅರ್ಧಮಿಲಿಯನ್‌ಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೇ, ಒಂದು ಕಾಲಕ್ಕೆ ಬಲಿಷ್ಟವಾಗಿದ್ದ ಜರ್‍ಮನಿ ಸೋಲಿನ ಸುಳಿಯಲ್ಲಿ ನರಳಿತು. ಗಂಭೀರ ಯುದ್ಧ ಉದ್ದೇಶಗಳನ್ನು ಇಟ್ಟುಕೊಂಡು ತನ್ನ ಬೆಂಬಲಿಗರನ್ನು ಸೇನಾಧಿಕಾರಿಗಳನ್ನು ಮೂರ್ಖ ಯೋಜನೆಗಳ ಮೂಲಕ ಹುರಿದುಂಬಿಸುತ್ತಿದ್ದ ರಾಜ ಕೈಸರ್ ವಿಲಿಯಂ[೧೮೫೯-೧೯೪೧]ನು ನೆದರಲ್ಯಾಂಡಿಗೆ ಪಲಾಯನಗೈದನು. ೧೯೧೯ರಲ್ಲಿ ಎಲ್ಲ ಮಿತ್ರಪಕ್ಷಗಳು ಏಕಪಕ್ಷೀಯವಾಗಿ ಒಪ್ಪಿಕೊಂಡ ವರ್ಸ್ಸೇಲ್ಸ ಒಪ್ಪಂದಕ್ಕೆ ಜರ್‍ಮನ್ ಪ್ರಜಾಸತ್ತಾತ್ಮಕತೆಯನ್ನು ಪ್ರತಿಪಾದಿಸುತ್ತಿದ್ದ ಪ್ರಜಾಪ್ರಭುತ್ವವಾದಿಗಳು ಬಲವಂತವಾಗಿ ಒಪ್ಪಬೇಕಾಯಿತು. ಮೊದಲ ಜಾಗತಿಕ ಯುದ್ಧದ ನೇರ ಹೊಣೆಯನ್ನು ಜರ್‍ಮನಿಯ ಮೇಲೆ ಹೊರಿಸಲಾಯಿತು., ಯುದ್ಧ ಪರಿಹಾರದ ಬೇಡಿಕೆಯನ್ನು ಜರ್‍ಮನಿ ನೀಡಬೇಕಾಯಿತು. ಜರ್‍ಮನಿಯು ಹೊಂದಿದ ವಸಾಹತುಗಳ ಸ್ವಾಮ್ಯವನ್ನು ರದ್ದು ಮಾಡಲಾಯಿತು. ಜರ್‍ಮನಿಯ ಪ್ರಜಾಪ್ರಭುತ್ವದ ಪ್ರಥಮ ಮುಖಾಮುಖಿ ಪ್ರಯತ್ನಗಳು ಜರ್‍ಮನ್ನರಿಂದಲೇ ನಿರಾಕರಣೆ ಹಾಗೂ ಪ್ರತಿಭಟನೆಗೆ ಗುರಿಯಾದದ್ದು ವಿಪರ್ಯಾಸ. ಒಂದು ವರ್ಷದ ನಂತರ ಸಿದ್ದಪಡಿಸಿದ ಸಾಂವಿಧಾನಿಕ ಕರಡು ರೈಖ್‌ಸ್ಟ್ಯಾಗಗೆ [ಸಂಸತ್ತು] ಅಂತಹ ಅಧಿಕಾರವನ್ನು ನೀಡಿರಲಿಲ್ಲ. ಎಡ ಮತ್ತು ಬಲ ರಾಪ್ಟ್ರೀಯವಾದಿಗಳು ವರ್ಸ್ಸೇಲ್ಸ್ ಒಪ್ಪಂದದಲ್ಲಿ ಜರ್‍ಮನಿಯನ್ನು ಮಾರಾಟಕ್ಕಿಟ್ಟರೆಂದು ಪ್ರಜಾಪ್ರಭುತ್ವವಾದಿಗಳನ್ನು ದೂಷಿಸತೊಡಗಿದರು. ಪೂರ್ವಭಾವಿಯಾಗಿ, ಸಮ್ಮಿಶ್ರ ಸರಕಾರದ ಕಲ್ಪನೆಗೆ ದೊಡ್ಡ ಪೆಟ್ಟು ಬಿತ್ತು. ಅದರ ಪ್ರಾಮುಖ್ಯತೆ ಭಂಡ ಜನರ ಕಣ್ಣಲ್ಲಿ ತನ್ನ ಮಹತ್ವ ಕಳೆದುಕೊಂಡಿತ್ತು.

೨ ನಾಜೀ ಪಕ್ಷದ ಉದಯ

ಈ ಸನ್ನಿವೇಶವು ರಾಷ್ಟ್ರೀಯ ಸಮಾಜವಾದಿ ಪಕ್ಷದ ಅಂದರೆ ನಾಜೀ ಪಕ್ಷದ ಸಂಘಟನೆಗೆ ಉತ್ತೇಜಿಸಿತು. ಕಳೆದುಕೊಂಡ ಗೌರವವನ್ನು ಪುನಃ ಸ್ಥಾಪಿಸಿಕೊಳ್ಳಬಯಸಿದ ಅತೃಪ್ತ ಜರ್‍ಮನ್ನರು ಈ ಪಕ್ಷವನ್ನು ಬೆಂಬಲಿಸತೊಡಗಿದರು.

ಎಲ್ಲರಿಗೂ ಉದ್ಯೋಗ ಖಾತ್ರಿ, ಸಂಪತ್ತಿನ ಮರುಹಂಚಿಕೆ ಇವು ಈ ಪಕ್ಷದ ಪ್ರಮುಖ ಪ್ರಣಾಳಿಕೆಗಳಾಗಿದ್ದವು. ಪಕ್ಷದ ಹಿಡಿತವು ವೃತ್ತಿಯಿಂದ ಮನೆಗೆ ಬಣ್ಣಬಳಿಯುವ ಕಾಯಕದ, ಆಸ್ಟ್ರೀಯಾದಲ್ಲಿ ಜನಿಸಿದ ಅಡಾಲ್ಫ ಹಿಟ್ಲರ್ ಎಂಬ ಯುವ ಮುಖಂಡನ ಕೈಯಲ್ಲಿತ್ತು. ಆತ ಬಹಳ ಸುಲಭವಾಗಿ ಜನರನ್ನು ಸಮ್ಮೋಹನಗೊಳಿಸಿದ, ತನ್ನ ಪೊಳ್ಳು ಮಾತಿನಲ್ಲಿ ಭರವಸೆಗಳ ಬೆರೆಸಿ ಅತಿಯಾದ ಧರ್ಮಾಂಧತೆಯ ಸಂಗತಿಗಳಿಂದ ಜನರಲ್ಲಿ ಹಿಸ್ಟಿರಿಯಾ ಸೃಷ್ಟಿಸಿದ. ಶ್ರೇಷ್ಠ ಜರ್‍ಮನ್ ಜನಾಂಗವೆಂದು ಆತ ಕರೆಯಲ್ಪಡುವ ತನ್ನ ಕುಲದವರನ್ನು ಪರಮಯೋಗ್ಯರೆಂದು ಸಾರುವುದು ಹಾಗೆ ಭೂತಕಾಲದಲ್ಲಿ ಆರ್ಯನ್ ಜನಾಂಗದ ಮೇಲೆ ನಡೆದ ಐತಿಹಾಸಿಕ ಅನ್ಯಾಯಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದು ಆತನ ಪ್ರಮುಖ ಗುರಿಗಳಾಗಿದ್ದವು. ಕೊನೆಯಲ್ಲಿ ಪೋಲೆಂಡ ಮತ್ತು ರಷ್ಯಾದ ಸ್ಲೆವಿಕ್ ಭಾಗಗಳನ್ನು ವಶಪಡಿಸಿಕೊಂಡನು.

೧೯೨೦ರ ಬಹು ಸಮಯವದವರೆಗೂ ನಾಜೀ ಸಾಮ್ರಾಜ್ಯವು ಜರ್‍ಮನಿಯ ದಕ್ಷಿಣಭಾಗ[ಬೊಲಿವಿಯಾ]ದವರೆಗೆ ಮಾತ್ರ ಮಿತಿಯಲ್ಲಿತ್ತು. ೧೯೨೯ರ ಗ್ಲೋಬಲ್ ಡಿಪ್ರೆಶನ್ ಕಾರಣ ದೊಡ್ಡ ಸಂಖ್ಯೆಯಲ್ಲಿ ಜನರು ಹಿಟ್ಲರನನ್ನು ಆರಾಧಿಸತೊಡಗಿದರು. ಹಾಗೂ ೧೯೩೦-೩೨ರ ರೈಖ್‌ಸ್ಟ್ಯಾಗ್‌ನ ಚುನಾವಣೆ ಆತನನ್ನು ಅಧಿಕಾರದ ಗದ್ದುಗೆಗೆ ಏರಿಸಿತು.

೩ ಸರ್ವಾಧಿಕಾರದ ಹಿಟ್ಲರ

ಇದೇ ಸಮಯದಲ್ಲಿ ಹಿಟ್ಲರನು ಯಹೂದಿಗಳ ಮೇಲೆ ಹಾಗೂ ನಾಜೀ ವಿರೋಧಿ ಉದ್ದೇಶಗಳ ಮೇಲೆ ಅಪಾಯಕಾರಿ ಆಕ್ರಮಣವನ್ನು ಬಾಹ್ಯವಾಗಿಯೇ ಪ್ರಾರಂಭಿಸಿದನು. [ಪ್ಯಾಸಿಸಂ, ಕ್ರೈಸ್ತಧರ್ಮ ಹಾಗೂ ಕಮ್ಯೂನಿಸಂಗಳು ಅಪಾಯದ ಪಟ್ಟಿಯಲ್ಲಿದ್ದವು] ಶ್ರೇಷ್ಠ ಜರ್‍ಮನ್‌ರಿಗಾಗಿ ಜರ್‍ಮನಿಯನ್ನು ಯಹೂದಿಮುಕ್ತ ಗೊಳಿಸಲು ಪ್ರಾರಂಭಿಸಿದ. ೧೯೩೩ರ ಪ್ರಾರಂಭದಲ್ಲಿ ಜರ್‍ಮನಿಯ ಅಧ್ಯಕ್ಷನಾಗಿದ್ದ ಹಿಂಡನ್ ಬರ್ಗ ತನ್ನ ಅಧಿಕಾರದಿಂದ ವಿಮುಖನಾದ ಹಾಗೂ ಹಿಟ್ಲರನನ್ನು ಛಾನ್ಸಲರ್ ಆಗಿ ಆಯ್ಕೆ ಮಾಡಿದ. ಅದಕ್ಕೆ ಪ್ರತಿಯಾಗಿ ಹಿಟ್ಲರ್ ಸಮಯವನ್ನು ಕಾಯದೇ ಸಂಸತ್ತನ್ನು ವಿಸರ್ಜಿಸಿ ತಾನೇ ಸರ್ವಾಧಿಕಾರಿಯಾದನು.

೪ ಹಿಟ್ಲರ್ ಯಹೂದಿಗಳನ್ನು ದ್ವೇಷಿಸಿದ

ಆನಂತರ ಕೂಡಲೇ ಹಿಟ್ಲರ್ ಯಹೂದಿ ವಿರೋಧಿ ಕ್ರಮಗಳನ್ನು ಪ್ರಾರಂಭಿಸಿದನು. ಮೊದಲಿಗೆ ಸಾರ್ವಜನಿಕ ಸೇವೆಗಳಿಂದ, ಅವರನ್ನು ಸಾಮೂಹಿಕವಾಗಿ ವಜಾಮಾಡಲಾಯಿತು, ಖಾಸಗಿ ಉದ್ಯೋಗ ಹಾಗೂ ಆಚರಣೆಗಳಿಂದ ಹೊರಹಾಕಲಾಯಿತು. ಉದ್ಯೋಗವಕಾಶಗಳನ್ನು ನಿರಾಕರಿಸಲಾಯಿತು. ಇವೆಲ್ಲವೂ ಬಹು ಕ್ಷೀಪ್ರವಾಗಿ ನಡೆದವು. ಜರ್‍ಮನ್ ಸಮುದಾಯದಿಂದ ಯಹೂದಿಗಳನ್ನು ಬೇರೆ ಮಾಡಲಾಯಿತು. ಈ ದೇಶಭ್ರಷ್ಟರಿಗೆ ಯಾವ ಸೌಲಭ್ಯಗಳು ಲಭ್ಯವಿರಲಿಲ್ಲ. ಜರ್‍ಮನಿಯ ಎಲ್ಲ ಪ್ರದೇಶಗಳಲ್ಲಿ ಈ ಯಹೂದಿಗಳು ಇತರ ದೇಶಗಳಿಗೆ ಓಡಿಹೋಗದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಯಿತು.

೫ ದ್ವಿತೀಯ ಮಹಾಯುದ್ಧಕ್ಕೆ ಕಾರಣನಾದ ಸರ್ವಾಧಿಕಾರಿ

ಜರ್‍ಮನಿಯ ಈ ಸರ್ವಾಧಿಕಾರಿ ಬಹು ಅಚ್ಚುಕಟ್ಟಾದ ರೀತಿಯಲ್ಲಿ ತನ್ನ ಸೈನ್ಯವನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿದನು. ಆತನ ಆಕ್ರಮಣವು ಪೂರ್ವದ ಮೇರೆ ಗಡಿಗಳಲ್ಲಿ ಬಹಳ [ಸೆಪ್ಟೆಂಬರ್ ೧೯೩೯ರ ಸುಮಾರಿಗೆ] ಪ್ರಮುಖವಾಗಿತ್ತು. ಆಗ ಬ್ರಿಟನ್ ಮತ್ತು ಫ್ರಾನ್ಸ್ ಶಾಂತಿ ಮಾರ್ಗವನ್ನು ತ್ಯಜಿಸಿದವು ಮತ್ತು ಅದನ್ನು ಉದ್ಘೋಷಿಸಿದವು. ಅದು ಮೇ ೧೯೪೦ವರೆಗ ಹಾಗೇ ಇದ್ದು, ನಂತರ ಜರ್‍ಮನಿ ಪೋಲಂಡ, ಡೆನಮಾರ್ಕ, ನಾರ್ವೆಗಳನ್ನು ವಿಸ್ತರಿಸಿಕೊಂಡ ಬಳಿಕ ಅದು ಪಶ್ಚಿiದ ಕಡೆಗೆ ತಿರುಗಿ ಅಲ್ಲಿ ಯುದ್ಧ ಅಲಿಪ್ತ ಪ್ರದೇಶಗಳಾಗಿದ್ದ ಹಾಲಂಡ ಮತ್ತು ಬೆಲ್ಜಿಯಂನ್ನು ಧೂಳಿಪಟಮಾಡಿ, ನಂತರ ಫ್ರಾನ್ಸನ ಮೇಲೆ ಆಕ್ರಮಣದ ಮಳೆಗೆರೆಯಿತು. ಜೂನ್ ೧೯೪೦ರಲ್ಲಿ ಫ್ರಾನ್ಸ ಕೂಡಾ ಶರಣಾಯಿತು. ಈಗ ಏಕಾಂಗಿ ವಿರೋಧಿ ಬಣದ ಬ್ರಿಟಿಷರು ಫ್ರಾನ್ಸನ ಡನ್ಕಿರ್‍ಕ್‌ನ್ನು ಜರ್‍ಮನಿಯ ಪಾಲಾಗದಂತೆ ಉಳಿಸಿಕೊಂಡರು ಮತ್ತು ಭೀಕರ ಆಕ್ರಮಣಕ್ಕೆ ಎದುರು ನೋಡತೊಡಗಿದರು. ಇದು ಯುದ್ಧದಲ್ಲಿ ಸರ್ವಾಧಿಕಾರಿ ಹಿಟ್ಲರ್‌ನ ದಿಗ್ವಿಜಯವಾಗಿತ್ತು. ಸುಮಾರು ಜೂನ್ ೧೯೪೧ರಲ್ಲಿ ಇಡೀ ಯುರೋಪ ಆತನ ಕಾಲಬುಡದಲ್ಲಿ ಬಿದ್ದಿತ್ತು, ಆದರೆ ಬ್ರಿಟಿಷ ತನ್ನ ನಡುಗಡ್ಡೆಗಳನ್ನು ಕಾಪಾಡಿಕೊಂಡಿತು. ಪೂರ್ವದಲ್ಲಿ ಅದು ೧೯೩೯ರಲ್ಲಿ ಆಕ್ರಮಣ ವಿರೋಧಿ ನೀತಿಗೆ ರಶಿಯಾದ ಸ್ಟಾಲಿನ್‌ನೊಂದಿಗೆ ಹಿಟ್ಲರ್ ಸಹಿ ಮಾಡಿದ್ದನು. ಈಗ ಅದೇ ಸ್ಟಾಲಿನ್‌ನ ರಶಿಯಾವನ್ನು ಕೂಡಾ ಆತನ ಸೈನ್ಯ ಗೆದ್ದುಕೊಂಡಿತು.
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...