ಅಜೀರ್ಣ

ವೇದ ಪುರಾಣ ಶಾಸ್ತ್ರಾಗಮ
ವ್ಯಾಕರಣ ಛಂದ ಕಾವ್ಯ ಮೀಮಾಂಸೆಗಳ
ಕಂಠಸ್ಥ ಮಾಡಿಕೊಂಡಿದ್ದರೆ
ಇಂಗ್ಲೀಷ ಜಮನ್ ಫ್ರೆಂಚ್
ಇತ್ಯಾದಿ ಕವಿ ವಿಮರ್ಶಕರನ್ನು
ಬಾಯಿ ತುಂಬ ಮುಕ್ಕಳಿಸಿ ಉಗುಳುತ್ತಿದ್ದರೆ

ಪಂಪ ರನ್ನ ಹರಿಹರ
ಕುಮಾರವ್ಯಾಸ ಲಕ್ಷ್ಮೀಶಾದಿಗಳನ್ನು
ಕಂಡ ಕಂಡಾಗಲೆಲ್ಲ
ಕಾರಿಕೊಳ್ಳುತ್ತಿತ್ತಿದ್ದರೆ ಏನು ಬಂತು!

ಹೊಟ್ಟೆ ಕೆಡಿಸುವ
ಉಂಡಿ ಹೋಳಿಗೆ ಭಕ್ಷ್ಯಾದಿಗಳ
ಪುಟ್ಟಿ ತುಂಬ ಕುತ್ತಿಗೆ ಮಟ ತಿಂದು
ವಾಂತಿ ಮಾಡಿಕೊಂಡಂತೆ

ಹೊಟ್ಟೆ ಝಾಡಿಸಿದಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಟೆ
Next post ನನ್ನ ಹಾದಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…