ಮಲ್ಲಿ – ೭

ಮಲ್ಲಿ – ೭

ಬರೆದವರು: Thomas Hardy / Tess of the d’Urbervilles

ಮದರಾಸಿನ ಬಿಷಪ್ಪನು ಬಂದು ಪ್ರಿನ್ನು ನೋಡಿದನು. ಆತನು ಅಲ್ಲಿಗೆ ಬಂದು ನೋಡಬೇಕೆಂದು ಆಹ್ವಾನವು ಹೋಗಿತ್ತು. ಬೆಳಿಗ್ಗೆ ಒಂಭತ್ತು ಗಂಟೆಯಿಂದೆ ಹನ್ನೊಂದು ಗಂಟೆಯವರಿಗೆ ಸ್ಟಾಕೇಡಿ ನಲ್ಲಿ ಅನೆ ಕಟ್ಟುವ ಸಂಭ್ರಮವನ್ನು ನೋಡಿ ದಂಪತಿಗಳು ಹಿಂತಿರುಗಿ ದರು. ಕೊಂಚ ಆಯಾಸ ಪರಿಹಾರವಾದಮೇಲೆ ಸುಮಾರು ಹನ್ನೊಂದೂವರೆಗಂಟೆ ಇರಬಹುದು. ಬಿಷಪ್ನಿಗೆ ಚಕ್ರವರ್ತಿ ಕುಮಾರನ ದರ್ಶನವಾಯಿತು. ಪರಸ್ಪರ ಕುರಲಪ್ರಶ್ನೆಗಳಾದಮೇಲೆ ಮಾತುಕಥೆಗಳು ವ್ಯವಹಾರ ದೃಷ್ಟಿಯಲ್ಲಿ ಮುಂದೆ ಹರಿದುವು:-

“ಇಲ್ಲಿ ತಮ್ಮ ಕೆಲಸಕಾರ್ಯಗಳು ಹೇಗಿವೆ?”

“ಇಲ್ಲಿ ನಮಗೆ ಬಹಳ ಕಷ್ಟ. ಇಲ್ಲಿ ಸಮಾಜವು ಬಹು ಭದ್ರ ವಾಗಿದೆ. ಜನಸಾಮಾನ್ಯರಲ್ಲೂ ಇವರ ವೇದಾಂತಗಳು ಬಲವಾಗಿ ಬೇರೂರಿವೆ. ಪ್ರತ್ಯಕ್ಷವಾಗಿ ವೇದಶಾಸ್ತ್ರಗಳೆಂದು ಹೇಳಿಕೊಂಡು ಕರ್ಮ ಗಳನ್ನು ಮಾಡುವ ಬ್ರಾಹ್ಮಣರ ಆಚರಣೆಗಳು ಮೆಟ್ಟಿಲು ಮೆಟ್ಟಿಲಾಗಿ ಕೆಳಗಿನವರೆಗೆ ಇಳಿದು ಬಂದಿವೆ. ನಾವು ಉಪನ್ಯಾಸಗಳ ಮೂಲಕ, ಶಾಲೆಗಳ ಮೂಲಕ, ಪುಸ್ತಕಗಳ ಮೂಲಕ, ಬೇಕಾದಹಾಗೆ ಈ ಜನದ ಆಚಾರ ಸಂಪ್ರದಾಯಗಳನ್ನು ತೆಗಳುತ್ತಾ ಇದ್ದೇವೆ. ಆದರೂ ಸಮುದ್ರ ತೀರದಲ್ಲಿ ಮರಳಲ್ಲಿ ಕಟ್ಟಿದ ಮನೆಯಂತಾಗಿದೆ ನಮ್ಮ ಪ್ರಯತ್ನ. ಒಂದು ಹಬ್ಬ ಬಂತು ಎಂದರೆ ಈ ಹಳ್ಳಿಯವರು ಎಷು ಉತ್ಸಾಹದಿಂದ ಸಂಭ್ರಮದಿಂದ ನಡೆಸುತ್ತಾರೆಯೋ ಅಷ್ಟೇ ಉತ್ಸಾಹ ಸಂಭ್ರಮಗಳಿಂದ ನಗರದವರೂ ನಡೆಯುತ್ತಾರೆ. ನಾವು ವರ್ಷವೆಲ್ಲಾ ಪಟ್ಟ ಶ್ರಮ ಆ ಒಂದು ದಿವಸದಲ್ಲಿ ಬುಡಕೂಡ ಉಳಿಯದೆ ಹೊರಟುಹೋಗುತ್ತದೆ. ಅವರ ಗಣಪತಿ, ತಾವು ನೋಡಿದ್ದೀರಾ! ಆ ಗಣಪತಿಯ ಹಬ್ಬದಲ್ಲಿ ಇಪ್ಪತ್ತೊಂದು ದಿವಸ ಅವರು ವಿದ್ವಾಂಸರನ್ನು ಕರೆಯಿಸಿ ವಾದವನ್ನು ಮಾಡಿಸುತ್ತಾರೆ. ಅವರು ತಮ್ಮ ಶಾಸ್ತ್ರಗಳನ್ನು ಕುರಿತು ಭಾರಿ ಭಾರಿ ಉಪನ್ಯಾಸ ಮಾಡುತ್ತಾರೆ. ನಾವು ಅವರ ಉಪನ್ಯಾಸಗಳನ್ನು ಕುರಿತು ಪ್ರಶ್ನೆ ಮಾಡಿದೆವು. ಅವರಂತೆ ವೇಷ ಧರಿಸಿದೆವು. ಏನು ಮಾಡಿದರೂ ನಮ್ಮ ಕೆಲಸ ಸಫಲವಾಗಲಿಲ್ಲ.”

“ಏನು ಮಾಡಿದರೆ ಗೆಲ್ಲಬಹುದು?”

” ಯುವರ್ ಹೈನಸ್ ! ಒಂದೇ ಒಂದು ದಾರಿಯಿರುವುದು. ಎಂದಿನವರೆಗೆ ಈ ಬ್ರಾಹ್ಮಣ ಈ ಸಮಾಜದ ಮುಖಂಡನಾಗಿರುತ್ತಾನೆ ಅಂದಿನನರೆಗೂ ಇಂಡಿಯ ಯಾರಿಗೂ ಬಗ್ಗುವುದಿಲ್ಲ. ಇದನ್ನು ಔರಂಗಜೀಬ್ ಕಂಡುಕೊಂಡು ಕಾಶ್ಮೀರದ ಬ್ರಾಹ್ಮಣರನ್ನೆಲ್ಲಾ ಮುಸಲ್ಮಾನರನ್ನು ಮಾಡಿಸಿದ. ಬಲವಂತವಾಗಿ ಅವರ ಜುಟ್ಟು ಕತ್ತರಿಸಿ, ಅವರ ಜನಿವಾರ ಕಿತ್ತುಕೊಂಡು ಅವರನ್ನು ಜಾತಿಕೆಡಿಸಿದ. ಹಿಮಾಲಯದಲ್ಲಿ ಚಮರಿ ಎಂಬ ಒಂದು ಜಾತಿ ಇದೆ. ಅದರ ಬಾಲ ದಿಂದ ಈ ಚಾಮರಗಳು ಆಗುವುದು. ಅದನ್ನು ಓಡಿಸಿಕೊಂಡು ಬಂದರೆ, ಮುಳ್ಳು ಪೊದೆಯೊಳಕ್ಕೆ ಹೋದರೆ ತನ್ನ ಬಾಲದ ಅಂದ ಕೆಡು ವುದು ಎಂದು ಅಲ್ಲಿಯೇ ನಿಂತು ಅದು ಬೇಟೆಗಾರನಿಗೆ ಸಿಕ್ಕಿಹೋಗುವು ದಂತೆ. ಹಾಗೇ ಈ ಬ್ರಾಹ್ಮಣರೂ ಕೊಂಚ ಜಾತಿಕೆಟ್ಟಿತು ಎಂದರೆ ಆ ಜಾತಿ ಹೋಯಿತು ಎನ್ನುತ್ತಾರೆ. ದೇವರು ಜಾತಿ ಕೊಟ್ಟಿದ್ದರೆ, ಆ ಜಾತಿ ಎಂದಿಗೂ ಹೋಗುವುದಿಲ್ಲ ಎನ್ನುವುದು ಅವರ ಮನಸ್ಸಿಗೆ ಹೊಳೆದಿಲ್ಲ. ಇಲ್ಲಿದೆ ಇಂಡಿಯಾದ ಮರ್ಮ! ಇಂಗ್ಲೀಷಿನಲ್ಲಿ ನಾವು ಅವರ ಧರ್ಮಶಾಸ್ತ್ರ, ವೇದ, ವೇದಾಂತ ಎಲ್ಲವನ್ನೂ ಬಹುವಾಗಿ ಖಂಡಿಸಿದ್ದೇವೆ. ಈಗ ಇನ್ನೊಂದು ಹೊಸ ಗುಂಪು ಬರಬೇಕು. ಈ ಸಂಸ್ಕತ ಓದುವವರು ಕಮ್ಮಿಯಾಗಿ ಇಂಗ್ಲಿಷ್ ಓದುವವರು ಸಾಗ ಬೇಕು. ಅವರಿಗೆ ನಾವು ಬರೆದಿರುವ ಪುಸ್ತಕಗಳಲ್ಲಿ ನಂಬಿಕೆ ಬರಬೇಕು. ಆಗ ಬ್ರಾಹ್ಮಣರ ಪ್ರಭಾವ ಕಡಿಮೆಯಾಗುತ್ತದೆ. ಆಗ ಇಂಡಿಯಾದ ಸಮಾಜ ನಮ್ಮ ಬೈಬಲ್ಲಿನಲ್ಲಿ ಹೇಳುವ ಕುರುಬನಿಲ್ಲದ ಮಂದೆಯಾಗು ತ್ತದೆ. ಆಗ ಗೆಲ್ಲಬಹುದು. ಮಹಮ್ಮುದೀಯರು ಈ ಗುಟ್ಟು ಹಿಡಿಯ ಲಿಲ್ಲ. ಔರಂಗ್ಜೀಬನಂತೆ ಇನ್ನಿಬ್ಬರು ಹುಟ್ಟಿ ಈ ಬ್ರಾಹ್ಮಣರನ್ನು ಮಟ್ಟಹಾಕಿದ್ದರೆ ಇಂಡಿಯ ಉಳಿಯುತ್ತಿರಲಿಲ್ಲ.”

“ಏನು ಅವರು ಸಾಮಾನ್ಯವಾಗಿ ಬಡವರು ಅಂತಾರಲ್ಲ !”

“ಹೌದು ಬ್ರಾಹ್ಮಣರು ಬಡವರು ಅವರಲ್ಲಿ ವೈರಾಗ್ಯವಿದೆ. ತಮ್ಮ ಬಡತನ ಇತರರ ಐಶ್ವರ್ಯಕ್ಕಿಂತ ಹೆಚ್ಚು ಎಂಬ ಭಾವನೆಯಿದೆ. ಅದರಿಂದಲೇ ಆವರ ಜಾತಿ ಬದುಕಿರುವುದು. ಬಡನನಾಗಿದ್ದವನು ದೇವರ ಹತ್ತಿರದನನು ತಾನು ಎನ್ನುತ್ತಾನೆ. “ಈ ಜನ್ಮದಲ್ಲಿ ಯಾವುದೋ ಪಾಪದಿಂದ ಬಡತನ ಬಂದಿದೆ. ಇದು ಎರಡು ದಿವಸ ನೇರವಾಗಿದ್ದು ಕಳೆದರೆ, ಮುಂದಿನ ಜನ್ಮ ಸ್ವರ್ಗದಲ್ಲಿ ಸೂರೆಹೊಡೆಯಬಹುದು” ಎಂದು ಅವರು ಧೈರ್ಯವಾಗಿದ್ದಾರೆ ನಮ್ಮ ಗುರು ಕ್ರಿಸ್ತದೇನನು ಹೇಳುವ ಮಾತೇ ಅದು. ಕ್ರಿಸ್ತದೇವನು ಹೇಳುವ ಎಷ್ಟೋ ಮಾತು ಬೈಬಲ್ಲಿ ಗಿಂತ ಚೆನ್ನಾಗಿ ಅನರ ಉಪನಿಷತ್ತುಗಳಲ್ಲಿ ಹೇಳಿದೆ. ಅವರ ಮೇಲೆ ವಾದಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ಅವರು ಏನು ಕೊಟ್ಟರೂ ಬೇಡ ಎನ್ನುತ್ತಾರೆ. ಅದರಿಂದ ಅವರ ಪ್ರಭಾವ. ಯಾವೊತ್ತು ಬ್ರಾಹ್ಮಣನಿಗೆ ಈ ಲೋಕದ ಭಾಗ್ಯ ಬೇಕು ಎನಿಸುತ್ತದೆ, ಯಾವೊತ್ತು ಅವನಿಗೆ ಹಣದ ಮೇಲೆ ಆಸೆ ಹೆಚ್ಚುತ್ತದೆ, ಅವೊತ್ತು ನಾವು ಉಳಿದೆವು. ಅದುವರೆಗೆ ಏನು ಮಾಡಿದರೂ ಸಾಧ್ಯವಿಲ್ಲ. ಬಲ್ಲಿರಾ? ಯುವರ್ ಹೈನಸ್! ಒಬ್ಬ ಬ್ರಾಹ್ಮಣರ ಹುಡುಗ, ಹೆದಿನಾಲ್ಕು ವರ್ಷದವನು ಬಂದು ಎದುರುಬಿದ್ದ. ನಮ್ಮ ರೆವರೆಂಡ್ರ್ ಹೇಳುತ್ತಿದ್ದರು: ‘ನಿಮ್ಮ ಬ್ರಹ್ಮ ಮಗಳನ್ನೇ ಮಾಡಿ ಕೊಂಡ, ನಿಮ್ಮ ವಿಷ್ಣು ಕಂಡವರ ಹೆಂಡಿರನ್ನೇ ಕೂಡಿಕೊಂಡ, ನಿಮ್ಮ ಶಿವ ತಪಸ್ಸು ಮಾಡುತ್ತಿದ್ದು ಸೈತಾನನು ಹೆಣ್ಣಾಗಿ ಮುಂದೆ ಸುಳಿದಾಗ ಅವಳನ್ನೂ ಅಟ್ಟಿ ಕೊಂಡು ಹೋದ. ನಿಮ್ಮ ಕೃಷ್ಣ ಮನೆಮನೆಯೂ ನುಗ್ಗುತ್ತಿದ್ದ’ ಎಂದು ಅವರ ದೇವರುಗಳನ್ನು ಖಂಡಿಸುತ್ತಿದ್ದರೆ, ಅವನು “ಏನ್ರಿ ! ನಿಮ್ಮ ಗುರುವಿನ ತಂದೆ ಯಾರ್ರಿ ? ಅವನು ಅಪ್ಪನ ಮಗನೋ? ಅಮ್ಮನ ಮಗನೋ ?’ ಎಂದ. ಸೇರಿದ್ದವರೆಲ್ಲಾ ನಕ್ಕು ಬಿಟ್ಟರು. ನಮ್ಮ ರೆವರೆಂಡ್ರು ಅಲ್ಲಿಂದ ಮುಂದೆ ಆ ಜಾಗದಲ್ಲಿ ನಿಂತು ಉಪನ್ಯಾಸ ಮಾಡಲಾಗಲಿಲ್ಲ. ಇನ್ನೊಮ್ಮೆ ಯುವರ್ ಹೈನಸ್, ಇವರಲ್ಲಿ ಬಹು ಕೀಳು ಎನ್ನಿಸಿಕೊಂಡ ಜನ ಇದೆ. ಅದನ್ನು ಕನ್ವರ್ಟ್ ಮಾಡಿದರೆ ಕೋಟ ಕೋಟ ಜನ ನಮ್ಮವರಾಗುತ್ತಾರೆ ಅಂತ ಅವರಲ್ಲಿ ಹೋದೆವು, ಅವರು ಊರಲ್ಲಿ ಇರುವುದಿಲ್ಲ. ಊರಿನ ಆಚೆ ಅವರ ಮನೆಗಳು. ಅವರು ಮುಟ್ಟಿದನೀರು ಉತ್ತಮರು ಯಾರೂ ಮುಟ್ಟೋ ದಿಲ್ಲ. ಅಂಥವರು ಈ ಬ್ರಾಹ್ಮಣರ ದೇವರನ್ನು ಪೂಜಿಸುತ್ತಾರೆ. ಮೈಗಾಡ್ ! ಅವರು ಹಾರುವರಿಗಿಂತ ಬಿಗಿ. ನಮ್ಮನ್ನು ಬ್ರಾಹ್ಮಣ ರಾದರೂ ಮನೆ ಸೇರಿಸಿಯಾರು ಅವರು ಸೇರಿಸುವುದಿಲ್ಲ. ಅವರ ಬಳಿ ಒಬ್ಬ ಲೇಡಿ ರೆವರೆಂಡ್ ಕಳಿಸಿದೆವು. ಅವಳು ಹೋಗಿ “ಪಾಪ! ನಿಮಗೆ ಎಷ್ಟು ಅವಮಾನ ಮಾಡಿದ್ದಾರೆ ಈ ಸಮಾಜ? ನೀವು ನಮ್ಮ ಶಿಷ್ಯರಾಗಿ. ನಿಮ್ಮನ್ನು ಓದಿಸುತ್ತೇವೆ. ನಿಮಗೆ ಭಾರಿ ಭಾರಿ ಅಧಿಕಾರ ಕೊಡಿಸುತ್ತೇವೆ. ನಿಮ್ಮನ್ನು ಲಂಡನ್ನಿಗೆ ಕಳಿಸುತ್ತೇವೆ’ ಅಂತ ಎಲ್ಲಾ ಹೇಳಿದಳು. ಅದಕ್ಕೆ ಅವರು ಏನೆನ್ನಬೇಕು: ಒಬ್ಬ ಮುದುಕ ಎದ್ದು ‘ ಅವ್ವಾ, ನಮ್ಮ ದೇವರಿಗೂ ನಿಮ್ಮ ದೇವರಿಗೂ ಎಷ್ಟು ದೂರ ನೋಡಿ. ನಮ್ಮ ದೇವ್ರು ನಮಗೆ ಮನೆ ಕೊಟ್ಟವ್ನೆ, ಬಾಗಿಲು ಕೊಟ್ಟವ್ನೆ ಮಕ್ಕಳುಮರಿಕೊಟ್ಟು, ಹೊಲಗದ್ದೆ ಕೊಟ್ಟು ನೂರಾರು ವರ್ಷದಿಂದ ಸುಖವಾಗಿ ಇಟ್ಟವ್ನೆ. ನಿಮ್ಮ ದೇವರು ನೋಡಿ, ಮನೆಬಾಗಿಲು ಎಲ್ಲಾ ತೊರಿಸಿ, ದೇಶವಲ್ಲದ ದೇಶಕ್ಕೆ ನಿಮ್ಮನ್ನು ಎಳೆಕೊಂಡುಬಂದ್ಕು ನಮ್ಮ ಮನೆ ಬಾಗಿಲಿಗೆಲ್ಲಾ ಬಂದು ಪಾಪಿ ಪರದೇಸಿ ಅನ್ನೋದೂ ನೋಡದೆ ನಮ್ಮ ಕೈಕಾಲಿಗೆ ಬಿದ್ದು ದುಡ್ಡು ಕೊಡುತೀನಿ, ಕಾಸು ಕೊಡುತೀನಿ ಓದಿಸಿತೀವಿ, ಅಧಿಕಾರ ಕೊಡಿಸುತೀನಿ ಅಂತ ಹೇಳಿ ಪುಸಲಾಯಿಸೋ ಹೆಂಗೆ, ಅಷ್ಪು ಕೀಳಾ ಗೋಂಗೆ ಮಾಡವ್ನೆ. ನಮಗೆ ನಿಮ್ಮ ದೇವರು ಬೇಡ ಕಣವ್ವ’ ಅಂದು ಬಟ್ಟ. ಯುವರ್ ಹೈನಸ್, ತಾವೇ ಯೋಚನೆಮಾಡಿ. ”

“ಈ ಗುಂಪಿನ ಹೆಸರೇನು ?”

“ಅವರನ್ನು ದೇಶದಲ್ಲಿ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಅವರನ್ನು ಸಮಾಜ ತುಳಿದಿಟ್ಟಿದ್ದಾರೆ. ಆದರೂ ಅವರ ಕಟ್ಟು ಪಾಡು, ಇನ್ನು ಯಾರಲ್ಲಿಯೂ ಇಲ್ಲ. ಅವರೆಲ್ಲ ಹಿಂದಿನ ಕಾಲದ ಕ್ಷತ್ರಿಯರು. ನೆಲದ ಒಡೆಯರಾಗಿದ್ದವರು. ಈಗಲೂ ಅವರೇ ಒಡೆಯರಾಗಿದ್ದಂತೆಯೇ ಜಂಭದಿಂದ ಇದ್ದಾರೆ. ಇನ್ನೊಂದು ಕಥೆ ತಾವು ಕೇಳಲೇಬೇಕು. ಒಂದು ದಿನಸ ನಮ್ಮ ರೆವರೆಂಡ್ರು ಅವರ ನಡುವೆ ಹೋಗಿ, ನೀವು ಪ್ರಶ್ನೆಕೇಳಿ ನಾವು ಉತ್ತರ ಹೇಳುತ್ತೇವೆ ಎಂದರು. ಅವರಲ್ಲೊಬ್ಬ ಮುದುಕನೆದ್ದು ಸತ್ಯ ವಾಗಿ ಹೇಳಿ ಸೋಮಿ. ಅರಂಜ್ಯೋತಿ ಹೆಚ್ಚೋ, ಪರಂಜ್ಯೋತಿ ಹೆಚ್ಚೋ ಅಂತ ಕೇಳಿದ. ರೆವರೆಂಡ್ರಿಗೆ ಏನೂ ತಿಳಿಯಲಿಲ್ಲ. ಅವರು ವಿಚಾರಿಸಿಕೊಂಡು ಬರುತೀನಿ ಅಂತ ಬಂದರು. ನಾವು ಹುಡುಕಿದೆವು. ತಮಿಳಿನಲ್ಲಿ ಅರಂ ಎಂದರೆ ಧರ್ಮ. ಸಂಸ್ಕೃತದಲ್ಲಿ ಪರಂ ಎಂದರೆ ಬ್ರಹ್ಮ.

ಓ ದೇವರೆ, ಆ ಕೊನೆಯ ಜಾತಿಯವನು ಕೇಳಿದುದು ಇಂದಿಗೂ ದೊಡ್ಡ ಜಾತಿಯವರಲ್ಲಿ ನಡೆಯುತ್ತಿರುವ ಹೋರಾಟ. ಕೆಲವರು ಕರ್ಮ ಮಾಡ ಬೇಕು ಅದೇ ಹೆಚ್ಚು ಎನ್ನುತ್ತಾರೆ. ಇನ್ನು ಕೆಲವರು ಬ್ರಹ್ಮ ಹೆಚ್ಛು ಎನ್ನು ತ್ತಾರೆ. ಈ ಮೇಲಿನ ಜಾತಿಯವರ ಜಗಳದ ಪ್ರಶ್ನೆ ಆ ಕೆಳಗಿನ ಜಾತಿ ವರೆಗೂ ಹೇಗೆ ಹೋಯಿತು? ರಾಜಕುಮಾರ, ಇಲ್ಲಿದೆ. ಇಂಡಿಯದ ಬಿಗಿ. ಭದ್ರವಾದ ಈ ಕೋಟಿ ಒಡೆದು ಇಂಡಿಯನ್ರಿಗೆ ಹಿಂದಿನ ಸಂಸ್ಕೃತಿಯಲ್ಲಿ ಏನಿದೆ ಮಹಾ! ಎನ್ನಿಸುವವರೆಗೂ ನಮ್ಮದೇನೂ ನಡೆ ಯುವುದಿಲ್ಲ. ಒಂದು ಸಾವಿರವರ್ಷ ಬಿಚ್ಚುಗತ್ತಿ ಹಿಡಿದು ರಾಜ್ಯವಾಳಿದ ಮಹಮ್ಮದೀಯ ಇಲ್ಲಿ ಏನೂ ಮಾಡಲಾರದೆ ಹೋದ. ಇನ್ನೂರು ವರ್ಷದಲ್ಲಿ ಹೋದ ಹೋದ ಎಡೆಯಲ್ಲೆಲ್ಲಾ ಕ್ರೈಸ್ತರನ್ನು ಮಾಡಿದ ನಾವು ಇಲ್ಲಿ ಏನೂ ಮಾಡಿಲ್ಲ. ಈಗ ಬ್ರಿಟಿಷ್ ಚಕ್ರಾಧಿಪತ್ಯದ ಅಳಿವು ಉಳಿವು ಇಂಡಿಯವನ್ನು ಅವಲಂಬಿಸಿದೆ. ರಾಜಕುಮಾರ, ಇಲ್ಲಿ ಜನ ಸಾಮಾನ್ಯ ಇನ್ನೂ ಕಣ್ಣು ಬಿಟ್ಟಿಲ್ಲ. ಇವರಲ್ಲಿ ಭೇದೋಪಾಯ ಮಾಡಬೇಕು. ಮೊದಮೊದಲು ಬ್ರಾಹ್ಮಣರಮೇಲೆ ಇತರರಿಗೆ ಇರುವ ಭಕ್ತಿ ವಿಶ್ವಾಸ ಹೋಗಬೇಕು ಬ್ರಾಹ್ಮಣರಲ್ಲೇ ವಿಷಬೀಜ ಬಿತ್ತ ಬೇಕು. ಇವರು ಫ್ರೆಂಚರೂ ಜರ್ಮನ್ನರೂ ಕಾದಾಡುವಂತೆ, ತಮ್ಮ ತಮ್ಮಲ್ಲಿ ಕಾದಾಡಿ ಮಡಿಯುವಂತೆ ಮಾಡಬೇಕು. ಆಗ ನಾವು ಏನೂ ತಿಳಿಯದವರಂತೆ ‘ನೋಡಿ. ಆ ದೋಣಿ ತೂತುಬಿದ್ದಿದೆ. ಅದು ನಿಮ್ಮನ್ನು ದಾಟಿಸಲಾರದು. ಬನ್ನಿ ನಮ್ಮ ದೋಣಿ ಸಿದ್ಧ ವಾಗಿದೆ. ನನ್ನ ಗುರು ಕರುಣಾಳು ಕಾಯುತ್ತಾನೆ’ ಎಂದು ಅವರನ್ನು ನಮ್ಮ ಕಡೆಗೆ ಎಳೆಯಬೇಕು. ?

“ಇದುವರೆಗೂ ನೀನು ಗೆದ್ದಿರುವುದು ಹೇಗೆ?”

“ನಾವು ಗೆದ್ದಿಲ್ಲ. ಇಲ್ಲಿ ಸೋತಿದ್ದೇವೆ. ಈ ದೇಶದಲ್ಲಿ ಆಗಾಗ ಕ್ಷಾಮಗಳು ಬರುತ್ತವೆ. ಆಗ ನಮ್ಮಲ್ಲಿದ್ದ ಅನ್ನ ಕೊಡುತ್ತೇವೆಂದು ಗತಿಯಿಲ್ಲದವರು ಬಂದು ನಮ್ಮನ್ನು ಸೇರಿಕೊಂಡಿದ್ದಾರೆ. ಮತ್ತೊಂದು ವಿಶೇಷ, ರಾಜಕುಮಾರ, ಇಲ್ಲಿ ಬಂದು ನಮ್ಮ ಜೊತೆ ಸೇರಿದವರಿಗೆ ಅಕ್ಷರ ಬರದು ಆದರೆ ಅವರ ಶ್ರದ್ಧೆ ಬಹಳ ಭಾರಿ. ಅವರು ಪ್ರಾರ್ಥನೆ ಜಪಮಾಡುವ ಹಾಗೆ ನಾವು ಮಾಡಲಾರೆವು. ಅವರಿಗೆ ಅನ್ನ ನೀರು ಬಟ್ಟೆ ಬರೆ ಕೂಡ ಬೇಡ. ಕೈಸ್ತನೇ ಬಂದರೆ, ಮೊದಲು ಅವರಿಗೆ ಅನುಗ್ರಹ ಆಮೇಲೆ ನಮಗೆ. ಇಂತಹ ಕಡೆ ನಾವೇನು ಮಾಡೋದು?

“ಏನು ಮಾಡಬೇಕೆಂತೀರಿ ? ”

“ಒಂದೇ ದಾರಿ. ಕ್ರಿಶ್ಚಿರ್ಯ ಶಾಲೆ ಕಾಲೇಜು ಹೆಚ್ಚ ಬೇಕು. ಆಸ್ಪತ್ರೆ ಹೆಚ್ಚ ಬೇಕು. ಸರಕಾರ ಕ್ರಿಶ್ಚಿರ್ಯರಿಗೆ ಕೊಡುವುದರಲ್ಲಿ ಎಲ್ಲೋ ಅಲ್ಪ ನೇಟವ್ರಿಗೆ ಸಹಾಯ ಕೂಡಬೇಕು. ಇವರು ಬಹು ಕೃತಜ್ಞರು. ನಮ್ಮ ಚಾತುರ್ಯ ಇವರಿಗಿಲ್ಲ. ಉಪ್ಪು ಕೊಟ್ಟಿವನನ್ನು ಮುಪ್ಪಿನ ತನಕ ನೆನೆ ಎನ್ನುತ್ತಾರೆ. ಮಲಬಾರಿನಿಂದ ಬಂದ ಮಾಪಿಳ್ಳೆ ಮಲೆನಾಡಿನಲ್ಲಿ ಒಂದು ಬುಟ್ಟಿ ಮೀನು ತಂದು, ಒಂದು ಹೇರು ಅಡಿಕೆ, ಒಂದು ಹೇರು ಭತ್ತ ಕೊಂಡು ಹೋಗುತ್ತಾನೆ. ನಾವು ಹಾಗೆ ಮಾಡಬೇಕು.”

“ಆಗಲಿ, ನಾನು ವೈಸ್ ರಾಯರ ಹತ್ತಿರ ಮಾತನಾಡು ತ್ತೇನೆ. ನೀನು ಹೇಳುವುದು ಅವರ ಮನಸ್ಸಿಗೂ ಬಂದೀತು. ರೋಮನ್ನರಂತೆ ನಾವೂ ಒಡೆದು ಆಳಬೇಕು. ಕೈಬಿಚ್ಚಿದ್ದರೆ ಹಿಡಿತ ಕಮ್ಮಿ. ಹೌದು. ಹೇಳುತ್ತೇನೆ.”

“ಕೊನೆಯದಾಗಿ ಇನ್ನೊಂದು ಮಾತು ಹೇಳುತ್ತೇನೆ. ತಾವು ಹೇಗೆ ಗೆದ್ದಿರಿ ಎಂದು ಕೇಳಿದಿರಿ. ಗೋವಾದ್ದೊಂದು ಕಥೆ ತಮಗೆ ತಿಳಿದಿರ ಬೇಕು. ಅಲ್ಲಿ ಊರಿನವರೆಲ್ಲಾ ನೀರಿಗೆ ಬರುವ ಭಾವಿ ಒಂದಿದೆ. ಅಲ್ಲಿಗೆ ಒಂದು ದಿನಸ ಒಬ್ಬ ಪಾದ್ರಿಯು ಹೋಗಿ “ನನಗೆ ನಮ್ಮ ದೇವರ ಅಪ್ಪಣೆಯಾಗಿದೆ ಎಂದು ನಮ್ಮ ಗುರುಗಳು ನಿನ್ನೆ ಕನಸ್ಸಿನಲ್ಲಿ ಹೇಳಿದ್ದಾರೆ. ಇದೋ ಈ ಕ್ರಾಸ್ ಇದರಲ್ಲಿ ಹಾಕುತ್ತೇನೆ. ಇದು ಇನ್ನು ಮುಂದೆ ಶಿಲುಬೆಯತೀರ್ಥ. ಈ ತೀರ್ಥ ಸೇವಿಸಿದವರಿಗೆಲ್ಲಾ ಮೋಕ್ಷ. ಅವರೇ ಸನಾತನ ಕ್ರಿಸ್ತರು. ಜೈ ಗುರು ಕ್ರಿಸ್ತದೇವ!’ ಎಂದು ಒಂದು ಕ್ರಾಸನ್ನು ಆದರೊಳಕ್ಕೆ ಹಾಕಿಬಿಟ್ಟ. ಆಕಾಶದ ಕಡೆ ತಲೆಯೆತ್ತಿ ನೋಡಿ, ” ಭಗರ್ವಾ ಕ್ರಿಸ್ತದೇವನು ಮೋಡದಿಂದ ಇಳಿದು ಈ ತೀರ್ಥದಲ್ಲಿ ಸ್ನಾನಕ್ಕೆ ಬರುತ್ತಿದ್ದಾನೆ ನೋಡಿ. ನೋಡಿ.’ ಎಂದು ಆಟ ಕಟ್ಟಿದ. ಊರಿಗೆ ಊರೇ ಕ್ರಿಸ್ತವಾಗಿ ಹೋಯಿತು.”

“ಇಲ್ಲಿ ಜನ ಇಷ್ಟು ಲಘುಬುದ್ದಿಗಳೇ?” ರಾಜಕುಮಾರನೆಂದ.

“ರಾಜಕುಮಾರ, ಲಘು ಬುದ್ದಿಗಳಲ್ಲ. ಸರಳರು. ತಮ್ಮಂತೆಯೇ ಇತರರೂ ಸತ್ಯವಂತರು ಎಂದು ನಂಬುವ ಸಜ್ಜನರು. ಅಲ್ಲಿದೆ ನಮ್ಮ ಗೆಲುವು ?

“ಸರಿ ಸರಿ. ನಾನು ಅದರ ಸಂಪೂರ್ಣ ಪ್ರಯೋಜನ ಪಡೆಯ ಬೇಕು.*

“ಕೊನೆಯ ಮಾತು. ಇಲ್ಲಿ ಕ್ರಿಸ್ತನಾಗುವ ಒಬ್ಬೊಬ್ಬನೂ ಚರ್ಚ್ ಅಫ್ ಇಂಗ್ಲೆಂಡಿನ ಮೆಂಬರಾಗುತ್ತಾನೆ. ಹಾಗೆ ಆದವನ ಮೆಲೆ ನಮ್ಮ ಪೂರ್ಣ ಅಧಿಕಾರ. ಅವನು ಇಂಡಿಯ ಬಿಟ್ಟು ಇಂಗ್ಲೆಂಡಿನ ದಾಸನಾದವ. ಸಾಮ್ರಾಜ್ಯ ಸರಪಳಿಯ ಹೊಸಕೊಂಡಿ.”

ಬಿಷಪ್ಪರೇ ಅದು ಹುಸಿಕೊಂಡಿ. ನಿಜವಾದ ಸರಪಳಿ ಬ್ರಿಟಿಷ್ ಬಯೋನೆಟ್ಗಳು. ನಮ್ಮ ಐ. ಸಿ. ಯಸ್. ನ ಅಧಿಕಾರಿ ಗಳು. ಅದು ಸ್ವೀಲ್ ಫ್ರೇಂ. ಇರಲಿ. ತಮ್ಮ ಮಾತೂ ತೆಗೆಯ ತಕ್ಕದ್ದಲ್ಲ. ಹುಲ್ಲೂ ಬಿಡಬಾರಡು. ಮಾಡೋಣ.”

ಬಿಷಪ್ಪನು ತನ್ನ ಭೇಟ ಮುಗಿಸುವ ವೇಳೆಗೆ ಊಟದ ಹೊತ್ತಾ ಯಿತು. ಬಿಷಪ್ಪನು ಮಂಡಿಯೂರಿ ಪ್ರಾರ್ಥನೆಮಾಡಿ, “ದೇವರೇ! ನಮ್ಮ ಪ್ರಾರ್ಥನೆಯನ್ನು ಕೇಳು – ಮನ್ನಿಸು – ದಯಮಾಡು, ಇಂಡಿಯದ ನೆಲ ನಮ್ಮ ಕೈಗೆ ಸಿಕ್ಕಿದೆ. ಇಲ್ಲಿಯ ಜನ ನನ್ಮ ಕೈಗೆ ಸಿಕ್ಕುವಂತೆ ಮಾಡು. ಮೂವತ್ತು ಕೋಟ ಜನರು ಒಂದೇ ಕಂಠದಿಂದ ನಿನ್ನನ್ನು ಹಾಡಲಿ” ಎಂದು ಬೇಡಿಕೊಂಡನು.

ರಾಜಕುಮಾರನು “ಈ ಭರತಖಂಡದಲ್ಲಿ ಎಷ್ಟೋ ರಾಜ್ಯಗಳು, ಸಾಂರಾಜ್ಯಗಳು ಹುಟ್ಟಿವೆ, ಸತ್ತಿವೆ. ದೇವಾ! ಈ ಭೂಮಿಯಮೇಲೆ ಬ್ರಿಟಷ್ ಧ್ವಜವು ಯಾವಾಗಲೂ ಹಾರುತ್ತಿರುವಂತೆ ಕರುಣಿಸು” ಎಂದು ಹೇಳಿ ಊಟಕ್ಕೆ ಹೋದನು.

ಬಿಷಪ್ಪನೂ ಊಟಕ್ಕೆ ಬಂದನು. ಅಲ್ಲಿ ಗ್ರೇಸ್ ಹೇಳುವಾಗಲೂ ಬಿಷಪ್ಪನಿಗೆ ಅದೇ ಯೋಚನೆ. “ದೇವಾ ! ಅಪಾರವಾದ ನಿನ್ನ ಕರುಣೆ ನಮ್ಮನ್ನು ಯಾವಾಗಲೂ ರಕ್ಷಿಸಲಿ. ನಿನ್ನ ನಾಮವು ಎಲ್ಲರ ಬಾಯಲ್ಲೂ ಮೆರೆಯಲಿ. ನಿನ್ನ ಕೀರ್ತಿಯು ತಾನೇ ತಾನಾಗಲಿ, ನಿನ್ನ ಕೃಪೆಯು ಈ ಭೂಮಿಯನ್ನು ಕಾಪಾಡಲಿ” ಎಂದು ಸರ್ನಸಮ್ಮತವಾಗಿ ಹೇಳಿದರೂ, ಆತನ ಹೃದಯದಲ್ಲಿ ರಕ್ಷಿಸುವ ಕರುಣೆ ಎಂದಾಗ ಬ್ರಿಟಿಷ್ ವಾರ್ಷಿಪ್ಸ್ಗಳು ಗನ್ನುಗಳು, ನಿನ್ನ ನಾಮವು ಎಲ್ಲರ ಬಾಯಲ್ಲಿಯೂ ಮೆರೆಯಲಿ ಎಂದಾಗ ಕ್ರಿಶ್ಚಿರ್ಯ ಪ್ರಾರ್ಥನೆ, ನಿನ್ನ ಕೀರ್ತಿ ಎಂದಾಗ ಬ್ರಿಟಷ್ ಪ್ರತಿಷ್ಠೆ, ನಿನ್ನ ಕೃಪೆ ಎಂದಾಗ ಬ್ರಿಟಿಷ್ ಪ್ರಭುತ್ವ, ಎಂದೇ ಇತ್ತು ಎಂದು ಚಿತ್ರಗುಪ್ತನು ಬರೆದು ಕೊಂಡನಂತೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ನಿದ್ಧಿ
Next post ಆವಾಗೆ ತೀರ್‍ಸುನೋ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…