ಬದುಕು ಎಲ್ಲರದು ಬೆಳಕಾಗಲಿ
ಅವರ ಅಂತಃಕರಣ ಶುದ್ಧವಾಗಲಿ
ಹೃದಯ ಮಲೀನತೆ ಹೋಮ ಗೈಯಲಿ
ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ
ಕ್ಷಣದ ಬಾಳಿದು ನಶ್ವರ ಜೀವನ
ಈ ಜೀವನವೊಂದೇ ಸುವರ್‍ಣಾವಕಾಶ
ನರ ಜನುಮದಲಿ ನಾಮ ಸಂಕೀರ್‍ತನ ಗೈಯಲಿ
ಈ ಬಾಳಿನಲ್ಲೆ ಪಡೆಯಲಿ ಮುಕ್ತಿ ವಿಶೇಷ
ನಮ್ಮ ಲಕ್ಷವು ಹರಿದಿದೆ ಆನಂದದಲಿ
ಆದರೆ ಆನಂದದ ಅರಿವು ನಮಗಿಲ್ಲ
ಸುಣ್ಣದ ನೀರೆಲ್ಲ ಹಾಲೆಂದು ನಂಬಿದಂತೆ
ಅಲ್ಪ ಸುಖದನುಭೂತಿ ಆನಂದವಲ್ಲ
ಜನಿಸಿ ಬಂದಾಗ ಸುದೈವಕ್ಕೆ ಲಭಿಸಿತ್ತು ದೇಹ
ಮತ್ತೆ ತಿಳಿಯಿತು ನನ್ನವರೆಂಬುವ ಮೋಹ
ನಾನು ನನ್ನದೆಂಬ ಬರೀ ಅಹಂಕಾರ ದಾಹ
ಎಸುಗುತ್ತಿದ್ದೇವೆ ಆ ಪರಮಾತ್ಮನಿಗೆ ದ್ರೋಹ
ನಮ್ಮ ಜ್ಞಾನವೆಲ್ಲ ಕೇವಲ ಉಳಿದಿದೆ ಸ್ವಾರ್‍ಥಕ್ಕೆ
ಮತ್ತೆ ಆಸ್ತಿ ಅಂತಸ್ತುಗಳ ಗಳಿಕೆಯಲಿ
ಹೋಗುವಾಗ ಬಾರದು ಈ ಮಾನವ ದೇಹ
ಭಜಿಸು ಮಾಣಿಕ್ಯ ವಿಠಲನ ಸನ್ನಿದ್ಧಿಯಲಿ
*****