(ಸ್ವಾಮೇರಾ ಬೂಮಿಗೊಂದು ನೆನೆಯೋ)
ಸ್ವಾಮೇರಾ ಭೂಮಿಗೋಂದು ನೆನೆಯೋ
ಈ ಊರ ಗ್ರಾಮದೇವರ ನೆನೆಯೋ
ಸಾವನಾ ನಿನಗ್ಯಾಕಂದ ಚರಣಾ
ಕಾಲ್ಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರ ಕಟ್ಟಿ
ತೇರೋ ತೇರು ಹೂವಿನ ತೇರಾ
ಇಂಕರಾಯರ ಮನೆಗಾ ಬಂದರಿಬ್ಬರ ಕಣ್ಣೀರೂ
ಏನಂತೆ ಕಣ್ಣೀರೂ ದೇವ ಕಣ್ಣೀರೂ
ಹಾಳಬಿತ್ತು ಹಾಳೇ ಕೆಲಗೆ ಜೋಡಿಬಿತ್ತು ಬಯಲಲ್ಲೀ
ಉಳ್ಳಲ್ಲಿ ಬಾವೋರಾ ಬಿದ್ರು ಮೋಡ ಬಯಲಲ್ಲೀ
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.