(ಮೃದಂಗ ಹೊಡೆಯುವ ಆಲಾಪ)
ಶಾತಗಲ್ ಶಣ್ಣ ತಂಗಿ
‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’
‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’
‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || ೧ ||
‘ನಿಮ್ಮತ್ತೆಯೆಲ್ ಹೋಗಿದೆ?’
‘ಅತ್ತೆಹಿತ್ಲಗೆ ಹೋಗಿದು’
‘ಮಾವೆಲ್ ಹೋಗಿದ್ದ?’
‘ಮಾವ ಮಾಲ್ಕೆ ಹೋಗ್ಯ’
‘ಗಂಡೆಲ್ ಹೋಗಿನೇ?’
‘ದಂಡಿಗೆ ಹೋಗ್ಯ’ || ೨ ||
‘ಮೈದಯೆಲ್ ಹೋಗಿನೇ?’
‘ಮೈದ ಶೂಲ್ಗಾರ್‍ಕಿಗೆ ಹೋಗ್ಯ’
‘ನೀ ಬಶ್ರು ಯಾಕಂಡಿ? ಹೌದೆ?’
‘ನ ಬಶ್ರಂದಿ ನಿಂಗೆ ಯಾರೆ ಹೇಳಿದ್ದು’
‘ಕೊಟ್ಟಕ ಮನೆ ಕೋಲಿ ಹೇಳ್ತು’ || ೩ ||
‘ನಾ ಬಶ್ರಾಗಿದ್ರೆ ಕಾಗೆನ ಶೀರಿ ಉಡ್ತಿದೆ,
ಕಣ್ಗೆ ಕಪ್ಪ ಇಡ್ತಿದೆ
ನೆತ್ತಿ ತುಂಬ ಹೂಂಗೆ ಮುಡ್ಕಂತಿದೆ
ಗೆಜ್ಜೆ ಕಾಲ ಮಗ್ನ ಚಚ್ಕಂಡಿ
ಆಚೆಮನೆಗೆ ಈಚಿಮನೆಗೆ
ವೋಡಾಡ್ತ ಇರ್ತಿದ್ಯಯ್ಯಾ ತಂದೋನಾನ’ || ೪ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.