ಯೇ ಬಸವಾ ಬಸವನಂದಿರೇ ಬಸವನ
ಪಾದಕೆ ಸರಣನ್ನಿರೇ
ಮೇಲೆ ಮುತ್ತಿನ ಸರಿ (ರ) ಯೋ (ವೋ) ಅದು ನಮ್ಮ
ಕಡಲೇ ಪಾಂಡ್ಯದ ಬಸುವಾ || ೧ ||
ಯೇ ಕರಿಯ ಕೋಲು ಕದ್ದವನೇ ಜಾಣಾ
ಸುಗ್ಗಿಯ ಕೋಲ್ ಶಿವ ಭಕ್ತರಾಡೂ ಕೋಲೇ
ಹೂವಿನಾ ಕೋಲು ಹುಡಗರಾಡ್ವಾ ಕೋಲು
ರನ್ನದೂ ಕೋಲು ಶಣ್ಣ ಮಕ್ಕಳಾಡು ಕೋಲೂ || ೨ ||
ಅತ್ತೆ ಮನೆ ಬಾಗ್ಲಿಗೇ ಮುತ್ತೀನ ಬಾಚಿಂಗ
ಮುತ್ತು ವಂದು ಲಾಡೂ ಬಿಣಾ ಬಿಣಾ
ಬಾಗ್ಲಲ್ಲಿದ್ದಾ ಮುದ್ಕೀ ಯೇನ ನೋ ಡ್ತೇ
ಯೇನಲ್ಲೊ ಮೊಮ್ಮಗ್ನೆ ಕೋಲ್ ನೋಡ್ತೇ || ೩ ||
ಏ ಮೂಗಾಳಿ ಬಿನ ಬಿನ ಶೋಬಾಲೇ ತನ
ತನ ಸೋ ಬಿಗಾಲೇ ರಣದೊಳು ಬಿಣಾ ಬಿಣಾ || ೪ ||
ಕೋಲೂ ಕೋಲಾಟಾ ಮೇಲೇ ತೆಂಗಿನ ತೋಟಾ
ನಾರೀ ನಿನ್ನಾಟಾ ಪಡುಪಾಟಾ || ೫ ||
ಹಣಿ ಬಡ್ಗಿ ಕಾಯ್ ಬಡ್ಗಿ ವಂದೂ ಬಿಡಬೇಡೀ
ದೇವ ವಡ್ಯಾ ದೇವ್ರ ವಡತೀ ನಮ್ನೇ ನೋಡತ್ರೂ || ೬ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.