ಮಾಧವರಾಯನ ಕಾಗದವು ಮುಟ್ಟಿ ದಾಗ್ಗೆ ವಿಕಾರ್-ಉಲ್- ಮುಲ್‌ಕನು ಬೊಂಬಾಯಿನಲ್ಲಿದ್ದನು. ಅವನು ಆ ಕಾಗದವನ್ನು ನೋಡಿದೊಡನೆಯೆ ತನ್ನ ಕೆಲಸವನ್ನೆಲ್ಲಾ ಆದಷ್ಟು. ಬೇಗನೆ ಮುಗಿಸಿ ಕೊಂಡು ಹೈದರಾಬಾದಿಗೆ ಹಿಂದಿರುಗಿ ಅಲ್ಲಿನ ಪೋಲೀಸಿನವರೊಂದಿಗೆ ಮಾತಾಡಿ ಗಂಗಾರಾಮನೆಂಬೊಬ್ಬ ಪೋಲೀಸು ದರೋಗನನ್ನು ನಿರ್ಮಲಕ್ಕೆ ಕಳುಹಿಸಿಕೊಟ್ಟನು, ಗಂಗಾರಾಮನು ನಿರ್ಮಲವನ್ನು ಸೇರಿ, ಭಿಕ್ಷುಕನ ವೇಷದಿಂದ ಊರನ್ನೆಲ್ಲಾ ಸುತ್ತುತ್ತಿದ್ದನು, ಹೀಗೆ ಎರಡುದಿನ ಗಳಾದುವು, ಅವನಿಗೆ ತಿಳಿಯಬಂದಿರುವ ಕುರುಹುಗಳುಳ್ಳ ಮನುಷ್ಯ ನಾಗಲಿ ಹುಡುಗಿಯಾಗಲಿ ಎಲ್ಲಿಯೂ ಗೋಚರವಾಗಲಿಲ್ಲ. ಅನಂತರ ಬ್ರಾಹ್ಮ್ರಣರ ಮನೆಗಳಳ್ಲಲ್ಲಾ ವಿಚಾರಿಸಿ ನೋಡಿದನು. ಯಾರೂ ಶ್ರೀಧರರಾಯನೆಂಬ ಹೆಸರನ್ನು ಕೇಳಿದವರೇ ಇರಲಿಲ್ಲ. ಕೊನೆಗೆ ಬಹಳ ಬೇ ಸರಪಟ್ಟು ಒಂದು ಮುರುಕು ಮನೆಯ ಜಗುಲಿಯಮೇಲೆ ಕೂತು ಕೊಂಡು ಮುಂದಿನ ಕರ್ತವ್ಯವನ್ನು ಯೋಜಿಸುತ್ತಿದ್ದನು. ಆಗ ರಾತ್ರಿ ೮ಗಂಟೆಯ ಸಮಯ. ಅಕಸ್ಮಿಕವಾಗಿ ಆ ಮನೆಯೊಳಗಿನಿಂದ ನರಳುವ ಶಬ್ದವು ಕೇಳಿಬಂದಿತು. ಗಂಗಾರಾಮನು ಬೆಚ್ಚಿದನು. ಆ ಮನೆಯನ್ನು ನೋಡಿದರೆ. ಯಾರೂ ವಾಸಮಾಡುವಂತೆ ತೋರಲಿಲ್ಲ. ಬೀದಿಯ ಬಾಗಲಿಗೆ ಬೀಗವನ್ನು ಹಾಕಿದ್ದಿತು. ಮತ್ತು ಬಾಗಿಲ ಬಳಿ.ಸಾರಿಸಿ ರಂಗೋಲಿ ಹಾಕಿದ ಗುರುತೆ ಇರಲಿಲ್ಲ. ಗಂಗಾರಾಮನಿಗೆ ದೆವ್ವಭೂತ ಗಳ ಭಯವು ಲಶಮಾತ್ರವೂ ಇಲ್ಲದಿದ್ದರೂ ಆ ಸಮುಯದಲ್ಲಿ ಸ್ವಲ್ಪ ಭಯವುಂಟಾಗದೆ ಬಿಡಲಿಲ್ಲ. ಆದರೂ ಧೈರ್ಯವನ್ನು ತಂದುಕೊಂಡು, ಎದ್ದು ಬಾಗಿಲ ರಂಧ್ರಕ್ಕೆ ಕಿವಿಯನ್ಷಿ ಟ್ಟು ಕೊಂಡು ನಿಂತನು. . ನರಳು ವಿಕೆಯ ಶಬ್ದವು ಜೆನ್ನಾಗಿ ಕೇಳಿಬಂದಿತು. ಅನಂತರ ಗಟ್ಟಿಯಾಗಿ ಮಾತನಾಡುವ ಶಬ್ದವು ಕೇಳಿಸಿತು. ಹಾಗೆಯೆ ಬೈಗಳ ಪ್ರಾರಂಭ ವಾಯಿತು. “ಅಯ್ಯೊ ! ನೀನು ಹಾಳಾಗ ! ಎಣ್ಣೆಯನ್ನು ಸರಿ ಯಾಗಿ ನೀವೆ ! ಅಯ್ಯೊ! ಅಯ್ಯೊ ! ಹೋಯಿತಲ್ಲಪ್ಪ ? ಪ್ರಾ ಣವೇ ಹೋಯಿತು. ಇಂತಹ ಒರಟು ಹೆಣ್ಣನ್ನು ಕಟ್ಟಿ ಕೊಂಡುಬಂದೆ ನಲ್ಲಪ್ಪ. ಹಾ!ಹಾ! ಅಲ್ಲಿ ಬೇಡವೆ ! ಈ ಕಡೆ ನೀವೆ.! ಅಯ್ಯೊ ! ಈ ವಾಯು ಎಲ್ಲಿಂದ ಹಿಂದಿತಪ್ಪ. ನಾನು ಈ ಹೆಣ್ಣನ್ನು ಯಾವ ಘಳಿ ಗೆಯಲ್ಲಿ ಕರೆದುಕೊಂಡು ಬಂದೆನೊ! ಮಾರಿ ಬಂದಹಾಗೆ ಬಂದಳಲ್ಲ! ಪ್ರಾಣವೂ ಹೋಗುವುದಿಲ್ಲವಲ್ಲ[“ಎಂದು ಮುಂತಾಗಿ ನಾನಾಬಗೆಯ ಮಾತುಗಳು ಕೇಳಿ ಬಂದುವು. ಗಂಗಾರಾಮನು ಆ ಮನೆಯೊಳಗೆ ವಾತರೋಗವಪೀಡಿತನಾದ ಮನುಷ್ಯನೊಬ್ಬನೂ ಅವನ ಅನುಬಂಧಿ ಯಾದ ಹೆಂಗಸೊಬ್ಬಳೂ ಇರಬೇಕೆಂದು ಊಹಿಸಿದನು. ಆ ಹೆಂಗಸು ಹೊಸದಾಗಿ ಬಂದವಳಾಗಿರಬೇಕೆಂಬುದೂ ವ್ಯಕ್ತವಾಯಿತು. ಗಂ ಗಾರಾಮನು ಹುಡುಕುತ್ತಿದ್ದವರು ಇವರೇ ಆಗಿರಬಾರದೇತಕ್ಕೆ ? ” ಹೊರಬಾಗಲಿಗೆ ಬೀಗಹಾಕಿರುವುದನ್ನು ನೊ €ಡಿದರೆ ಇವರಿಗೆ ಸಂ ಬಂಧಪಟ್ಟವರು. ಇನ್ನೂ ಯಾರೋ ಇರಬೇಕೆಂದು ತೋರುತ್ತದೆ. ಈಮನೆಯ ಪೂರ್ವೋತ್ತರರವನ್ನೆ ಲ್ಲಾ ಚೆನ್ನಾಗಿ ವಿಚಾರಿಸಿಬಿಡೋಣ“ ಎಂದಂದುಕೊಂಡು ಎದುರುಮನೆಯ ಜಗುಲಿಮೇಲೆ ಒಂದು ಕಂಬಳಿ ಯನ್ನು ಹಾಸಿಕೊಂಡು ಎಚ್ಚರವಾಗಿ ಮಲಗಿದ್ದನು. ಎಷ್ಟು ಹೊತ್ತಾ ದರೂ ಯಾರೂ ಬರಲೇ ಇಲ್ಲ.ಫುನಃ ಆ ಮುರುಕು ಮನೆಯಬಾಗಿಲಿಗೆ ಕಿವಿಗೊಟ್ಟುಕೊಂಡು ನಿಂತನು. ಒಳಗೆ ನಿಶ್ಕಬ್ಬನಾಗಿತ್ತು. ರೋಗಿಗೆ ಸ್ವಲ್ಪನಿದ್ದೆ ಹತ್ತಿರಬಹುದೆಂದಂದು ಕೊಂಡು ತನ್ನ ಬಿಡಾರಕ್ಕೆ ಹೋದನು.
ಮಾರಣೆಯದಿನ ಬೆಳಗಾಗುವುದರೊಳಗಾಗಿ ಆ ಮುರುಕು ಮನೆಯು ಫೋಲೀನಿನವರಿಂದ ಸುತ್ತುವರಿಯಲ್ಪಟ್ಟಿತು ನಿರ್ಮಲದ ಪೋಲೀಸುದರೋಗನೂ ಗಂಗಾರಾಮನೂ ಬೀದಿಯಬಾಗಿಲ ಬಳಿ ನಿಂತುಕೊಂಡು ಕಮ್ಮಾರನ ಕೈಯಿಂದ ಉಪಾಯವಾಗಿ ಬೀಗವನ್ನು ತೆರೆಸಿ ಮೆತ್ತಗೆ ಒಳಗೆಹೋದರು.ರೋಗಿಯು ಹಾಸಿ ಗೆಯಮೇಲೆ ಬಿದ್ದಿ ದ್ದನು. ಒಬ್ಬಹುಡುಗಿಯು ಅವನಕಾಲುಗಳಿಗೆ ಶಾಖವನ್ನು ಕೊಡುತ್ತಾ ಕುಳಿತಿದ್ದಳು. ಮನೆಯೆಲ್ಲವೂ ಸ್ಮಶಾನಸದೃಶವಾಗಿದ್ದಿತು. . ಎಲ್ಲಿನೋ ಡಿದರೂ ಕಶ್ಮಲ, ದುರ್ವಾಸನೆ. ಶಾಖವನ್ನು ಕೊಡುವಾಗ್ಗೆ ರೋಗಿಯು ಹಾ!ಹಾ!.ಎಂದು ಆನಂದ ಪಡುತ್ತಿದ್ದವನು ಬೀದಿಯಬಾಗಿಲುಕಿರುಗು ಟ್ಟಿದ ಶಬ್ದವನ್ನು ಕೇಳಿದೊಡನೆಯೆ ಥಟ್ಟನೆ ಅತ್ತ ಕಡೆನೋಡಿದನು. ಯ ಮದೂತರಂತೆ ಇಬ್ಬರು ದೀರ್ಘಾಕಾರರಾದ ಪುರುಷರು ಗೋಚರವಾಗಲು . “ಈಗಲೀಗ ನಾನುಕೆಟ್ಟೆ” ಎಂದು ಎದೆಯನ್ನು ಬಡಿದು ಕೊಂಡು ಎದ್ದೋಡಲು ಪ್ರಯತ್ನ ಮಾಡಿದನು. ಆದರೆಸಾಧ್ಯವಾಗದೆ ನಿಶ್ಚೇಷ್ಟನಾಗಿ ಬಿದ್ದುಕೊಂಡನು. ಅಲ್ಲಿ ಕುಳಿತಿದ್ದ ಹುಡುಗಿಯೂ ಕಣ್ಣೀರುಸುರಿಸುತ್ತಾ ಜ್ಞಾನತಪ್ಪಿರವಳಂತೆ ಬಿದ್ದುಕೊಂಡಳು. ಗಂಗಾ ರಾಮನು ಥಟ್ಟನೆಅವಳಕಡೆಗೆ ಓಡಿ ಅವಳನ್ನೆತ್ತಿ ಕೊಂಡುಹೊರಗೆಸಿದ್ದ ವಾಗಿದ್ದ. ಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟನು. ಆ ರೋಗಿಯು ಮತ್ತೊಂದು ಗಾಡಿಯಲ್ಲಿ ಪೋಲೀಸು ಠಾಣೆಗೆ ಒಯ್ಯಲ್ಪ ಟ್ಟನು. ಅನಂತರ ಗಂಗಾರಾಮನೂ ನಿರ್ಮಲದ ದರೋಗನೂ ಪಂಚಾಯಿತದುರಿಗೆ ಮನೆಗೆ ಬೀಗವನು ಹಾಕಿ ಮೊಹರುಮಾಡಿ ಹು ಡುಗಿಯ ದೇಹಸ್ಥಿತಿಯನ್ನು ವಿಚಾರಿಸಲು ಆಸ್ಪತ್ರಗೆ ಹೋದರು. ಅಲ್ಲಿ ಆಕೆಯನ್ನು. ನೋಡಿ ಅವರಿಬ್ಬರಿಗೂ ಕಣ್ಣಿನಲ್ಲಿ ನೀರು ಸುರಿಯಲಾ ರಂಭಿಸಿತು. “ನಿನ್ನ ಹೆಸರೇನು ತಾಯಿ“ ಎಂದು ಗಂಗಾರಾಮನು ಕೇಳಿದುದಕ್ಕೆ ಅವಳು ಕೊಟ್ಟ ಉತ್ತರವು ಹೊರಗೆ ಕೇಳಿಸಲೇ ಇಲ್ಲ. ಅಷ್ಟರಲ್ಲಿಯೇ ಆಸ್ಪತ್ರೆಯ ಮುಖ್ಯಸ್ದನು ಅಲ್ಲಿಗೆ ಬಂದು, ಆ ಹುಡುಗಿಯ ದೇಹಸ್ಬಿತಿಯನ್ನು ನೋಡಿ , “ಈಕೆಯ ಪ್ರಾಣಕ್ಕೆ ಯಾರು ಬಾಧ್ಯರು?“ ಎಂದು ಗಂಗಾರಾಮನ ಕಡೆಗೆ ತಿರಿಗಿ ಶಿಟ್ಟ ನಿಂದ ಕೇಳಿದನು. ಅದಕ್ಕವನು ತಾನು ನಿರ್ಮಳಕ್ಕೆ ಬಂದಮೇಲೆ ನಡೆದ ಸಂಗತಿಯನ್ನೆಲ್ಲಾ ತಿಳಿಸಿದುದಕ್ಳೆ. ವೈದ್ಯನು, ” ಈಕೆಯನ್ನು ಅನ್ನಾ ಹಾರವಿಲ್ಲದೆ ಕೊಲ್ಲಬೇಕೆಂದು ಆ ನೀಚನು ಪ್ರಯತ್ನ ಪಟ್ಟಿರ ಬಹುದು. ಈಕೆಯು ಭೋಜನಮಾಡಿ ೪ ದಿನಗಳಮೇಲಾಗಿರಬೇಕು. ನಿದ್ರೆಯನ್ನು ಕಂಡು ಒಂದು ವಾರವಾಗಿರಬಹುದು. ಈಕೆಗೆ ಈಗ ಸರಿಯಾದ ಆಹಾರವೂ ಶುದ್ಧಾಂಗವಾಗಿ ವಿಶ್ರಾಂತಿಯೂ ಬೇಕಾ ಗಿದೆ. ಈಕೆ ಈ ರಾತ್ರಿಯವರೆಗೆ ಇದೇರೀತಿ .ಆ ಮನೆಯಲ್ಲಿದ್ದಿದ್ದರೆ ಇನ್ನು ಆಶೆಯೇ ಇರುತ್ತಿ ರಲಿಲ್ಲ. ಈಗ ಜೀವಕ್ಕೇನು ಭಯವಿಲ್ಲ. ಆ ನೀಚನನ್ನು. ಮಾತ್ರ ಬಿಡಬೇಡಿರಿ. ಅವನ ಮೇಲೆ ನನ್ನ ದೇ ಮುಖ್ಯವಾದ ` ಫಿರ್ಯಾದನ್ವಾ ಗಿಟ್ಸುಕೊಳ್ಳಿ“ ಎಂದು ಹೇಳಿ ಅವರನ್ನು . ಕಳುಹಿಸಿಕೊಟ್ಟನು.
ದರೋಗರಿಬ್ಬರೂ ಆಸ್ತತ್ರೆಯಿಂದ ಠಾಣೆಗೆಹೋದರು. ಅಲ್ಲಿ ವಾತರೋಗಿಯು ‘ಲಾಕಪ್ಪಿ’ ನ ಒಂದುಮೂಲೆಯಲ್ಲಿ ಕೂತು ಅಳು ತ್ತಿದ್ದನು. ಇವರನ್ನು ಕಂಡೊಡನೆಯೆ ದಂಡಪ್ರಣಾಮವನ್ನು ಮಾಡಿ, ” ಪ್ರಭೋ ! [ ನಾನು ಕೆಟ್ಟ ಪಾಪಿ. ನನಗೆ ಸ್ಫಲ್ಮವೂ ಕನಿಕರವನ್ನು ತೋರಿ ಸಬೇಡಿರಿ, ಆ ದೇವತಾಸ್ವರೂಪಳಾದ, ಮಾತೃ ಸದೃಶಳಾದ ಕನ್ನಿಕೆ ಯನ್ನು ಬಹಳವಾಗಿ ಕಷ್ಟಪಡಿಸಿದ್ದೇನೆ. ಆಕೆಯ ಮುಖಸಂದರ್ಶನ ವನ್ನುಮಾಡಿ, ಕ್ಷಮೆಯನ್ನು ಬೇಡುವುದಕ್ಕೆ ಒಂದಾವರ್ತಿ ಅವಕಾಶ ಕೊಟ್ಟರೆ ನಾನು. ಯೋಚನೆಯಿಲ್ಲದೆ ಪ್ರಾಣವನ್ನು ಬಿಡುತ್ತೇನೆ. ಸಾಧ್ಯವಾದರೆ ನಮ್ಮ ಯಜಮಾನರಾದ ಶಂಕರರಾಯರನ್ನೂ ನೋಡಬೇಕೆಂದು ಕುತೊಹಲವಿದೆ. ಇಷ್ಟನ್ನು ಮಾತ್ರ ನೆರವೇರಿಸಿ ಕೊಡಬೇಕು “ ಎಂದನು, ಗಂಗಾರಾಮನು, “ನೀನೇ ಆತ್ಮಾ ರಾಮನು ತಾನೆ ಈಚೆಗೆ ಶ್ರೀಧರರಾಯನಾದವನು?“ ಎಂದನು.
ರೋಗಿ- ನನ್ನ್ರನ್ನು ಎಷ್ಟು ತುಚ್ಛೀಕರಿಸಿ ಮಾತನಾ ಡಿದರೂ ನನ್ನ ತಪ್ಪಿತಕ್ಕೆ ತಕ್ಕಷ್ಟಾಗಲಾರದು. ಆ ಪರಮುನೀಚನು ನಾನೇ.
ಗಂಗಾ—ಆ ಹುಡುಗಿಯು ಸುಭದ್ರೆಯೊ !
ಆತ್ಮಾ ರಾಮು–ಹೌದು.
ಗಂಗಾ-ಆಕೆಗೆ ನೀನು ಕೊಟ್ಟಿರುವ ಕಷ್ಪರದಿಂದರುಂಟಾದ ರೋಗವು . ಇನ್ಯೂ . ಒಂದು ತಿಂಗಳ ಕಾಲಹಿಡಿಯುವದು. ಈಗ ಆಕೆಯನು ನೋಡಲಾರೆ.
ಆತ್ಮಾ – ಹಾಗಾದರೆ ಕಂಕರರಾಯರನ್ನಾ ದರೂ ದಯವಿಟ್ಟು ಬರಮಾಡಬೇಕು.
ಗಂಗಾ_ಅಗಲಿ ನೋಡೋಣ.
ಗಂಗಾರಾಮನು, ಸುಭದ್ರೆಯೂ ಆತ್ಮಾ ರಾಮನೂ ಸಿಕ್ಕಿದ ರೆಂದೂ ನಿರ್ಮಲದಲ್ಲಿಯೇ ಇರುವರೆಂದೂ, ಅಪ್ಪಣೆಯಾದಂತೆ ಮುಂದೆ ನಡೆಯುವುದಾಗಿಯೂ, ವಿಕಾರ್-ಉಲ್-ಮುಲ್ಲನಿಗೆ ತಂತೀವರ್ತಮಾನನನ್ನು ಕೊಟ್ಟನು.
*****
ಮುಂದುವರೆಯುವುದು