Home / ಕಥೆ / ಕಾದಂಬರಿ / ಸುಭದ್ರೆ – ೬

ಸುಭದ್ರೆ – ೬

ಮಾಧವನು ಕತ್ತಲೆಯಾಗುವುದಕ್ಕೆ ಮುಂಚೆಯೆ ಮನೆಗೆ ಬಂ ದನು. ಸುಭದ್ರೆಯು ಉಪಾಧ್ಯಾಯೆಯ ಮನೆಯಿಂದ ಆಗತಾನೆ ಹೊರಕ್ವೆ ಬರುತ್ತಿದ್ದಳು. ಅವಳು ತಲೆಬಾಗಿಲ ಬಳಿ ಬರುವ ಹೊತ್ತಿಗೆ ಸರಿಯಾಗಿ ಮಾಧವನ್ನು ಎದುರಿಗೆ ಬಂದನು. . ಇವರಬ್ಬರ ನೋಟಗಳೂ ಸಂಧಿಸಿದುವು. ಸುಭದ್ರೆ ಲಜ್ಜೆಯಿಂದ ಕೆಂಪೇರಿದಮುಖ ವುಳ್ಳವಳಾಗಿ ತಲೆಯನ್ನು ತಗ್ಗಿ ಸಿಕೊಂಡು ಹೊರಟು ಹೋದಳು . ಅವಳ ಹೃದಯವು ಅನಿರ್ವಚನೀಯವಾದ ಆನಂದದಿಂದ ಪರಿಪೂ ರ್ಣವಾಗಿದ್ದಿತು.

ಮಾಧವನೂ ಏನೋ ಯೋಚಿಸುತ್ತಾ ಮನೆಯೊಳಕ್ಕೆ ಹೋದನು. . ಗಂಗಾಬಾಯಿ– “ಏನಪ್ಪಾ ಸಮಾಚಾರ ? ಏನೇನು ಕಾರುಬಾರು . ಮಾಡಿಕೊಂಡು . ಬಂದೆ ? ” . ಎಂದು ಕೇಳಿದಳು. ಮಾಧವನು ಅಲ್ಲಿ ನಡೆದ ವೃತ್ತಾಂತವನ್ನೆ ಲ್ಲಾ ಹೇಳಿದನು.

ಗಂಗಾಬಾಯಿ–ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವೇನು?

ಮಾಧವ– ಅದು ಹಾಗಿರಲಿ, ದಿನ ನಿನ್ನ ಬಳಿ ಕುಳಿ ತುಕೊಂಡು ಅಳುತ್ತಿದ್ದ . ಹುಡುಗಿಗೆ ಯಾವಾಗ ಮದುವೆಯಂತೆ ?

ಗಂಗಾ–ಇನ್ನೇನು ಹತ್ತಿರಕ್ಕೆ ಬಂದಿತು.

ಮಾಧವ– ಅದನ್ನು ತಪ್ಪಿ ಸುವುದಕ್ಕಾಗುವುದಿಲ್ಲವೆ?

ಗಂಗಾ_-ತಪ್ಸಿ ಸಿ ಆಗುವುದೇನು? ಅವಳಿಗಂತೂ ಮದುವೆ ಯಾಗಲೇ ಬೇಕಷ್ಟೆ,

ಮಾಧವ—ಆದರೆ ಮುದುಕನಿಗೆ ಕೊಡುವುದೆ ?

ಗಂಗಾ_–ಮಾಡುವುದೇನು ? ಬೇರೆ ವರನೆಲ್ಲಿ ಸಿಕ್ಕುವನು ?

ಮಾಧವ__ಅಷ್ಟು ಚೆಲುವೆಯಾದ ಹುಡುಗಿಗೆ ವರನು ಸಿಕ್ಕು ವುದಿಲ್ಲವೆ?

ಗಂಗಾ— ಈಗಿನ ಕಾಲದಲ್ಲಿ ವರದಕ್ಷಿಣೆ ಮುಖ್ಯುವಲ್ಲದೆ ರೂಪವಾಗಲಿ, ಗುಣವಾಗಲಿ, ಕುಲೀನತೆಯಾಗಲಿ ಗಣನೆಗೆ ಬರುವುದಿಲ್ಲ.

ಮಾಧವ-ಅವಳಿಗೆ ವರದಕ್ಷಿಣೆಯನ್ನು ವರ ನನ್ನು ಹುಡುಕಿಕೊಡಲಾರೆಯಾ ?

ಗಂಗಾ– (ಮಾಧವನ ಮುಖವನ್ನು ಚೆನ್ನಾ ಗಿ ನೋಡಿ ನಗುತ್ತ) ನೀನು ಮನಸ್ಸುಮಾಡಿದರಾಗುತ್ತದೆ.

ಮಾಧವ__ನಾನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡೇ ಇದ್ದೇನೆ

ಗಂಗಾ–ಏನೆಂದು ?

ಮಾಧವ- ಆ ಹುಡುಗಿಗೆ ನಾನೇ ವರನಾಗುವೆನೆಂದು.

ಗಂಗಾ–ಇದು ಬರಿಯಮಾತು.

ಮಾಧವ __ಎಂದಿಗೂಅಲ್ಲ. ನೀನುಮಾತ್ರ ಈಮದುವೆಯನ್ನು ನಿಲ್ಲಿಸಿದರೆ ಈಶ್ವರಸಾಕ್ಷಿ ಯಾಗಿಯೂ ನಾನು ಅವಳನ್ನ ಲ್ಲದೆಬೇರೊಬ್ಬರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ.

ಗಂಗಾ_ಹಾಗೆ ಪ್ರತಿಜ್ಞೆ ಮಾಡಬೇಡ. ನಿನ್ನ ಅಂತಸ್ತಿಗೂ ಅವಳ ಅಂತಸ್ತಿಗೂ ಬಲು ದೂರವಿರುವದು, ಅಲ್ಲದೆ ನಿಮ್ಮ ತಂದೆಯವರಅಭಿಪ್ರಾಯವನ್ನು ಕೇಳಬೇಡವೆ

ಮಾಧವ.–ಅವರು ನನಗೆ ಈವಿಚಾರದಲ್ಲಿ ಸ್ವಾತಂತ್ರ್ಯವನ್ನು ಕೊಟ್ಟಿರುವರಲ್ಲ

ಗಂಗಾ_ ಅವರು. ನಿನಗೆ ಅಷ್ಟೊಂದು ಸ್ನಾತಂತ್ರ್ಯವನ್ನು ಕೊಟ್ಟಿಲ್ಲ. ಕುಲಗೋತ್ರ ಮುಂತಾದುವು ಗಳನ್ನು ಅವರು ಒಪ್ಪಬೇಕು.

ಮಾಧವ__ನಾನಂತೂ ಪ್ರತಿಜ್ಞೆ ಮಾಡಿಬಿಟ್ಟೆ. ಇನ್ನು ನನ್ನ ಜೀವವಿರು ವವರಿಗೂ ಅದಕ್ಕೆ ತಪ್ಪಲಾರೆ.

ಗಂಗಾಬಾಯಿಯು ಸುಮ್ಮನಾದಳು. ಅತ್ತ ಸುಭದ್ರೆಯು ಮನೆಯನ್ಪು ಸೇರಿದಮೇಲೆ ಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತಳು. ಪುಸ್ತಕವನ್ನು ನೋಡಲಿ, ಆಕಾಶವನ್ನು ನೋಡಲಿ,ಗೋಡೆಯನ್ನು ನೋಡಲಿ, ಒಂದೇರೂಪವಾಗಿ ಕಾಣುತ್ತಿದ್ದಿತು. ಎಲ್ಲಿ ನೋಡಿದರೂ ಆಪರಮಸುಂದರವಾದ ಮುಖ!

ಆನಂತರ ಊಟಕ್ಕೆ ಕುಳಿತಾಗ್ಗೆ ರಮಾಬಾಯಿ ಗಂಡನೊಡನೆ “ರಾಮರಾಯರ ಮನೆಯಲ್ಲಿಮಗಳಿಗೆ ಮದುವೆಯಂತೆ, ಕೇಳಿದಿರಾ?“ ಎಂದಳು.

ವಿಶ್ವನಾಥ__-ನನಗೆ ತಿಳಿದಿರಲಿಲ್ಲ ವರನು ಯಾರು ?

ರಮಾಬಾಯಿ-~ ಪುನಹೆ ಶಂಕರರಾಯರಮಗ ನಂತೆ, ಆ ಹುಡುಗನೂ ಇಲ್ಲಿ. ಬಂದು ಗಂಗಾಬಾಯ ಮ್ಮನವರ ಮ ನೆಯಲ್ಲಿಳಿದಿದ್ದಾನಂತೆ.

ವಿಶ್ವ—ಗಂಗಾಬಾಯಿಯ ಅಕ್ಕನನ್ನೆ ಶಂಕರರಾಯರಿಗೆಕೊ ಟ್ಟಿದುದು. ಅದುದರಿಂದ ಅಲ್ಲಿಗೆ ಬಂದಿರಬಹುದು.

ಸುಭಿದ್ರೆಯು ಒಂದು ತುತ್ತನ್ನು ಬಾಯಿಹತ್ತಿರ ತೆಗೆದು ಕೊಂಡು ಹೋಗಿದ್ದವಳು ಈ ಮಾತು ಕೇಳುತ್ತಲೆ ಚಮಕಿತಳಾಗಿ ಕೆಳಕ್ಕೆ ಬಿಟ್ಟು ಬಿಟ್ಟ್ಗಳು ?

ವಿಶ್ವ-~-ಲಗ್ನ ಯಾವಾಗಲೊ ?

ರಮಾ ___ಕೂಡಲೆ ಆಗಬಹುದು .

ಅಲ್ಲಿಗೆ ಮಾತು ನಿಂತಿತು. ಸುಭದ್ರೆಯಮನಸ್ಸು ವಿಕಾರವನ್ನು ಹೊಂದಿತು. ಅವಳು ತನ್ಮೊಳಗೆತಾನೆ__”ಇದೇನಾಶ್ಚರ್ಯ ? ಕಮ ಲೆಗೆ ಮದುವೆಯಾದರೆ ನನಗೇನು ಸಂಕಟ?” ಎಂದಂದುಕೊಂಡಳು . ಆದರೂ. ಮನಸ್ಸಿನ ವಿಷಾದವು ಹೋಗಲಿಲ್ಲ. ಊಟವು ರುಚಿಸಲಿಲ್ಲ ರಾತ್ರಿ ನಿದ್ರೆಯೂಬರಲಿಲ್ಲ, ಒಂದು ಸಲ ” ಅಯ್ಯೋ! ಹುಚ್ಚ ಳೆ! ನಿನಗೇತಕ್ಕೆ ಬರಿಯಾಸೆ? ತಿಕುಕನು ಕನಸು ಕಂಡಹಾಗೆಯಾವುದೊ ಒಂದು ಉತ್ಕೃಷ್ಟ ಪದಾರ್ಥವನ್ನು ನೆನಸಿಕೊಂಡ ಮಾತ್ರಕ್ಕೆ ನಿನಗೆ ಸಿಕ್ಕಿ ಬಿಡುವುದೆ? ಏತಕ್ಕೆ ವೃಥಾಮನಃಕ್ಲೇಶ“ ಎಂದು ತನ್ನನ್ನು ತಾನೆ ಬೈದುಕೊಳ್ಳುವಳು. ಉತ್ತರ ಕ್ಷಣದಲ್ಲಿಯೇ ಆ ಪ್ರೇಮಪೂರಿತ ವಾದ ವಿಶಾಲನೇತ್ರಗಳೊ ? ಆ ಮಂದಹಾಸಯುಕ್ತವಾದ ಮುಖವೂ? ಇವುಗಳನ್ನು ನಾನು ನೋಡಿದುದು ಸುಳ್ಳೆ “? ಎಂದು ಸಮಾಧಾನಮಾಡಿಕೊಳ್ಳುವಳು. ಹೀಗೆ ಒಂದು. ರಾತ್ರಿಯನ್ನು ಒಂದು ಯುಗವಾಗಿ ಕಳೆದಳು .
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...