ಪರಮ ಪರಮಾನಂದ ಪರಿಮಳ
ಲಕ್ಷ ಪಕ್ಷಿಯ ನಗಿಸಿದೆ
ಅಂತರಂಗದಿ ವಿಶ್ವರಂಗದ
ರಂಗವಲ್ಲಿಯ ಬರೆದಿದೆ
ನಗೆ ವಿಮಾನದ ಗಗನ ತುಂಬಿದೆ
ಮುಗಿಲು ಮಲ್ಲಿಗೆ ಸುರಿದಿದೆ
ದೂರ ಬೆಟ್ಟದ ಶಿಖರ ಕನ್ನಡಿ
ಪ್ರೇಮ ಕರ್‍ಪುರ ಬೆಳಗಿದೆ
ತಾಯ ಕಣ್ಣಿನ ಕೊಳವು ಶೀತಲ
ಹಂಸೆಯಾಗಿ ತೇಲಿದೆ
ಜಲತರಂಗದಿ ಅಂತರಂಗವು
ಸಪ್ತ ಮಾತ್ರೆಯ ನುಡಿಸಿದೆ
ಕಂಠ ಕೊಳಲು ಮಾತು ಅಕ್ಕರೆ
ಪ್ರೀತಿ ಸಕ್ಕರೆ ಸುರಿದಿದೆ
ಕಂಪು ತುಂಬಿದೆ ತಂಪು ತುಳುಕಿದೆ
ಇಂಪು ಗಾನವ ತೂರಿದೆ
*****