‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು.
ಮನೆಯಲ್ಲಿ ಅನಕ್ಷರತೆ, ಬಡತನ, ಮೂಢನಂಬಿಕೆ, ಕಾಯ್ದೆ, ಕಾನೂನು, ಗೊತ್ತಿಲ್ಲದೆ ಇರುವುದರಿಂದ, ಅಜ್ಜ ಅಜ್ಜಿಯರ ಒತ್ತಾಯದ ಮೇರೆಗೆ ಹೆಣ್ಣುಮಕ್ಕಳು ಮದುವೆಯಾದರೆ ಸುರಕ್ಷಿತವೆಂದು ಭಾವಿಸಿರುವುದು; ಬೇಗ ಮದುವೆಯಾದರೆ ಬೇಗ ಮಕ್ಕಳಾದರೆ ಭವಿಷ್ಯ ಉತ್ತಮವಿರುವುದೆಂದು, ಮದುವೆ ಖರ್ಚು ಉಳಿಸಲು ಐದಾರು ಜನರನ್ನು ಒಟ್ಟಿಗೆ ಸೇರಿಸಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಉದ್ದೇಶದಿಂದ ಬಾಲ್ಯ ವಿವಾಹಗಳು ಹಳ್ಳಿಗಳಲ್ಲಿ ಹಿಂದುಳಿದ ಬಡ ಕುಟುಂಬಗಳಲ್ಲಿ ಜಾಸ್ತಿ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ೧೦ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಲಬುರ್‍ಗಿಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ದಾಖಲಾಗಿವೆ. ಪ್ರಪ್ರಥಮ ಸ್ಥಾನದಲ್ಲಿ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ಗುಟ್ಟಾಗಿ ಬಾಲ್ಯ ವಿವಾಹಗಳು ಜರುಗುತ್ತಿವೆ.
ಕಲಬುರ್‍ಗಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೪೧% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೨೮.೫%
ಉಡುಪಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೨.೪% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೧.೩%ಕ್ಕೆ ಕುಸಿದಿವೆ.
ಬಾಲ್ಯ ವಿವಾಹದ ಪ್ರಮಾಣವು ೨೦೦೭-೨೦೦೮ನೆಯ ಸಾಲಿಗಿಂತ ೨೦೧೨-೨೦೧೩ನೆಯ ಸಾಲಿನಲ್ಲಿ ಒಟ್ಟು ಶೇಕಡಾ ೮.೩% ರಷ್ಟು ಕುಸಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹದ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆಯೆಂದು (ಡಿಎಲ್‌ಎಚ್‌ಎಸ್) ಕೇ.ಸಾ.ಇ. ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆಯು ಗಮನಾರ್‍ಹವಾದ ಅಂಶಗಳನ್ನು ಬಯಲಿಗೆಳೆದಿದೆ.
ಆದ್ದರಿಂದ ಮುದ್ದಾದ ಮಕ್ಕಳೆ… ತಂದೆ-ತಾಯಿ, ಅಜ್ಜ-ಅಜ್ಜಿ, ಅಕ್ಕ-ಅಣ್ಣಂದಿರಿಗೆ ಕಾನೂನು ಅರಿವು ಮಾಡಿಸಬೇಕು. ಬಾಲ್ಯವಿವಾಹ ಅಪರಾಧ ತಪ್ಪು, ಅಪಾಯ ಅವಮಾನವೆಂದು ತಿಳಿಸಿ ಹೇಳಿ ಅವರ ಮನ ಗೆಲ್ಲ ಬೇಕು. ಬಾಲ್ಯ ವಿವಾಹಗಳು ಎಲ್ಲೇ ಜರುಗಲಿ ಎಲ್ಲರೂ ಒಟ್ಟಾಗಿ ಸೇರಿ ತಡೆಯಬೇಕು.
*****