ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ
ಮನೆಗೆ ಓಡಿ ಬಂದ

ಪುಸ್ತಕದ ಚೀಲವನಿಟ್ಟು
ಹಿಡಿದನು ಕ್ರಿಕೆಟ್ಟು ಬ್ಯಾಟು
ಕಿಟ್ಟುವನ್ನು ಕೂಗಿ ಕರೆದ
ಮೈದಾನದ ಕಡೆಗೆ ನಡೆದ

ಮನದಣಿ ಆಟವನಾಡಿ
ಮತ್ತೆ ಇಬ್ಬರು ಜೊತೆಗೂಡಿ
ಬೀದಿಯಲ್ಲಿ ಬರುತಿರಲು
ಹರಡಿತ್ತು ನಸುಗತ್ತಲು

ಬೀದಿಯ ನಾಯಿಯೊಂದು
ಇವರನು ಕಚ್ಚಲಿಕೆಂದು
ಓಡಿ ಬಂದಿತು ಇವರತ್ತ
ಕಿಟ್ಟು ಅಲ್ಲಿಂದ ಕಂಬಿ ಕಿತ್ತ

ಮುಟ್ಟುಗೆ ಹೆದರಿಕೆಯಾಯ್ತು
ಹಂಚಿಕೆಯೊಂದು ಹೊಳೆಯಿತು
ಬೇಗನೆ ಶರ್ಟನು ಬಿಚ್ಚಿದನು
ಬಲಗೈಯಿಗೆ ಸುತ್ತಿಕೊಂಡನು

ಮಂಡೆಯೂರುತ ಕುಳಿತನು
ಬಲಗೈ ಬಾಯಿಗೆ ಕೊಟ್ಟನು
ಕಚ್ಚಲು ಆಗದ ನಾಯಿಯು
ಕಿಟ್ಟು ಬಿಟ್ಟು ಓಡೋಯ್ತು

ಪುಟ್ಟು ಬುದ್ಧಿಯ ನೋಡಿದ ಜನ
ಕೊಟ್ಟರು ಶಹಾಭಾಶ್‌ಗಿರಿಯನ್ನು
ಪುಟ್ಟ ಕಿಟ್ಟು ಹತ್ತಿರ ಬಂದನು
ಸಾರಿ ಕಿಟ್ಟು ಎಂದೆಂದನು

ಜೀವದ ಗೆಳೆಯ ನೀನಲ್ಲ
ನಿನ್ನ ಸಹವಾಸ ಬೇಕಿಲ್ಲ
ಕಿಟ್ಟು ಕೋಪದಿ ನುಡಿದನು
ತನ್ನ ಮನೆಯನ್ನು ಸೇರಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಒಲವು
Next post ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…