ರಂಗನ ನಾಯಿ ಮರಿ

ನಾಯಿ ಮರಿಯನೊಂದ
ರಂಗನು ಕೊಂಡು ತಂದ

ಟಾಮಿ ಅದರ ಹೆಸರು
ಅದುವೆ ಅವನ ಉಸಿರು
ಮೂರೂ ಹೊತ್ತು ಹಾಲು
ಝೂಲು ಝೂಲು ಕೂದಲು

ನಿತ್ಯ ಸೋಪಿನ ಸ್ನಾನ
ಶುಭ್ರ ಬಿಳಿ ಬಟ್ಟೆ ಥಾನು
ಬೆಳೆದು ದೊಡ್ಡದಾಯಿತು
ಅವನ ರಕ್ಷಕನಾಯಿತು

ರಂಗ ಕರೆದರೆ ಮಾತ್ರ
ಬರುತ್ತಿತ್ತು ಓಡುತ್ತ
ಆಟದ ಸಮಯದ ಆಟ
ಉಳಿದಂತಿರಲಿಲ್ಲ ಕಾಟ

ಮನೆಯಂಗಳದಿ ಟಾಮಿ
ಕದಿಯಲು ಬಂದ ಸೋಮಿ
ಭೌ ಭೌ ಎಂದು ಕಚ್ಚಲು
ಅಯ್ಯೋ ಎನ್ನುತ ಓಡಲು

ಗಲಾಟೆ ಅದೇನೆಂದು
ರಂಗ ಹೊರಗೆ ಬಂದು
ವಿಷಯ ತಿಳಿದುಕೊಂಡ
ಪ್ರೀತಿಲೆ ಎತ್ತಿಕೊಂಡ

ಟಾಮಿಗೆ ಕೊಟ್ಟ ಮುತ್ತು
ಅದಕೆ ಆಜ್ಞೆ ಇತ್ತ
ಕಳ್ಳರು ಬಂದರೆ ಕಚ್ಚು
ಮಿತ್ರರನ್ನೆಲ್ಲ ಮೆಚ್ಚು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿಯ ಒಲವು
Next post ದೇವಾಲಯ ಸಂಸ್ಕೃತಿಯ ಬಹುಮುಖಿ ಆಯಾಮಗಳು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…