ಪೂರ್‍ಣತೆ

ನೀಲವರ್‍ಣದ ಮುಗಿಲು ಮೋಡಗಳ ಸುಳಿಯಿಲ್ಲ
ತಿಳಿಬೈಲು ಸೊಗಸು
ನಾಲ್ದೆಸೆಗೆ ಹಸರು ಕುಸುರಿನ ಧರಣಿ ಕಣ್ತುಂಬ
ಕಂಡರಳಿ ಮನಸು

ಸ್ವರದೆಗೆದು ಹಾಡಿದೆನು ಸ್ವರವೇರಿ ಸುಳಿಯುತಿದೆ
ಗಿರಿಗಗನದಲ್ಲಿ
ಗಿರಿಯ ಶಿಖರದ ಮೇಲೆ ನಿಂತಿರುವೆ ಅರಳುತಿವೆ
ಮಲ್ಲಿಗೆಯು ಅಲ್ಲಿ

ಕೇಳುತಿದೆ ಅಲ್ಲೊಂದು ನಾದ ಗಗನಾಂಗಣದ
ಕೊನೆದಂಡೆಯಲ್ಲಿ
ಕೇಳಿದೆನು ಕಿವಿಗೊಟ್ಟು ಮನಸಿಟ್ಟು ಬಗೆನೆಟ್ಟು
ಹಿರಿಯಾಶೆಯಲ್ಲಿ

ನೆನೆನೆನೆದು ತಿರುತಿರುಗಿ ನಾದನಾವೀನ್ಯವನು
ಬಲು ಬೆರಗುಗೊಂಡು
ಮನಮರುಗಿ ಹರಿಯುತಿದೆ ಬೆರೆಯಬೇಕೆಂಬಾಸೆ
ಒಳಗುಕ್ಕಿ ಬಂದು

ಗಿರಿಯಲ್ಲಿ ಝರಿಯಲ್ಲಿ ದರಿಯಲ್ಲಿ ತುಳುಕುತಿದೆ
ಸುಳಿಗಾಳಿಯಲ್ಲಿ
ಧರೆಯೆಲ್ಲ ತೇಲುತಿದೆ ಮಿದುವಾಗಿ ಅಲೆದಲೆದು
ಆ ನಾದದಲ್ಲಿ

ಹೃದಯಮಂಟಪದಿಂದ ಹಾರುತೇರಿತು ಮೇಲೆ
ಹಿರಿಯಕ್ಕಿಯೊಂದು
ಮದವೇರಿ ಮೈಮರೆದು ತೂರನೆಗೆಯಿತು ವಿರಹ
ನೆರೆ ಉಕ್ಕಿ ಬಂದು

ಬಹುದಿನದ ಅಗಲಿಕೆಯ ಅಂತರವು ತಾನಳಿದು
ಸಲೆಮಾಯವಾಯ್ತು
ಬಹುಕಾಲದಾ ಆಸೆ ಹೊಮ್ಮಿ ಹೊಂದಿಕೆಗೂಡಿ
ಪರಿಪೂರ್‍ಣವಾಯ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣೇಶ ಬಾರೋ
Next post ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ”

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…